Home ಜಿಲ್ಲೆ ಕಲಬುರಗಿ ಬಸ್ ಡಿಕ್ಕಿ: ಮಹಿಳೆ ಸಾವು

ಬಸ್ ಡಿಕ್ಕಿ: ಮಹಿಳೆ ಸಾವು

ಕಲಬುರಗಿ,ಮಾ.24-ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಸೋಮವಾರ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೇರೂರ ಗ್ರಾಮದ ಮಹಾದೇವಿ(65) ಮೃತಪಟ್ಟ ಮಹಿಳೆ.
ಗಂಗಾ ನಗರದ ಮಗನ ಮನೆಯಲ್ಲಿ ಇರುತ್ತಿದ್ದ ಇವರು ಎರಡು ದಿನದ ಹಿಂದೆ ಮಗಳ ಮನೆಗೆ ಹೋಗಿದ್ದರು. ಸೋಮವಾರ ಮಧ್ಯಾಹ್ನ ಹೇರೂರ ಗ್ರಾಮಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. 2.30ರ ಸಮಯದಲ್ಲಿ ಪ್ಲಾಟ್ ಫಾರಂ ನಂ.6ರಲ್ಲಿದ್ದ ಬಸ್‍ನ ಚಾಲಕ ಬಸ್ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾಗ ಮಹಿಳೆಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಚಾರ ಠಾಣೆ 1ರಲ್ಲಿ ಪ್ರಕರಣ ದಾಖಲಾಗಿದೆ.