ಭುವನ್‌ಗೌಡ ಭರ್ಜರಿ ಶತಕ ಸೈಯದ್ ಕ್ರಿಕೆಟರ್‍ಸ್‌ಗೆ ಜಯ


ಬೆಂಗಳೂರು,ಜು.೧:ಭುವನ್‌ಗೌಡ ಅವರ ಭರ್ಜರಿ ಶತಕ ಹಾಗೂ ಮಾರಕ ಬೌಲಿಂಗ್ ನೆರವಿನಿಂದಾಗಿ ಝೋಡಿಯಾಕ್ ಕ್ರಿಕೆಟ್ ಕ್ಲಬ್ ವಿರುದ್ಧ ಸರ್ ಸೈಯದ್ ಕ್ರಿಕೆಟರ್‍ಸ್ ತಂಡಕ್ಕೆ ೨೩೬ ರನ್‌ಗಳ ಭರ್ಜರಿ ಜಯ ಗಳಿಸಿದೆ.

ಮೊದಲು ಬ್ಯಾಟ್ ಮಾಡಿದ ಸೈಯದ್ ಕ್ರಿಕೆಟರ್‍ಸ್ ೫೦ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೨೯೨ ರನ್ ಗಳಿಸಿತು. ಭುವನ್‌ಗೌಡ ೧೨೨, ಈಶಾನ್ ೧೦೮ ಹಾಗೂ ರಾಜ್‌ಸಿಂಗ್ ಚೌಹಾಣ್, ಅಜಯ್ ೨೪ ರನ್ ಗಳಿಸಿದರು.

ಈ ಬೃಹತ್ ಮೊತ್ತದ ಬೆನ್ನಟ್ಟಿದ ಝೋಡಿಯಾಕ್ ಕ್ರಿಕೆಟ್ ಕ್ಲಬ್ ಭುವನ್‌ಗೌಡ ಬೌಲಿಂಗ್ ದಾಳಿಗೆ ಧೂಳಿಪಟವಾಯಿತು, ಕೇವಲ ೨೮ ಓವರ್‌ಗಳಲ್ಲಿ ೫೬ ರನ್‌ಗಳ ಅಲ್ಪಮೊತ್ತಕ್ಕೆ ಕುಸಿದು ಸೋಲೊಪ್ಪಿಕೊಂಡಿತು.

ಭುವನ್‌ಗೌಡ ೬ ವಿಕೆಟ್ ಕಬಳಿಸಿದರೆ, ಮೇಧಾಸ್ ಮುಕುಂದ್ ಹಾಗೂ ಮೋಖಿತ್.ಕೆ.ಎಸ್ ೨ ವಿಕೆಟ್ ಗಳಿಸಿದರು.