ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿಯಿಂದಲೇ ಕೊಕ್ಕೆ: ಡಾ.ಅಜಯ್ ಸಿಂಗ್

ಕಲಬುರಗಿ,ಡಿ.18-ಸುವರ್ಣ ವಿಧಾನ ಸೌಧದಲ್ಲಿ ಆರಂಭವಾಗಿರುವ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಸಾಗಿರುವ ಮಹತ್ವದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಕೆಕಆರ್‍ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರಾಗಿರುವ ಡಾ.ಅಜಯ್ ಧರ್ಮಸಿಂಗ್ ಅವರು ಕಳೆದ 2 ದಶಕದಲ್ಲಿ ಕಲ್ಯಾಣ ನಾಡು ಸೇರಿದಂತೆ ಇಡಿಯಾಗಿ ಉ-ಕ ಪ್ರಗತಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಒಂದೊಂದಾಗಿ ಪಟ್ಟಿ ಮಾಡುತ್ತ ವಪಕ್ಷ ಬಿಜೆಪಿಯವರ ಆರೋಪಗಳಿಗೆ ಮಾರುತ್ತರ ನೀಡಿದರು.
ಕಳೆದ 20 ವರ್ಷಗಳಲ್ಲಿ ಬಿಜೆಪಿಯವರೇ 11 ವರ್ಷ ಅಧಿಕಾರ ಮಾಡಿದ್ದರೂ ಕಲ್ಯಾಣ ನಾಡಿನ ಪ್ರಗತಿಗೆ ಮಂಕು ಕವಿದಿದೆ. ಕಲಂ 371 (ಜೆ) ಯಂತತಹ ಕಲ್ಯಾಣ ನಾಡಿನ ಪ್ರಗತಿಯಲ್ಲಿ ತನ್ನದೇ ಪರಿಣಾಮ ಬೀರುತ್ತಿರುವ ಸಂವಿಧಾನದ ವಿಶೇಷ ಸಂರಕ್ಷಣೆಯ ವಿಷಯಗಳನ್ನೆಲ್ಲ ಬಿಜೆಪಿ ಜಾರಿಗೆ ತಾರದೆ ವಂಚಿಸಿತ್ತು. ದಿ. ಕೃಷ್ಣ ಸರ್ಕಾರದಲ್ಲಿ ಕೇಂದ್ರದ ಮುಂದೆ ಕಲಂ 371 (ಜೆ)ಗಾಗಿ ಆಗ್ರಹ ಕೇಳಿ ಬಂದಾಗ ಅದನ್ನು ಬಿಜೆಪಿ ನೇತ್ವದ ನ್‍ಡಿಎ ಆಡಳಿತ ನಿರಾರಿಸಿತ್ತು. ಇದು ಕಲ್ಯಾಣ ನಾಡಿನ ಪ್ರಗತಿಗೆ ಮಾಡಿರುವ ಮಹಾ ಮೋಸವೆಂದು ಡಾ. ಅಜಯ್ ಸಿಂಗ್ ವಿಪಕ್ಷಗಳನ್ನು ಛೇಡಿಸಿದರು.
ಕಲಂ 371 (ಜೆ) ಅನುಷ್ಠಾನದ ನಂರ ಲ್ಯಾಣ ನಾಡು ಸೇರಿದಂತೆ ಉತ್ತರ ಭಾಗಕ್ಕೆ 24, 875 ಕೋಟಿ ರು ಅಭಿವೃದ್ಧಿ ಅನುದಾನ ಬಂದಿದೆ. ಇದೇ ಕಲಂ 2 ದಶಗಳ ಹಿಂದೆಯೇ ಜಾರಿಗೊಂಡಿದ್ದರೆ 45 ಸಾವಿರ ಕೋಟಿ ರು ಗೂ ಅಧಿಕ ಅನುದಾನ ಬರುತ್ತಿತ್ತು. ಅಭಿವೃದ್ಧಿಗೆ ಗ್ರಹಣ ಅಮರಲು ಯಾರು ಕಾರಣ? ಬಿಜೆಪಿಯೇ ತಾನೆ ಎಂದು ಗುಡುಗಿದರು.
ಕೆಕೆಆರ್‍ಡಿಬಿಗೆ ಕಾಂಗ್ರೆಸ್ ಸರ್ಕಾರದ 5 ಸಾವಿರ ಕೋಟಿ ರು ಅನುದಾನ ನೀಡುತ್ತಿದೆ. ಕಳೆದ 3 ವರ್ಷಗಳಲ್ಲಿ 13 ಸಾವಿರ ಕಟಿ ರು ಅನುದಾನ ಬಂದಿದೆ. ಇದರಿಂದ ಆರೋಗ್ಯ, ಅಕ್ಷರ, ಅರಣ್ಯ, ಕೃಷಿ ಇತ್ಯಾದಿ ರಂಗಗಳಲ್ಲಿ ಕ್ರಾಂತಿಯಾಗುತ್ತಿದೆ. ಆರೋಗ್ಯ ಆವಿಷ್ಕಾರದಲ್ಲಿ 415 ಕೋಟಿ ರು ವೆಚ್ಚದಲ್ಲಿ ಎಲ್ಲಾ ಹಂತದಲ್ಲಿ ಆಸ್ಪತ್ರೆಗಳ ಮೇಲ್ದರ್ಜೆ ಸಾಗಿದೆ. ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆಗಳು ಬರುತ್ತಿವೆ. ಅಭಿವೃದ್ಧಿ ಒಂದೇ ರಾತ್ರಿ ಆಗೋದಲ್ಲ, ನಮ್ಮ ಭೂಭಾಗ ಐತಿಹಾಸಿಕವಾಗಿ ಹಿಂದಿದೆ, ಇಲ್ಲಿ ಪ್ರಗತಿಯ ಫಸಲು ಚಿಗುರಿಸಲು ಕಾಂಗ್ರೆಸ್ ಪ3?ಮಾಣಿಕ ಯತ್ನ ಮಾಡುತ್ತಿದೆ ಎಂದು ಡಾ. ಅಜಯ್ ಸಿಂಗ್ ಅಂಕಿ ಸಂಖ್ಯೆ ಸಮೇತ ಸದನದಲ್ಲಿ ಉ- ಕ, ಕಲ್ಯಾಣ ನಾಡಿನ ಪ್ರಗತಿಗೆ ಕಾಂಗ್ರೆಸ್‍ನ ಬದ್ಧತೆಯನ್ನು ವಿವರಿಸಿದರು.
ಕಲ್ಯಾಣ ನಾಡು ಸೇರಿದಂತೆ ರಾಜ್ಯದಿಂದ ಜನತೆ ಬಿಜೆಪಿಯ ಸಂಸದರು ಹೆಚ್ಚಿಗೆ ಕೇಂದ್ರಕ್ಕೆ ಕಳುಹಿಸಿದರೂ ಇಲ್ಲಿಂದ ರಾಜ್ಯದ ಪಾಲಿನ ರೂಪದಲ್ಲಿ ಬರಬೇಕಾದಂತಹ ತೆರಿಗೆ ಬರುತ್ತಿಲಲ. ಈ ಸಂಸದರು ಕೇಂದ್ರಕ್ಕೆ ಹೋದರೂ ಲಾಭ ಶೂವ್ಯ. ಆದರೆ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಿಂದುಳಿದ ಪ್ರದೇಶದಲ್ಲಿ ತನ್ನ ಕಾಳಜಿ, ಬದ್ಧತೆ ಸದಾಕಾಲ ಮೆರೆಯುತ್ತಿದೆ ಎಂದರು.