
ಹಟ್ಟಿ ನಜೀರ್ ಮಿಯಾನ್
ಕಲಬುರಗಿ,ಏ.7- ಮನೆ ಬಳಕೆಯ ಅಡಿಗೆ ಅನಿಲ ಗ್ಯಾಸ್ ಸಿಲೆಂಡರ್ ಪಡೆಯಲು ಗ್ರಾಹಕರು ಚಾತಕಪಕ್ಷಿಗಳಂತೆ ಪಾಳೆಯಲ್ಲಿ ನಿಂತು ಕಾಯುತ್ತಿರುವ ದೃಷ್ಯ ಎಂಎಸ್‍ಕೆ ಮಿಲ್ (ಎಚ್.ಪಿ) ಅಂಚಿತ ಗ್ಯಾಸ್ ಏಜೆನ್ಸಿಯ ಕಚೇರಿಯ ಮುಂದೆ ಕಾಣಿಸುತ್ತಿದ್ದು, ಈ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಲಿದೆ.
ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಯುದ್ಧದ ಬಿಸಿ ಎಲ್‍ಪಿಜಿ ಅಡಿಗೆ ಅನಿಲಕ್ಕೂ ತಟ್ಟಿರುವುದು ಇಲ್ಲಿನ ಗ್ರಾಹಕರ ಪರದಾಟವೇ ಸಾಕ್ಷಿ. ಅಡಿಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೋರತೆ ಇಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆ ನೀಡಿದ್ದರೂ, ಅಡಿಗೆ ಅಲಿಲ ಪೂರೈಕೆಯಲ್ಲಿ ಆಗುತ್ತಿರುವ ವಿಳಂಭವೂ ಗ್ಯಾಸ್ ಏಜನ್ಸಿಯ ಕಚೇರಿಯ ಮುಂದೆ ಗ್ರಾಹಕರು ಪಾಳೆ ನಿಲ್ಲುವಂತೆ ಮಾಡಿದೆ.
ಗ್ಯಾಸ್ ಬುಕ್ ಮಾಡಲು 25 ದಿನಗಳ ಅವಧಿಯನ್ನು ನಿಗದಿ ಪಡಿಸಲಾಗಿದೆ ಅಷ್ಟೆ ಆದರೇ ಬುಕ್ ಮಾಡಿದ ನಂತರ ಎಷ್ಟು ದಿನಗಳಲ್ಲಿ ಸಿಲೆಂಡರ್ ಪೂರೈಸಬೇಕು ಎಂಬ ಕಾಲಮೀತಿಯನ್ನು ನಿಗದಿ ಮಾಡದಿರುವುದು ಇಷ್ಟೆಲ್ಲ ಗೊಂದಲ ಮತ್ತು ಪರದಾಟಕ್ಕೆ ಕಾರಣ ಎಂಬ ಆರೋಪ ಗ್ರಾಹಕರಿಂದ ಕೇಳಿ ಬರುತ್ತಿದೆ.
ಅಡಿಗೆ ಅನಿಲಕ್ಕಾಗಿ ಬುಕ್ ಮಾಡಿದ ನಂತರ ವಿತರಣೆಯ ಕುರಿತು ಮತ್ತೊಂದು ಎಸ್‍ಎಂಎಸ್ ಬರುತ್ತದೆ ಅದರಲ್ಲಿ ಎಷ್ಟು ಬಿಲ್ ಪಾವತಿಸಬೇಕು ಎಂಬ ಮಾಹಿತಿಯೂ ಇರುತ್ತದೆ. ಈ ಸಂದೇಶ ಬಂದು 10-15 ದಿನಗಳು ಕಳೆದರೂ ಮನೆಗೆ ಗ್ಯಾಸ್ ಬರದಿದ್ದಲ್ಲಿ ನಾವೇನು ಮಾಡಬೇಕು ಎಂಬ ಪ್ರಶ್ನೆ ಗ್ರಾಹಕರಾದ ಲಕ್ಷ್ಮಣ ಅವರದಾಗಿದೆ.
ವಿತರಣೆಯಲ್ಲಿ ಆಗುತ್ತಿರುವ ವಿಳಂಭದಿಂದ ಮನೆಯಲ್ಲಿನ ಗ್ಯಾಸ್ ಮುಗಿದ ಪರಿಣಾಮವಾಗಿ ಇಲ್ಲಿ ಬಂದು ಪಾಳೆ ನಿಲ್ಲುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ತಮ್ಮ ದಿನನಿತ್ಯದ ಕೆಲಸಗಳನ್ನು ಬದಿಗಿಟ್ಟು ಒಂದೇರಡು ದಿನಗಳ ಕಾಲ ಇಲ್ಲಿನ ಪಾಳೆಯಲ್ಲಿ ಕಳೆದು ಸಿಲೆಂಡ್ ಪಡೆದುಕೊಳ್ಳುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಕೆಲವೊಮ್ಮೆ ಉದ್ಭವಿಸುವ ಗ್ರಾಹಕರ ಪರದಾಟ ತಲ್ಲಾಟಗಳು ನಡೆಯುತ್ತವೆ.
ಎಚ್.ಪಿ ಅಂಚಿತ ಗ್ಯಾಸ್ ಏಜನ್ಸಿ ಅವರು, ಪ್ರತಿ ದಿನ 200=300 ಅಡಿಗೆ ಸಿಲೆಂಡರು ವಿತರಿಸಲಾಗುತ್ತಿದೆ ಎಂದು ಹೇಳುತ್ತಾರೆ. ಅಲ್ಲದೇ ಗ್ರಾಹಕರು ಇಲ್ಲಿ ಬಂದು ಪಾಳೆ ನಿಲ್ಲುವ ಅಗತ್ಯವಿಲ್ಲ ತಮ್ಮ ಮನೆ ಬಾಗಿಲಿಗೆ ಸಿಲೆಂಡರ್ ಪೂರೈಸಲಾಗುತ್ತದೆ ಎಂದರೂ ಸಹ ಇಲ್ಲಿ ಬರುತ್ತಿದ್ದಾರೆ. ಇಲ್ಲಿ ಪಾಳೆ ನಿಲ್ಲುವವರಿಗೆ ಸಿಲೆಂಡ್ ಪೂರೈಸಲು ದಿನದ ಸಮಯ ಕಳೆಯುತ್ತಿದೆ ಅಲ್ಲದೇ ಏಕ ಕಾಳದಲ್ಲಿ ಎಲ್ಲರಿಗೂ ಸಿಲೆಂಡರ್ ಪೂರೈಸಲು ಸಾಧ್ಯವಿಲ್ಲದ ಮಾತು, ಅಲ್ಲದೇ ಮನೆಗೆ ತಲುಪಿಸಲು ಸಿಬ್ಬಂದಿಗಳ ಕೊರತೆಯೂ ಸಹ ಇದೆ.
ಇಲ್ಲಿಗೆ ಬಂದವರಿಗಷ್ಟೆ ಸಿಲೆಂಡ್ ವಿತರಿಸುತ್ತಾ ಹೋದಲ್ಲಿ ದಿನೇದಿನೆ ಬುಕ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆÉ ಈ ಸಂಖ್ಯೆ ಹೀಗೆ ಮುಂದುವರೆದಲ್ಲಿ ಪರಿಹಾರ ಮಾತ್ರ ಶೂನ್ಯವಾಗಲಿದೆ.
ನಿಗದಿತ ಸಮಯದೊಳಗೆ ಸಿಲೆಂಡರ್ ಪೂರೈಸಲು ಏಜೆನ್ಸಿಯವರು ಸೂಕ್ತ ಕ್ರಮ ಕೈಗೊಂಡಲ್ಲಿ ಮಾತ್ರ ಪಾಳೆನಿಲ್ಲುವ ಗ್ರಾಹಕರ ಸಂಖ್ಯೆಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ವಿಶೇಷವಾಗಿ ಕೇಲದಿನಗಳ ಕಾಲ ಬೆಳಿಗ್ಗೆ ಪಾಳೆ ನಿಲ್ಲುವವರಿಗೆ ಸಂಜೆ ರಾತ್ರಿಯ ವೇಳೆಯಾದರೂ ಮನೆಗಳಿಗೆ ಪೂರೈಸಲು ಮುಂದಾದಲ್ಲಿ ಕೇಲವೇ ಕೆಲವು ದಿನಗಳಲ್ಲಿ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಸಾದ್ಯವಿದೆ.






















