Home ಜಿಲ್ಲೆ ಬೆಂಗಳೂರು ಸಿಆರ್ ಪಿಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಿಆರ್ ಪಿಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಬೆಂಗಳೂರು, ಮಾ. ೨೪ – ಬೆಂಗಳೂರಿನ ಯಲಹಂಕದಲ್ಲಿರುವ ವಿಸ್ತಾರವಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಆವರಣದಲ್ಲಿ ಮೂರು ಎಕರೆ ವಿಸ್ತೀರ್ಣದ ನೂತನ ಕೆರೆ ನಿರ್ಮಿಸಲಾಗಿದೆ. ಇದು ಸಾಮಾಜಿಕ ಜವಾಬ್ದಾರಿ ಮತ್ತು ಸಾಂಸ್ಥಿಕ ಪಾಲುದಾರರ ನೇತೃತ್ವದ ಮೂರು ತಿಂಗಳ ಯೋಜನೆ ಈಗ ಸಂಪೂರ್ಣಗೊಂಡಿದೆ.

ಆಟೋಮೋಟಿವ್ ತಂತ್ರಜ್ಞಾನದಲ್ಲಿ, ಮುಂಚೂಣಿಯಲ್ಲಿರುವ ಟೆಕಿಯಾನ್ ಸಂಸ್ಥೆ ಮತ್ತು ಬ್ಲೂ ಡಾಟ್ ಪ್ರತಿಷ್ಠಾನದ ನೇತೃತ್ವದಲ್ಲಿ, ಹಾಗೂ ಇತರೆ ಕಂಪನಿಗಳ ಸಹಭಾಗಿತ್ವದೊಂದಿಗೆ, ಒಂದು ಕಾಲದಲ್ಲಿ ಕೆಸರು ಮತ್ತು ಮಣ್ಣಿನಿಂದ ಹೂಳು ತುಂಬಿದ್ದ ತೀವ್ರ ಹದಗೆಟ್ಟ ಪರಿಸ್ಥಿತಿಯ ಚಿಕ್ಕ ಕೆರೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಸ್ಥಳ ಈಗ ಆರಂಭದಿಂದಲೇ ಅಚ್ಚುಕಟ್ಟಾಗಿ ವಿನ್ಯಾಸಗೊಂಡ ಸಮೃದ್ಧ ಪರಿಸರ ವ್ಯವಸ್ಥೆ ಹೊಂದಿದೆ. “ಈ ಸಹಭಾಗಿತ್ವದ ಕಾರ್ಯದಿಂದ ನಮ್ಮ ಯಲಹಂಕ ಸಿಆರ್‌ಪಿಎಫ್ ಆವರಣದಲ್ಲಿ ಮೂರು ಏಕರೆ ವ್ಯಾಪ್ತಿಯಲ್ಲಿ ಜೀವಂತ ಕೆರೆಯೊಂದು ನಿರ್ಮಾಣವಾಗಿದೆ, ಇದು ಜೈವಿಕ ವೈವಿಧ್ಯತೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಿದೆ.” ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ ಉಪ ಮಹಾನಿರೀಕ್ಷಕರಾದ ಪದ್ಮ ಕುಮಾರ್ ಹೇಳಿದರು.

ಈ ಯೋಜನೆಯು ದೀರ್ಘಕಾಲದ ಸ್ಥಿರತೆಯ ವೈಜ್ಞಾನಿಕ ಕ್ರಮಗಳನ್ನು ಒಳಗೊಂಡಿದೆ. ಉದಾಹರಣೆಗೆ ನಿಶ್ಚಿತ ಆಳ ಮತ್ತು ನೀರಿನ ಸಾಮರ್ಥ್ಯ ಹೆಚ್ಚಿಸಲು ಕೆಸರನ್ನು ತೆಗೆಯುವುದು, ಮಳೆ ನೀರನ್ನು ಗರಿಷ್ಠವಾಗಿ ಸಂಗ್ರಹಿಸಲು ಕುಸಿತ ಪ್ರದೇಶದ ಸುಧಾರಣೆಗಳನ್ನು ಮಾಡುವುದು. ಪಕ್ಷಿಗಳು ಹಾಗೂ ವನ್ಯಜೀವಿಗಳಿಗೆ ಸಹಾಯ ಮಾಡಲು ಸ್ಥಳೀಯ ಸಸ್ಯಗಳನ್ನು ನೆಡಲಾಯಿತು. “ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಹೊಸ ವಾಸಸ್ಥಾನವಾಗಲು ನಾವು ವೈಜ್ಞಾನಿಕವಾಗಿ ಈ ಕೆರೆಯನ್ನು ನಿರ್ಮಿಸಿದ್ದೇವೆ, ಪರಿಸರ ಸಮತೋಲನ ಕಾಪಾಡಲು ನಮ್ಮ ಪ್ರಾಥಮಿಕ ಗಮನ ಸಂಪೂರ್ಣ ಸ್ಥಳೀಯ ಸಸ್ಯಗಳ ಮೇಲೆ ಇರಿಸಿದೆ.” ಎಂದು ಬ್ಲೂಡಾಟ್ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ನಿರ್ದೇಶಕ ಹರ್ಷ ತೇಜ್ ಹೇಳಿದರು.