
ಕಲಬುರಗಿ,ಸೆ.8-ಮನೆ ಬೀಗ ಮುರಿದು 1.29 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ನಂದೂರ (ಕೆ) ತಾಂಡಾದಲ್ಲಿ ನಡೆದಿದೆ.
ಸವಿತಾ ಸೋಮು ರಾಠೋಡ ಎಂಬುವವರ ಮನೆ ಬೀಗ ಮುರಿದು ಕಳ್ಳರು 40 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಒಂದು ಜೊತೆ ಜುಮಕಿ, 40 ಸಾವಿರ ರೂ.ಮೌಲ್ಯದ 4 ಗ್ರಾಂ.ಬಂಗಾರದ ಒಂದು ಜೊತೆ ಕಿವಿಯೋಲೆಗಳು, 2,500 ರೂ.ಮೌಲ್ಯದ 5 ತೊಲೆಯ ಬೆಳ್ಳಿ ಕಾಲಗಡಗ, 2500 ರೂ.ಮೌಲ್ಯದ 5 ತೊಲೆಯ ಬೆಳ್ಳಿಯ ಚೈನ್, 10 ಸಾವಿರ ರೂ.ಮೌಲ್ಯದ 20 ತೊಲೆಯ ಕಾಲು ಚೈನ್, 5 ಸಾವಿರ ರೂ.ಮೌಲ್ಯದ 10 ತೊಲೆಯ ಬೆಳ್ಳಿ ಕಾಲಗಡಗ, 29 ಸಾವಿರ ರೂ. ನಗದು ಸೇರಿ 1.29 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.