
ಬಾದಾಮಿ,ಜೂ.೨೩: ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಸುಸಜ್ಜಿತ ಪೊಲೀಸ್ ಢಾಣೆ ನಿರ್ಮಿಸಬೇಕು ಮತ್ತು ಗ್ರಾಮೀಣ ಠಾಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಆದ ದೇವಾಡಿಗ ಗೃಹ ಇಲಾಖೆಗೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ೭೦ ಗ್ರಾಮಗಳು ಇರುವ ಕುಳಗೇರಿ ಕ್ರಾಸ್ ನಲ್ಲಿ ಸರಿಯಾದ ಠಾಣೆ ಇರುವುದಿಲ್ಲ. ಪೊಲೀಸ್ ಠಾಣೆಗಳಿಗಾಗಿ ಸದ್ಯದ ಪ್ರಕಾರ ಪರಿಪೂರ್ಣ ಆಧುನಿಕ ಕಟ್ಟಡ ನಿರ್ಮಾಣ ಮಾಡಬೇಕು. ಗ್ರಾಮೀಣ ಠಾಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ತ್ವರಿತ ಪ್ರತಿಕ್ರಿಯೆಗಳಿಗಾಗಿ ಸ್ಥಳೀಯ ಠಾಣೆಗೆ ಪೆಟ್ರೋಲ್ ವಾಹನ(ಗಸ್ತು) ಲಭ್ಯವಿರಬೇಕು. ಮತ್ತು ಹೆಚ್ಚಳ ಮಾಡಬೇಕು. ಹೊಯ್ಸಳ ಗಸ್ತು ವಾಹನ & ಸಿಬ್ಬಂದಿಗಳನ್ನು ಹೆಚ್ಚಿಸಬೇಕು. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು. ಪೊಲೀಸ್ ಠಾಣೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ಸಂಪರ್ಕ ಸೌಲಭ್ಯಗಳಾದ ಕಂಪ್ಯೂಟರ್, ಇಂಟರನೆಟ್ ಸಂಪರ್ಕ, ಕ್ರೈಂ ಡೇಟಾ ಆನ್ ಲೈನ್ ನಂಟು ಇರಬೇಕು. ಪ್ರಮುಖ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸಮುದಾಯ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರ್ ಗಳನ್ನು ಅಳವಡಿಸಬೇಕು.