
ಕಲಬುರಗಿ,ಮಾ.21-ನಗರದ ಹೊಸ ಘಾಟಗೆ ಲೇಔಟ್ ಬಡಾವಣೆಯ ಶರಣು ಗೊಬ್ಬರ್ ಮನೆಯಿಂದ ಮಾರುತಿ ಮಡಪೆ ಮನೆಯವರಿಗೂ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ಸಿಸಿ ರಸ್ತೆಯ ಉದ್ಘಾಟನೆಯನ್ನು ಕಲ್ಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕರದ ಅಲಮಪ್ರಭು ಪಾಟೀಲ್ ಮತ್ತು ಕಲ್ಬುರ್ಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ್ ಜಾನೆ ಅವರು ಉದ್ಘಾಟಿಸಿದರು.
ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಸಾಹೇಬರು ತಮ್ಮ ಅನುದಾನದಲ್ಲಿ ಇಂತಹ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುತ್ತಿದ್ದೇವೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ನಿರಂತರ ನೀರನ್ನು ಒದಗಿಸಲಾಗುವುದು ಬಡಾವಣೆಯಲ್ಲಿ ರಸ್ತೆಗಳು ಆರೋಗ್ಯ ಸಮಸ್ಯೆಯನ್ನು ಬಗೆಹರಿಸಲು ನಾವು ಸದಾ ಸಿದ್ದ ಎಂದರು. ಈ ಸಂದರ್ಭದಲ್ಲಿ ಬಡಾವಣೆಯ ಪ್ರಥಮ ದರ್ಜೆಯ ಗುತ್ತಿಗೆದಾರರಾದ ವಿಜಯ್ ಕುಮಾರ್ ಲೇಂಗಟಿ ಅವರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಡಾವಣೆಯು ಮುಖಂಡರಾದ ಮಾರುತಿ ಮಡಪೆ, ವಿಜಯಕುಮಾರ್ ಲೇಂಗಟಿ, ಡಾ.ಗಾಂಧೀಜಿ ಮೋಳಕೆರೆ,ಡಾ ರಾಜಕುಮಾರ ಬಂಗಾರೆ, ಸಂದೇಶ್ ಕುಮಾರ್ ,ಬಾಬುರಾವ್ ಕಾಂಬಳೆ, ಪ್ರಕಾಶ್ ಗೊಬ್ಬರ ಇನ್ನೂ ಅನೇಕರು ಭಾಗವಹಿಸಿದ್ದಾರೆ.



























