Home ಕ್ರೀಡೆ ೧೫,೨೮೬ ಕೋಟಿ ರೂ.ಗೆ ಆರ್ ಆರ್ ತಂಡ ಖರೀದಿಸಿದ ಉದ್ಯಮಿ ಕಲ್ ಸೋಮಾನಿ

೧೫,೨೮೬ ಕೋಟಿ ರೂ.ಗೆ ಆರ್ ಆರ್ ತಂಡ ಖರೀದಿಸಿದ ಉದ್ಯಮಿ ಕಲ್ ಸೋಮಾನಿ

ಮುಂಬೈ, ಮಾ.೨೪- ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಹೊಸ ಮಾಲೀಕರ ಪ್ರವೇಶವಾಗಿದೆ. ಆರ್ ಆರ್ ತಂಡವನ್ನು ೧೫, ೨೮೬ ಕೋಟಿ ರೂ.ಗಳಿಗೆ ಅಮೆರಿಕ ಮೂಲದ ಖ್ಯಾತ ಉದ್ಯಮಿ ಕಲ್ ಸೋಮಾನಿ ಹಾಗೂ ಫ್ಲಿಪ್‌ಕಾರ್ಟ್ ಮಾಲೀಕ ವಾಲ್‌ಮಾರ್ಟ್ ಸಂಸ್ಥಾಪಕ ರಾಬ್ ವಾಲ್ಟನ್ ಖರೀದಿ ಮಾಡಿದ್ದಾರೆ.


ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಹಿವಾಟು ಎಂದೇ ಬಿಂಬಿಸಲಾಗಿದೆ. ಅಷ್ಟೇ ಅಲ್ಲ ಒಂದು ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾದ ಮೊದಲ ಐಪಿಎಲ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೂ ಸೋಮಾನಿ ಪಾತ್ರರಾಗಿದ್ದಾರೆ.ಸೋಮಾನಿ ಅವರು ೨೦೨೧ ರಲ್ಲೇ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಲ್ಪಪ್ರಮಾಣದಲ್ಲಿ ಹೂಡಿಕೆದಾರರಾಗಿ ಸೇರ್ಪಡೆಗೊಂಡಿದ್ದರು.


ಅಂದಿನಿಂದ ಅವರು ಫ್ರಾಂಚೈಸಿಯ ಮಾಲೀಕತ್ವದ ರಚನೆಯಲ್ಲಿ ಸಕ್ರಿಯ ಭಾಗವಾಗಿದ್ದರು. ಈಗ ಅವರು ತಂಡದ ಮೇಲೆ ಹೆಚ್ಚಿನ ಹಿಡಿತ ಸಾಧಿಸಲು ಮುಂದಾಗಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯಾಗಿದ್ದು, ಕ್ರೀಡೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಲ್ಲಿ ಆಸಕ್ತಿ ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ೧.೬೩ ಬಿಲಿಯನ್ ಡಾಲರ್ (?೧೫,೨೮೬ ಕೋಟಿ) ಮೊತ್ತಕ್ಕೆ ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಕಲ್ ಸೋಮಾನಿ ಅವರ ನೇತೃತ್ವದ ಹೂಡಿಕೆದಾರರ ಗುಂಪು ಪ್ರಮುಖ ಪಾತ್ರ ವಹಿಸಿದೆ .


ಈ ಹೂಡಿಕೆಯೊಂದಿಗೆ ನಾವು ದೊಡ್ಡ ಮಟ್ಟದ ಬೆಳೆವಣಿಗೆಯನ್ನು ಕಾಣುತ್ತಿದ್ದೇವೆ ಮತ್ತು ಐಪಿಎಲ್‌ನ ಭವಿಷ್ಯದ ಬಗ್ಗೆ ನಮಗೆ ತುಂಬಾನೇ ಉತ್ಸಾಹವಿದೆ, ಎಂದು ಕಲ್ ಸೋಮಾನಿ ಪ್ರತಿಕ್ರಿಯಿಸಿದ್ದಾರೆ.