ಗೋಹತ್ಯೆ ಖಂಡಿಸಿ ಕಮಲನಗರ ಬಂದಗೆ ಕರೆ ; ಬಿಗಿ ಬಂದೋಬಸ್ತ

ಕಮಲನಗರ : ಜೂ.9:ಪಟ್ಟಣದ ಹೊರವಲಯದ ರಾಂಪೂರ ರಸ್ತೆಯಲ್ಲಿರುವ ಶೇಡವೊಂದರಲ್ಲಿ ಭಾನುವಾರ ಬೆಳಿಗ್ಗೆ ಅನಧೀಕೃತವಾಗಿ ಗೋಹತ್ಯೆ ನಡೆದ ಘಟನೆ ಹಿನ್ನೆಲೆಯಲ್ಲಿ ಕಮಲನಗರದಲ್ಲಿ ಹಿಂದೂಪರ ಸಂಘಟನೆಯ ಪ್ರಮುಖರು, ಯುವಕರು, ಮುಖಂಡರು ಕಮಲನಗರ ಬಂದ್‍ಗೆ ಕರೆ ನೀಡಿದರು.
ಬೆಳಿಗ್ಗೆ ಅಲ್ಲಮಪ್ರಭು ವೃತ್ತದ ಬಳಿ ಟೈರ್‍ಗೆ ಬೆಂಕಿ ಹಚ್ಚಿ ಪಟ್ಟಣದಲ್ಲಿ ಬೈಕ ರ್ಯಾಲಿ ಮೂಲಕ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಅಡವೇಪ್ಪ ಬನ್ನಿ ಹಾಗೂ ಪಿಎಸ್‍ಐ ಚಂದ್ರಶೇಖರ ನಿರ್ಣೆ ನೇತೃತ್ವದಲ್ಲಿ ಯಾವುದೇ ಅಹೀತಕರ ಘಟನೆ ಜರಗದಂತೆ ಬಿಗಿ ಪೆÇಲೀಸ್ ಬಂದೋಬಸ್ತ ಮಾಡಲಾಯಿತು.
ಸ್ಥಳಕ್ಕೆ ಡಿವೈಎಸ್‍ಪಿ ಶಿವಾನಂದ ಪವಾಡಶೇಟ್ಟಿ, ತಹಶೀಲ್ದಾರ ಅಮೀತಕುಮಾರ ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದಲ್ಲಿ ಉದ್ವಿಘ್ನ ಪರಿಸ್ಥಿತಿ ತಲೆದೂರಿತ್ತು. ಯುವಕರು ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿಸಿದರು ಇದರಿಂದ ಕೆಲಹೊತ್ತು ಪ್ರಯಾಣಿಕರು ಭಯಭೀತರಾದರು. ರಸ್ತೆ ಸಂಚಾರ ಎಂದಿನಂತೆ ಸುಗಮವಾಗಿ ನಡೆಯಿತು.
ಹೆಚ್ಚುವರಿ ಡಿಆರ್ ವ್ಯಾನಗಳು ಸ್ಥಳದಲ್ಲಿ ಠಿಕಾಣಿ ಹೂಡಿದು. ಯಾವುದೇ ಅಹೀತಕ ಘಟನೆ ನಡೆದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ತನಿಖೆ ಮುಂದುವರೆದಿದ್ದು, ಕಮಲನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.

ಸೈಯದ್ ಪೀರ್ ಭಾಷಾ ಅಂಗಳದಲ್ಲಿ ಆಕಳ ಅಂತ್ಯ ಕ್ರಿಯೆ ವಿಧಿ ವಿಧಾನ ಮೂಲಕ ನೆರವೇರಿಸಲಾಯಿತು.

ಮೆರವಣಿಗೆಯಲ್ಲಿ ನೂರಾರು ಹಿಂದು ಪರ್ ಸಂಘಟನೆ ಕಾರ್ಯಕರ್ತರು, ಯುವಕರು ಮುಖಂಡರು ಹಾಗೂ ಮಕ್ಕಳು ಇದ್ದರು.