
ಕಲಬುರಗಿ,ಡಿ.18: ಕಳೆದ ವರ್ಷದಂತೆ ಈ ವರ್ಷವೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಪಿಜಿ ಕೋರ್ಸುಗಳಿಗೆ ಸಿಯುಇಟಿ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಹಲವು ಸ್ನಾತಕೋತ್ತÀ್ತರ ಕೋಸ್ರ್Àಗಳಿಗಾಗಿ (ಬಿಎಡ್ ಕೋಸ್ರ್À ಒಳಗೊಂಡಂತೆ) ಪ್ರವೇಶ ನೀಡುತ್ತಿದೆ.
ಎಂ.ಎ ಇಂಗ್ಲಿಷ್, ಹಿಂದಿ, ಕನ್ನಡ, ಭಾಷಾಶಾಸ್ತ್ರ, ಜಾನಪದ ಮತ್ತು ಬುಡಕಟ್ಟುಅಧ್ಯಯನ, ಅರ್ಥಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ – ಒಟ್ಟು ಸೀಟುಗಳು 30
ಎಂ.ಕಾಂ-30,ಎಂ.ಬಿ.ಎ- 60,ಎಂ.ಬಿ.ಎ ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ- 30,
ಎಂ.ಎಸ್ಸಿ. ಮನೋವಿಜ್ಞಾನ -40,ಸಮಾಜಕಾರ್ಯ-30,ಎಂ.ಎಸ್ಸಿ. ಅನ್ವಯಿಕ ಭೂಗೋಳ ಮತ್ತು ಜಿಯೋ ಇನ್ಫಮ್ರ್ಯಾಟಿಕ್ಸ್-30,ಎಂ.ಎಸ್ಸಿ. ಅನ್ವಯಿಕ ಭೂವಿಜ್ಞಾನ-30,ಎಂ.ಸಿ.ಎ 60,ಎಂ.ಎಸ್ಸಿ. ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವ ವಿಜ್ಞಾನ-30,ಎಂ.ಟೆಕ್ ಪವರ್ ಅಂಡ್‍ಎನರ್ಜಿ ಇಂಜಿನಿಯರಿಂಗ್-18,ಎಂ.ಟೆಕ್‍ಅರ್‍ಎಫ್& ಮೈಕ್ರೋವೇವ್‍ಇಂಜಿನಿಯರಿಂಗ್-18,ಎಲ್.ಎಲ್.ಎಂ-30,ಬಿ.ಎಡ್-50,ಎಂ. ಎಡ್-50,ಎಂಪಿಎ ಹಿಂಸ್ತುಸ್ಥಾನಿ ಗಾಯನ-10,ಎಂಪಿಎ ಇನ್‍ಸ್ಟ್ರುಮೆಂಟಲ್ (ಹಿಂದುಸ್ಥಾನಿ ತಬಲಾ) -10,ಮಾಸ್ಟರ್ ಆಫ್ ವಿಸುವಲ್ ಆಟ್ರ್ಸ (ಪೆಂಟಿಂಗ್)-10,ಎಂ.ಕಾಂ (ಬ್ಯಾಂಕಿಂಗ್ ಮತ್ತು ಹಣಕಾಸು ತಂತ್ರಜ್ಞಾನ)-30,ಹೊಸ ಕೋರ್ಸಗಳು-ಎಂಎಸ್ಸಿ ಜೆನೆಟಿಕ್ಸ್ ಮತ್ತು ಜೀನೋಮಿಕ್- 20,ಎಂಎಸ್ಸಿ ಸಸ್ಯಶಾಸ್ತ್ರ-30,
ಎಂಎಸ್ಸಿ ಪ್ರಾಣಿಶಾಸ್ತ್ರ-30,ಎಂಎಸ್ಸಿ ಮಾಹಿತಿ ಮತ್ತು ಗ್ರಂಥಾಲಯ ವಿಜ್ಞಾನ-30,ಎಂ. ಟೆಕ್ ಎಐ ಮತ್ತು ಎಂಎಲ್-24 ಮತ್ತು ಎಂಎಸ್ಸಿ ಅಂಕಿಅಂಶಗಳು ಮತ್ತು ದತ್ತಾಂಶ ವಿಶ್ಲೇಷಣೆ-30 ಸೀಟುಗಳು ಲಭ್ಯ ಇವೆ ಎಂದು ವಿವರಿಸಿದರು
ಪ್ರವೇಶವನ್ನು ಸಿಯುಇಟಿ ಪರೀಕ್ಷೆಯ ಮೂಲಕ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಡಿಸೆಂಬರ 14 ರಿಂದ ಪ್ರಾರಂಭವಾಗಿದೆ. ಸ್ನಾತಕ ಅಂತಿಮ ಸೆಮೆಸ್ಟರನಲ್ಲಿ ಓದುತ್ತಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ಆಸಕ್ತ ಅರ್ಹವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಗಳನ್ನು ಆನ್‍ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನುhttps://exams.nta.nic.in/cuet-pg/ ಮೂಲಕ ಸಲ್ಲಿಸಬಹುದು. ಆನ್‍ಲೈನ್‍ಅರ್ಜಿಯನ್ನು ಸಲ್ಲಿಸಲುಕೊನೆಯ ದಿನಾಂಕ 14 ನೇ ಜನವರಿ 2026 (ರಾತ್ರಿ 11.50 ಗಂಟೆಯವರೆಗೆ) ಆಗಿರುತ್ತದೆ.ಸಿಯುಇಟಿ ( ಪಿಜಿ)- 2026 ಅನ್ನು ಕಂಪ್ಯೂಟರ್‍ಆಧಾರಿತ ಪರೀಕ್ಷೆ ( ಸಿಬಿಟಿ) ಮೋಡ್‍ನಲ್ಲಿ ನಡೆಸಲಾಗುತ್ತದೆ:
ಪ್ರಮುಖ ದಿನಾಂಕಗಳು ಮತ್ತು ಮಾಹಿತಿ
ಆನ್‍ಲೈನ್‍ಮೂಲಕ ಅರ್ಜಿಸಲ್ಲಿಕೆ: 14 ನೆ ಡಿಸೆಂಬರ 2025 ರಿಂದ 14 ನೆ ಜನೆವರಿ 2026 (ರಾತ್ರಿ 11:50 ಗಂಟೆಯವರೆಗೆ),ಕ್ರೆಡಿಟ್ / ಡೆಬಿಟ್‍ಕಾರ್ಡ್ / ನೆಟ್-ಬ್ಯಾಂಕಿಂಗ್ / ಯುಪಿಐ ಮೂಲಕ ಶುಲ್ಕಪಾವತಿಯ ಕೊನೆಯ ದಿನಾಂಕ: 14 ನೆ ಜನೆವರಿ 2026 (ರಾತ್ರಿ 11:50 ರವರೆಗೆ),ಅರ್ಜಿಯಲ್ಲಿ ಎನಾದರೂ ತಿದ್ದುಪಡಿ ಮಾಡುವುದಿದ್ದರೆ: 18 ಜನೆವರಿ ಯಿಂದ 20 ಜನೆವರಿ 2026 ವರೆಗೆ ಮಾಡಬಹುದು.
- ಪ್ರವೇಶ ಕಾರ್ಡ್‍ಗಳನ್ನು ಎನ್ ಟಿ ಎ ವೆಬ್‍ಸೈಟ್ ಮೂಲಕ ನಂತರ ತಿಳಿಸಲಾಗುವುದು
- ಪರೀಕ್ಷೆಯ ನಗರದ ಪ್ರಕಟಣೆ: ಎನ್ ಟಿ ಎ ವೆಬ್‍ಸೈಟ್ ಮೂಲಕ ನಂತರ ತಿಳಿಸಲಾಗುವುದು
- ಪರಿಕ್ಷೆ ದಿನಾಂಕದ ಮಾರ್ಚ 2026 ರಲ್ಲಿ ನಡೆಯಲಿವೆ
- ಸರಿಯಾದ ಉತ್ತರ ಪ್ರಕಟಣೆ: ವೆಬ್‍ಸೈಟ್‍ನಲ್ಲಿ ನಂತರ ಪ್ರಕಟಿಸಲಾಗುವುದು
- ಪ್ರಮುಖವೆಬ್‍ಸೈಟ್(ಗಳು) https://nta.ac.in/ , https://exams.nta.nic.in/cuet-pg/ಫಲಿತಾಂಶವನ್ನು ಎನ್ ಟಿ ಎ ವೆಬ್‍ಸೈಟ್‍ನಲ್ಲಿಪ್ರಕಟಿಸಲಾಗುವುದು
ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಒದಗಿಸುವ ಕೋರ್ಸ್‍ಗಳÀ ವಿವರ ಮತ್ತು ಅವುಗಳ ಅರ್ಹತೆಯ ವಿವರ ವಿಶ್ವವಿದ್ಯಾಲಯದ ವೆಬ್‍ಸೈಟ್ www.cuk.ac.in ನಲ್ಲಿ ಮತ್ತು https://nta.ac.in/, https://exams.nta.nic.in/cuet-pg/ ನಲ್ಲಿ ಲಭ್ಯವಿದೆ.
ಭಾಷಾ ಪ್ರಶ್ನೆ ಪತ್ರಿಕೆಗಳು ಹೊರತು ಪಡಿಸಿ ಉಳಿದ ಎಲ್ಲಾ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ.
ಪರೀಕ್ಷೆಗಳು, ಪರೀಕ್ಷೆ ವಿಧಾನ, ವೇಳಾಪಟ್ಟಿ, ಅರ್ಹತೆ ಮತ್ತುಇತರ ಮಾಹಿತಿಗಾಗಿ, ಅಭ್ಯರ್ಥಿಗಳು ದಯವಿಟ್ಟು ವೆಬಸೈಟ್‍ನಲ್ಲಿ ಲಭ್ಯವಿರುವ ಸಿಯುಇಟಿ ( ಪಿಜಿ) – 2026 ರ ಮಾಹಿತಿ ಬುಲೆಟಿನ್ ಪರಿಶೀಲಿಸಬಹುದು
ಎನ್ ಟಿ ಎ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಪ್ರವೇಶಕ್ಕಾಗಿ ನೋಂದಾಯಿಸಲು ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳಿಗೆ ಕರೆನೀಡÀಲಾಗುತ್ತದೆ. ವಿದ್ಯಾರ್ಥಿಗಳು ಅರ್ಜಿಯ ವಿವರಗಳನ್ನು ಸಿಯುಕೆ ವೆಬಸೈಟ ನಲ್ಲಿ (www.cuk.ac.in) ಭರ್ತಿ ಮಾಡಬೇಕು. ಸಿಯುಇಟಿ ಫಲಿತಾಂಶ ಪ್ರಕಟಗೊಂಡ ನಂತರ ಅಭ್ಯರ್ಥಿಗಳು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನು ಬಯಸಿದರೆ ಸಿಯುಕೆ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಾಯಿತ ವಿದ್ಯಾರ್ಥಿಗಳಲ್ಲಿ ಸಿಯುಇಟಿ ಅಂಕಗಳ ಆಧಾರದ ಮೇಲೆ ಅರ್ಹತೆ ಮತ್ತು ಮೀಸಲಾತಿಯ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸಿಯುಕೆ ಮತ್ತು ಎನ್ ಟಿಎ ವೆಬ್‍ಸೈಟ್‍ಗಳನ್ನು (www.cuk.ac.in www.nta.ac.in, https://exams.nta.nic.in/cuet-pg/) ನಿರಂತರವಾಗಿ ನೋಡುತ್ತಿರಬೇಕು.
ಸಂಪೂರ್ಣ ಪ್ರವೇಶ ಪ್ರಕ್ರಿಯೆಯು ಆನ್‍ಲೈನ್ ಮೂಲಕ ನಡೆಯುತ್ತದೆ, ಆದ್ದರಿಂದ ಅಭ್ಯರ್ಥಿಗಳು ಭವಿಷ್ಯದ ಸಂವಹನಕ್ಕಾಗಿ ಅರ್ಜಿಯಲ್ಲಿ ಸರಿಯಾದಇಮೇಲ್ ಮತ್ತು ಫೆÇೀನ್ ಸಂಖ್ಯೆಯನ್ನು ನಮೂದಿಸಬೇಕು.
ಎಂಟೆಕ್ ಶೇ.50 ರಷ್ಟು ಸೀಟುಗಳನ್ನು ಸಿಯುಇಟಿ ಮೂಲಕ ಮತ್ತು ಶೇ 50 ರಷ್ಟು ಸೀಟುಗಳನ್ನು ಗೇಟ್ (ಗೇಟ್) ಮೂಲಕ ಭರ್ತಿ ಮಾಡಲಾಗುತ್ತದೆ.
ಸಿಯುಇಟಿ(ಪಿಜಿ) – 2026 (ಅನುಬಂಧ 1) ನಲ್ಲಿ ಒಟ್ಟು 157 ವಿಷಯಗಳನ್ನು ನೀಡಲಾಗುತ್ತಿದೆ.
ಸಿಯುಇಟಿ(ಪಿಜಿ) – 2025 ಅನ್ನು ಭಾರತದ ಹೊರಗಿನ 16 ನಗರಗಳು ಸೇರಿದಂತೆ 292 ನಗರಗಳಲ್ಲಿ ನೀಡಲಾಗುತ್ತಿದೆ (ಅನುಬಂಧ 2). ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ಮತ್ತು ಬಳ್ಳಾರಿ ಮತ್ತು ಕರ್ನಾಟಕದಲ್ಲಿ ಬಳ್ಳಾರಿ, ಬೆಳಗಾವಿ , ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿ.
ಸಿಯುಇಟಿ ( ಪಿಜಿ)- 2026 ಗೆ ಅರ್ಜಿ ಸಲ್ಲಿಸಲು ಯಾವುದೇ ಅಭ್ಯರ್ಥಿಯು ತೊಂದರೆಯನ್ನು ಎದುರಿಸಿದರೆ, ಅವನು/ಅವಳು 011 – 40759000 / 011 – 69227700 ಅನ್ನು ಸಂಪರ್ಕಿಸಬಹುದು ಅಥವಾ helpdesk-cuetpg@nta.ac.in ನಲ್ಲಿ ಇ-ಮೇಲ್ ಮಾಡಬಹುದು.
ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಇತ್ತೀಚಿನ ನವೀಕರಣಗಳಿಗಾಗಿ ಎನ್ ಟಿ ಎ ವೆಬ್‍ಸೈಟ್ www.nta.ac.in ಮತ್ತು https://exams.nta.nic.in/cuet-pg/ ನೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗುತ್ತಿದೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಆರ್ ಆರ್ ಬಿರಾದಾರ, ಪರೀಕ್ಷಾನಿಯಂತ್ರಣಾಧಿಕಾರಿ ಡಾ. ಕೋಟಾ ಸಾಯಿಕೃಷ್ಣ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಗಣಪತಿ ಬಿ ಸಿನ್ನೂರ ಉಪಸ್ಥಿತರಿದ್ದರು.
























