
ಬೆಂಗಳೂರು,ಫೆ೨೬:ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ನಗರಪಾಲಿಕೆಗಳಲ್ಲಿ ಸಾರ್ವಜನಿಕರ ಅಹವಾಲುಗಳು ಮತ್ತು ಮನವಿಗಳನ್ನು ನೇರವಾಗಿ ಸ್ವೀಕರಿಸಲು ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಆಯೋಜಿಸಲಾಗಿದೆ.
ಇಂದು ಕೇಂದ್ರ ನಗರಪಾಲಿಕೆಯಲ್ಲಿ ಸಾರ್ವಜನಿಕರಿಂದ ಮೂಲಸೌಕರ್ಯ, ರಸ್ತೆ, ಸ್ವಚ್ಛತೆ, ಒಳಚರಂಡಿ ಸೇರಿದಂತೆ ಮತ್ತಿತರ ಅಹವಾಲುಗಳನ್ನು ಖುದ್ದಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಂಡು ಸಮಸ್ಯೆ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತರೆ.ಇಂದು ಮೊದಲ ಹಂತದಲ್ಲಿ ಕೇಂದ್ರ ನಗರಪಾಲಿಕೆಗೆ ಮಧ್ಯಾಹ್ನ ಮೂರು ಗಂಟೆಗೆ ಸಾರ್ವಜನಿಕರ ಸಭೆ ನಡೆಸಲಿದರೆ.
ಮುಂದಿನ ಮಾರ್ಚ ೩ ರಂದು ಪೂರ್ವ ನಗರಪಾಲಿಕೆ.೦೫-೦೩-೨೬ ರಂದು ಪಶ್ಚಿಮ ನಗರಪಾಲಿಕೆ.೧೦-೦೩-೨೬ ರಂದು ಉತ್ತರ ನಗರಪಾಲಿಕೆ.೧೨-೦೩-೨೬ ರಂದು ದಕ್ಷಿಣ ನಗರಪಾಲಿಕೆ ಕಛೇರಿ ಗಳಿಗೆ ಬೇಟಿ ನೀಡಿ ಸಾರ್ವಜನಿಕರ ಸಂಪರ್ಕ ಸಭೆ ನಡೆಸಿ .ಅಹವಾಲು ಸ್ವೀಕರಿಸಿ ಅಧಿಕಾರಿಗಳಿಗೆ ತ್ವರಿತ ಗತಿಯಲ್ಲಿ ಬಗೆಹರಿಸಲು ಸೂಚನೆ ನೀಡುತ್ತರೆ.
ಇನ್ನೂ ಸಾರ್ವನಿಕ ಸಂಪರ್ಕ ಸಭೆಯ ವೇಳೆ ಆಯಾ ನಗರ ಪಾಲಿಕೆಯ ಆಯುಕ್ತರು, ಅಭಿವೃದ್ಧಿ/ಕಂದಾಯ ಅಪರ ಆಯುಕ್ತರು, ಜಂಟಿ ಆಯುಕ್ತರು, ವಿವಿಧ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರೆ..






























