
ಕಲಬುರಗಿ,ಜ.9 : ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಯುವಕನಿಗೆ ಪೆÇೀಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡವನ್ನು ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೆÇೀಕ್ಸೊ) ನ್ಯಾಯಾಲಯ ವಿಧಿಸಿದೆ. ಜೊತೆಗೆ ಯುವಕ ಹಾಗೂ ಬಾಲಕಿಯ ತಂದೆ-ತಾಯಂದಿರಿಗೂ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ಸಾವಿರ ದಂಡ ವಿಧಿಸಿದೆ.
ಅಳಂದ ತಾಲ್ಲೂಕಿನ ಗುಳೊಳ್ಳಿ ತಾಂಡಾದ ನಿತಿನ್ ನೀಲು ಪವಾರ (25) ಶಿಕ್ಷೆಗೆ ಒಳಗಾದ ಯುವಕ.ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಯುವಕನ ತಂದೆ ನೀಲು ಪವಾರ, ತಾಯಿ ಹಾಗೂ ಬಾಲಕಿಯ ತಂದೆ-ತಾಯಿಗೆ ಒಂದು ವರ್ಷ ಜೈಲು ಶಿಕ್ಷೆ ದಂಡ ವಿಧಿಸಿ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಸಿ.ಜಿ. ಅವರು ಆದೇಶಿಸಿದ್ದಾರೆ.
2023ರ ಮೇ 17 ರಂದು ಯುವಕನ ಮದುವೆಯು 16 ವರ್ಷದ ಬಾಲಕಿ ಜೊತೆಗೆ ಆಳಂದದ ಕಲ್ಯಾಣ ಮಂಟಪದಲ್ಲಿ ನೆರವೇರಿತ್ತು. ಬಾಲಕಿಗೆ 17 ವರ್ಷ 6 ತಿಂಗಳಿದ್ದಾಗ ಮಗುವಾಗಿತ್ತು. ಹೆರಿಗೆಗಾಗಿ ಆಸ್ಪತ್ರೆಗೆ ಹೋಗಿದ್ದಾಗ ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿತ್ತು.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ಅವರು ವಾದ ಮಂಡಿಸಿದ್ದರು.

























