
ಕಲಬುರಗಿ,ಅ.9: ಸೇಡಂ ಪಟ್ಟಣದ ಸಹಕಾರಿ ಇಲಾಖೆಯ ಸಹಾಯಕ ನಿಬಂಧಕರ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಮಲ್ಲಿಕಾರ್ಜನ ಮತ್ತು ಕಂಪ್ಯೂಟರ್ ಆಪರೇಟರ್ ಸಂಗೀತಾ ಲೋಕಾಯುಕ್ತ ದಾಳಿಗೆ ಒಳಗಾದವರು.
ಬೀರಪ್ಪ ಎನ್ನುವವರು ಕೋಳಿ ಸಾಕಾಣಿಕೆ ಹಾಗೂ ಮಾರಾಟಗಾರರ ಸಹಕಾರಿ ಸಂಘದ ನೋಂದಣಿ ಮಾಡಿಸುವ ಉದ್ದೇಶ ಹೊಂದಿದ್ದರು. ಅದಕ್ಕೆ ಅಧಿಕಾರಿ ಮಲ್ಲಿಕಾರ್ಜುನ ಮತ್ತು ಕಂಪ್ಯೂಟರ್ ಆಪರೇಟರ್ ಸಂಗೀತಾ ಇಬ್ಬರು ಸೇರಿ ರೂ.10 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ರೂ.2 ಸಾವಿರ ಪಡೆದಿದ್ದರು. ಲಂಚ ನೀಡುವಂತೆ ಬೀರಪ್ಪಗೆ ಆಗಾಗ ಸತಾಯಿಸುತ್ತಿದ್ದರು ಎನ್ನಲಾಗಿದೆ. ಅಧಿಕಾರಿಗಳ ಕಿರುಕುಳ ತಾಳದೆ ಬೀರಪ್ಪ ಬುಧವಾರ ರೂ.5 ಸಾವಿರ ನಗದು ಹಣ ನೀಡುತ್ತಿದ್ದರು. ಅದೇ ವೇಳೆ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿ, ಕಚೇರಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು. ವಿಚಾರಣೆ ನಡೆಯುತ್ತಿದೆ ಎಂದು ಲೋಕಾಯುಕ್ತ ಪೆÇಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಗೀತಾ ಬೇನಾಳ್, ಪೆÇಲೀಸ್ ಇನ್ಸೆಕ್ಟರ್ ಅರುಣಕುಮಾರ್, ಬಸವರಾಜ ಇತರರಿದ್ದರು.