Home ಜಿಲ್ಲೆ ಕಲಬುರಗಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 880ನೇ ರ್ಯಾಂಕ್ ಪಡೆದ ಚಂದ್ರಶೇಖರ್‍ಗೆ ಸನ್ಮಾನ

ಯುಪಿಎಸ್‍ಸಿ ಪರೀಕ್ಷೆಯಲ್ಲಿ 880ನೇ ರ್ಯಾಂಕ್ ಪಡೆದ ಚಂದ್ರಶೇಖರ್‍ಗೆ ಸನ್ಮಾನ

ಕಲಬುರಗಿ,ಮಾ.24-ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸರ್ವಜ್ಞ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಚಂದ್ರಶೇಖರ್ ಮಾನಸೆಪ್ಪ ಇವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 880ನೇ ರ್ಯಾಂಕ್ ಪಡೆದಿದ್ದಕ್ಕಾಗಿ ಇವರಿಗೆ ಡೊಳ್ಳಿನ ಮೆರವಣಿಗೆ ಮತ್ತು ಎನ್.ಸಿ.ಸಿ. ವಿದ್ಯಾರ್ಥಿಗಳ ಪರೇಡ್ ಮುಖಾಂತರ ಬರಮಾಡಿಕೊಂಡು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿದ ಚಂದ್ರಶೇಖರ್ ಮಾನಸೆಪ್ಪ ಮಾತನಾಡುತ್ತಾ, ಎಸ್.ಎಸ್.ಎಲ್.ಸಿ. ಶಹಾಪೂರ ತಾಲೂಕಿನ ವನದುರ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪಾಸಾದಾಗ ಮುಂದೆ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ನಂತರ ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಸೇರಿಕೊಂಡಾಗ ನನ್ನ ಜೀವನದ ತಿರುವಿಗೆ ಮತ್ತು ಸಾಧನೆಗೆ ಕಾರಣವಾಯಿತು.
ಪಿಯುಸಿಯ ವಾರ್ಷಿಕೋತ್ಸವದಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೂಡ ಐ.ಎ.ಎಸ್., ಐ.ಪಿ.ಎಸ್. ಆಗಿ ಸಾಧನೆ ಮಾಡಬಹುದೆಂದು ಹುರಿದುಂಬಿಸಿ ಮಾತನಾಡಿದರು. ಆಗ ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲ ಅವರ ನುಡಿಮುತ್ತುಗಳು ನನ್ನ ಮೇಲೆ ಬಹಳ ಪರಿಣಾಮ ಬೀರಿದವು ಹಾಗೂ ಅಂದಿನ ಅತಿಥಿಗಳಾದ ಶಾಲಿನಿ ರಜನೀಶ್ ಐ.ಎ.ಎಸ್. ಅಧಿಕಾರಿ ಅವರು ಕೂಡ ಮಾತನಾಡಿದ್ದು ನನಗೆ ಪ್ರೇರಣೆಯಾಯಿತು. ಆಗ ಅವರ ಭಾಷಣ ಕೇಳಿ ಅವರಂತೆ ಐ.ಎ.ಎಸ್. ಪಾಸಾಗಿ ಸಾಧನೆ ಮಾಡಬೇಕೆಂಬ ಛಲ ಮನಸ್ಸಿನಲ್ಲಿ ಮೂಡಿತು. ಅದಕ್ಕಾಗಿ ಛಲದಿಂದ, ಕಠಿಣ
ಪರಿಶ್ರಮದಿಂದ ಓದಿದೆ ಎಂದು ಹೇಳಿದರು.
ನನ್ನ ಈ ಸಾಧನೆಗೆ ಸರ್ವಜ್ಞ ಕಾಲೇಜಿನಲ್ಲಿ ಪೆÇ್ರ. ಚನ್ನಾರಡ್ಡಿ ಪಾಟೀಲ ಅವರ ಸತತ ಪ್ರೇರಣೆ, ಉತ್ತಮ ಮಾರ್ಗದರ್ಶನ ಮತ್ತು ಮುಂಜಾನೆಯಿಂದ ಸಂಜೆವರೆಗಿನ ಶಿಸ್ತುಬದ್ದ ನಿರಂತರ ಅಧ್ಯಯನ ಐ.ಎ.ಎಸ್. ಓದುವುದರಲ್ಲಿ ಬಹಳಷ್ಟು ಉಪಯೋಗವಾಯಿತು ಎಂದು ಸರ್ವಜ್ಞ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಿನ ನೆನಪುಗಳನ್ನು ಸ್ಮರಿಸಿಕೊಂಡರು. ಅಂದು ಇದೇ ವೇದಿಕೆಯ ಮೇಲೆ ನೆನಪಿನ ಕಾಣಿಕೆ ಪಡೆದಿದ್ದೇನೆ. ಇಂದು ಇಲ್ಲಿ
ಸನ್ಮಾನಗೊಳ್ಳುತ್ತಿರುವುದು ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇಲ್ಲಿನ ಶಿಸ್ತು, ಉತ್ತಮ ವಾತಾವರಣ ಹಾಗೂ ಅನೇಕ ಕಾರ್ಯಕ್ರಮಗಳ ಮುಖಾಂತರ ವಿವಿಧ ಸಾಧಕರನ್ನು ಕರೆಸಿ ಪ್ರೇರೇಪಿಸುವುದು ವ್ಯಕ್ತಿಯನ್ನು ಎತ್ತರಕ್ಕೆ ಬೆಳೆಯುವಂತೆ ಮಾಡುತ್ತದೆ. ಜೀವನದಲ್ಲಿ ಹಂತ
ಹಂತವಾಗಿ ಯಶಸ್ಸನ್ನು ಕಠಿಣ ಪರಿಶ್ರಮದಿಂದ ಪಡೆಯಬೇಕು ಎಂದು ಪೆÇ್ರೀತ್ಸಾಹ ನೀಡಿದರು. ತನ್ನ ಬದುಕು ಮತ್ತು ಭವಿಷ್ಯವನ್ನು ರೂಪಿಸಿ ಈ ಸಾಧನೆಗೆ ಮಾರ್ಗದರ್ಶಕ ನೀಡಿದ ಸರ್ವಜ್ಞ ಸಂಸ್ಥೆಗೆ ಮತ್ತು ಎಲ್ಲಾ
ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಸಂಸ್ಥಾಪಕರಾದ ಪೆÇ್ರ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತಾ, ಚಂದ್ರಶೇಖರ್ ಮಾನಸೆಪ್ಪ ಅವರು ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ ಹಾಗೂ ಐ.ಎ.ಎಸ್. ಅಧಿಕಾರಿ ಶಾಲಿನಿ ರಜನೀಶ್ ಅವರ ಮಾತುಗಳಿಂದ ಪ್ರೇರಿತರಾಗಿ, ಉನ್ನತ ಗುರಿ ಇಟ್ಟುಕೊಂಡು, ಸತತ ಪರಿಶ್ರಮದಿಂದ ಓದಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 880ನೇ ರ್ಯಾಂಕ್ ಪಡೆದು ನಮ್ಮ ಕಾಲೇಜಿಗೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ವಿದ್ಯಾರ್ಥಿಗಳು ಕೂಡ ಆ ನಿಟ್ಟಿನಲ್ಲಿ ಉನ್ನತ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕೆಂದು ಪೆÇ್ರೀತ್ಸಾಹ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗೀತಾ ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತಾ, “ವಿದ್ಯಾರ್ಥಿಗಳು ಉತ್ತಮವಾದ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದೇಶದ ಸತ್ಪ್ರಜೆಯಾಗಿ ಹೊರಹೊಮ್ಮಬೇಕು. ಕಷ್ಟಪಟ್ಟು ಓದಿದರೆ ಜೀವನದಲ್ಲಿ ಬೇಕಾದದ್ದು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಉನ್ನತವಾದ ಹುದ್ದೆ ಅಲಂಕರಿಸಿದ ಮೇಲೂ
ವಿನಯದಿಂದ ಇರಬೇಕು. ನಾಡೋಜ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅಪ್ಪ ಅವರ ನುಡಿಮುತ್ತುಗಳು ನಮಗೆ ಮತ್ತು ಮಕ್ಕಳ ಬದುಕಿಗೆ ದಾರಿದೀಪವಾಗಿವೆ. ಅವರಂತೆ ಸಾಧನೆ ಮಾಡಿ ಮೃದುವಾದ ಮನಸ್ಸನ್ನು ಹೊಂದಿದ್ದು ದೇಶ ಸೇವೆ ಮಾಡಬೇಕು ಎಂದು ಮಕ್ಕಳಿಗೆ ಪೆÇ್ರೀತ್ಸಾಹ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ಪ್ರಾಚಾರ್ಯರಾದ ಪ್ರಶಾಂತ್ ಕುಲಕರ್ಣಿ, ವಿನುತಾ ಆರ್.ಬಿ., ಪ್ರಭುಗೌಡ ಸಿದ್ದಾರೆಡ್ಡಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಪಂಚಾಕ್ಷರಿ ಎಸ್. ಹಿರೇಮಠ, ರಾಕೇಶ್ ಪಿ., ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ವಿದ್ಯಾವತಿ ಪಾಟೀಲ ನಿರೂಪಿಸಿದರು.