Home ಕ್ರೀಡೆ ಐಪಿಎಲ್ ೨೦೨೬ರಿಂದ ಹಿಂದೆ ಸರಿದ ಬೆನ್ ಡಕೆಟ್ಮೂರು ವರ್ಷಗಳ ನಿಷೇಧ ಸಾಧ್ಯತೆ

ಐಪಿಎಲ್ ೨೦೨೬ರಿಂದ ಹಿಂದೆ ಸರಿದ ಬೆನ್ ಡಕೆಟ್ಮೂರು ವರ್ಷಗಳ ನಿಷೇಧ ಸಾಧ್ಯತೆ

ನವದೆಹಲಿ.ಮಾ೨೪: ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಐಪಿಎಲ್ ೨೦೨೬ರಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಅಂತರರಾಷ್ಟ್ರೀಯ ಕರಿಯರ್‌ಗೆ ಆದ್ಯತೆ ನೀಡುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಐಪಿಎಲ್ ಹರಾಜಿನಲ್ಲಿ ?೨ ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ ತಂಡವು ಅವರನ್ನು ಖರೀದಿಸಿತ್ತು. ತಂಡದಲ್ಲಿ ಕೆಎಲ್ ರಾಹುಲ್ ಜೊತೆಗೆ ಓಪನರ್ ಸ್ಥಾನದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯೂ ಇತ್ತು. ಆದರೆ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಡಕೆಟ್ ಈ ಸಂಬಂಧ ಹೇಳಿಕೆ ನೀಡಿ ‘ಇದು ನನಗೆ ಬಹಳ ಕಷ್ಟದ ನಿರ್ಧಾರ. ಐಪಿಎಲ್ ವಿಶ್ವದ ಅತ್ಯುತ್ತಮ ಟೂರ್ನಿ. ಆದರೆ ನನ್ನ ಇಂಗ್ಲೆಂಡ್ ಕರಿಯರ್ ದೃಷ್ಟಿಯಿಂದ ಇದು ಸರಿಯಾದ ನಿರ್ಧಾರ,” ಎಂದು ತಿಳಿಸಿದ್ದಾರೆ.


ಮೂರು ವರ್ಷದ ನಿಷೇಧ ಭೀತಿ
ಐಪಿಎಲ್ ನಿಯಮಗಳ ಪ್ರಕಾರ ಗಾಯವಿಲ್ಲದೇ ಟೂರ್ನಿಯಿಂದ ಹಿಂದೆ ಸರಿಯುವ ಆಟಗಾರರಿಗೆ ಮೂರು ವರ್ಷಗಳ ನಿಷೇಧ ವಿಧಿಸಲಾಗುತ್ತದೆ. ಇದೇ ನಿಯಮದಡಿ ಅವರಿಗೆ ಈಗಾಗಲೇ ನಿಷೇಧ ವಿಧಿಸಲಾಗಿತ್ತು. ಇದೇ ಪರಿಸ್ಥಿತಿ ಡಕೆಟ್‌ಗೂ ಎದುರಾಗುವ ಸಾಧ್ಯತೆ ಇದೆ.


ಇತ್ತೀಚಿನ ದಿ ಅಶೆಶ್ ಸರಣಿಯಲ್ಲಿ ಡಕೆಟ್ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಐದು ಪಂದ್ಯಗಳಲ್ಲಿ ಕೇವಲ ೨೦೨ ರನ್ ಗಳಿಸಿದ್ದರು. ಜೊತೆಗೆ ಟಿ೨೦ ವಿಶ್ವಕಪ್ ವೇಳೆಯಲ್ಲಿ ಬಹುತೇಕ ಪಂದ್ಯಗಳಲ್ಲಿ ಅವಕಾಶ ಸಿಗದೆ ಬೆಂಚ್‌ನಲ್ಲೇ ಉಳಿದಿದ್ದರು.ಮುಂದೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಫಾರ್ಮ್ ಸುಧಾರಿಸಿಕೊಳ್ಳಲು ಅವರು ಐಪಿಎಲ್‌ಗೆ ವಿದಾಯ ಹೇಳಿದ್ದಾರೆ.


ಡೆಲ್ಲಿ ತಂಡವು ಇನ್ನೂ ಪರ್ಯಾಯ ಆಟಗಾರರ ಬಗ್ಗೆ ಘೋಷಣೆ ಮಾಡಿಲ್ಲ. ಆದರೆ ತಂಡದಲ್ಲಿ ಈಗಾಗಲೇ ನಿಶಾಂಕರ್,ಪೃಥ್ವಿ ಶಾ ಸೇರಿದಂತೆ ಹಲವು ಓಪನಿಂಗ್ ಆಯ್ಕೆಗಳು ಲಭ್ಯವಿವೆ.ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಶೀಘ್ರದಲ್ಲೇ ಬದಲಿಗೆ ಆಟಗಾರರನ್ನು ಘೋಷಿಸುವ ಸಾಧ್ಯತೆ ಇದೆ.