Home ಜಿಲ್ಲೆ ಕಲಬುರಗಿ ಮಕ್ಕಳು ರಾಷ್ಟ್ರದ ಸಂಪತ್ತು: ಕಾಂಬಳೆ

ಮಕ್ಕಳು ರಾಷ್ಟ್ರದ ಸಂಪತ್ತು: ಕಾಂಬಳೆ

ಕಲಬುರಗಿ,ಮಾ.21-ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಮತ್ತು ಜ್ಞಾನಸಾಗರ ಎಜುಕೇಷನ್ ಕಲ್ಚರ್ ಅಸೋಷಿಯೇಶನ್ ಸಹಯೋಗದೊಂದಿಗೆ ಜಿಲ್ಲೆಯ ಅಫಜಲಪುರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಓಂ ಶಾಹಿ ಜಾಗೃತಿ ಕಲಾ ತಂಡದ ಮುಖ್ಯಸ್ಥರಾದ ಶಶಿಕಾಂತ ಕಾಂಬಳೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ರಾಷ್ಟ್ರದ ಸಂಪತ್ತು. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಮಕ್ಕಳು ಶಿಕ್ಷಣದಿಂದ ದೂರು ಉಳಿದು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಕಳವಳಿಕಾರಿಯಾಗಿದೆ. ಈ ಮಕ್ಕಳನ್ನು ಮುಖ್ಯ ವಾಹಿನಿಗೆ ಸರ್ಕಾರಗಳು, ಸಾರ್ವಜನಿಕರು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಪೀರಪ್ಪ ಹಾದಿಮನಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಮತ್ತು ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.
ರೇಣುಕಾಬಾಯಿ, ಲಕ್ಷ್ಮೀಪುತ್ರ, ಸೋಮಶೇಖರ, ಮುತ್ತಣ್ಣ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.