
ಜೇವರಗಿ,ಫೆ 19: ತಾಲ್ಲೂಕಿನ ಹರವಾಳ ಗ್ರಾಮದ ಬಳಿ 130 ಕೋಟಿ ವೆಚ್ಚದಲ್ಲಿ ಭೀಮಾ ನದಿಗೆ ಬಾಂದಾರ ಸಹಿತ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಬೆಂಗಳೂರಿನ ಜಿ.ಎಂ.ಮಸ್ತಾನಯ್ಯ ಕನ್‍ಸ್ಪಕ್ಷನ್ ಕಂಪನಿ ಈ ಕಾಮಗಾರಿ ಗುತ್ತಿಗೆ ಪಡೆದಿದ್ದು, ಹರವಾಳ ಗ್ರಾಮದ ಬಳಿ ಭೀಮಾನದಿಗೆ ಅಡ್ಡಲಾಗಿ ಎರಡನೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದಂತಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ಭಾರತ್ ಮಾಲಾ ಯೋಜನೆಯಡಿ ಈಗಾಗಲೇ ಗ್ರಾಮದ ಇಂದಿರಾ ನಗರ ಹತ್ತಿರ ಸೇತುವೆ ಕಾಮಗಾರಿ ನಡೆದಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. 130 ಕೋಟಿ ವೆಚ್ಚದ ಈ ಮಹತ್ವಕಾಂಕ್ಷಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಯಿಂದ ಜೇವರ್ಗಿ ಮತ್ತು ಅಫಜಲಪುರ ಜನ-ಜಾನುವಾರಗಳಿಗೆ ಮತ್ತು ರೈತರಿಗೆ ನೀರಾವರಿ ಸೌಲಭ್ಯ ಪಡೆಯಲು ವರದಾನವಾಗಲಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಬಾಂದಾರ ಮತ್ತು ಸೇತುವೆ ನಿರ್ಮಾಣದ ಕಾಮಗಾರಿಯು ಅತ್ಯಂತ ವೇಗವಾಗಿ ಸಾಗುತ್ತಿದೆ. ಈ ಸೇತುವೆಯಿಂದಾಗಿ ಪ್ರವಾಹ ಸಂದರ್ಭಗಳಲ್ಲಿ ಸುಗಮಹಾಗೂ ತ್ವರಿತ ಪ್ರಯಾಣಕ್ಕೆ ಅನುಕೂಲವಾಗಲಿದೆ.
ಈ ಬಾಂದಾರಿನ ಯೋಜನೆಯಿಂದ ಜೇವರ್ಗಿ ಹಾಗೂ ಆಫಜಲಪುರ ಎರಡು ತಾಲ್ಲೂಕಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು.ಈ ಸಂಪರ್ಕ ಸೇತುವೆಯಿಂದ ಎರಡು ತಾಲ್ಲೂಕಿನ ರೈತರ ಕೃಷಿ ಉತ್ಪನ್ನಗಳು ಸರಕು ಸಾಗಣೆ ಚಟುವಟಿಕೆ ಕೈಗೊಳ್ಳಲು ಅನುಕೂಲ ವಾಗಲಿದೆ. ಅಲ್ಲದೆ ಇದೇ ಬಾಂದಾರ ಯೋಜನೆಯಿಂದ ಜೇವರ್ಗಿ ತಾಲ್ಲೂಕಿನ 20 ಕೆರಗಳಿಗೆ ನೀರು ತುಂಬಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಜೇವರ್ಗಿ ತಾಲ್ಲೂಕಿನ ಹರವಾಳ, ಕೋಟನೂರ, ನೆಲೋಗಿ, ರಾಸಣಗಿ, ಹಂದನೂರ, ಕೋಬಾಳ, ಬಣಮಿಗಿ, ಕಲ್ಲಹಂಗರಗಾ, ಇಂದಿರಾನಗರ ತಾಂಡಾ ಹರವಾಳ ಹಾಗೂ ಅಫಜಲಪುರ ಮತಕ್ಷೇತ್ರದ ಹೇರೂರ (ಬಿ), ಮೈನಾಳ, ಬೆಳಗುಂಪಾ, ಚಿನಮಳ್ಳಿ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಒದಗಿಸಿದಂತಾಗು. ತ್ತದೆ.ಕಳೆದ 15 ದಿನಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ
























