Home ಜಿಲ್ಲೆ ಕಲಬುರಗಿ ಏ.9 ರಿಂದ ಮಾಕಾಲೇಔಟ್ ಬಸವ ಮಂಟಪದಲ್ಲಿ ಬಸವತತ್ವ ದರ್ಶನ ಪ್ರವಚನ

ಏ.9 ರಿಂದ ಮಾಕಾಲೇಔಟ್ ಬಸವ ಮಂಟಪದಲ್ಲಿ ಬಸವತತ್ವ ದರ್ಶನ ಪ್ರವಚನ

ಕಲಬುರಗಿ,ಏ.7: ನಗರದ ಜೇವರಗಿ ಕಾಲೋನಿ ಮಾಕಾ ಲೇಔಟ್ ನ ಬಸವಮಂಟಪದಲ್ಲಿ ಏಪ್ರಿಲ್ 9 ರಿಂದ 20 ರವರೆಗೆ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಮತ್ತು ಬಸವ ಜಯಂತಿ ಉತ್ಸವ ಸಮಿತಿಯ ವತಿಯಿಂದ ಬಸವ ತತ್ವ ದರ್ಶನ ಪ್ರವಚನ ಏರ್ಪಡಿಸಲಾಗಿದೆ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅತ್ತಿವೇರಿ ಬಸವಧಾಮ ದ ಪೂಜ್ಯ ಬಸವೇಶ್ವರಿ ಮಾತಾಜಿ ಅವರು ಪ್ರತಿದಿನ ಸಂಜೆ 7 ರಿಂದ ಪ್ರವಚನ ಹೇಳಲಿದ್ದಾರೆ. 893ನೇ ಬಸವ ಜಯಂತಿ ಪ್ರಯುಕ್ತ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು 893ನೇ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಬಾಬುರಾವ ಶೇರಿಕಾರ್ ಅವರು ತಿಳಿಸಿದರು.
ಇಂದು ಪತ್ರಿಕಾಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,ಬಸವ ತತ್ವದರ್ಶನ ಪ್ರವಚನದ ಉದ್ಘಾಟನಾ ಕಾರ್ಯಕ್ರಮವು ಎಪ್ರಿಲ್ 9 ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಬೆಳಗಾವಿ ಕೇಂದ್ರ ಸಮಿತಿ ಜಾಗತಿಕ ಲಿಂಗಾಯತ ಮಹಾಸಭೆ ಉಪಾಧ್ಯಕ್ಷ ಜಿ.ಬಿ ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ.ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಷಟಸ್ಥಲ ಧ್ವಜಾರೋಹಣವನ್ನ ನೆರವೇರಿಸುವರು. ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಅಧ್ಯಕ್ಷ ಅಯ್ಯಣ್ಣ ನಂದಿ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ನೀಲಕಂಠ ಮೂಲಗೆ , ಚಂದು ಪಾಟೀಲ್ , ನಿತಿನ್ ವಿ ಗುತ್ತೇದಾರ್, ಸುರೇಶ್ ಸಜ್ಜನ್ , ಬಾಲರಾಜ್ ಗುತ್ತೇದಾರ್ , ಪ್ರಭುಲಿಂಗ ಮಹಾಗಾಂವ್ಕರ್ ಅವರು ಆಗಮಿಸುವರು.
ಏಪ್ರಿಲ್ 8ರಂದು ಸಂಜೆ 4.30ಕ್ಕೆ ಮಹಿಳೆಯರಿಗಾಗಿ ವಿವಿಧ ಆಟಗಳು ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.ಏಪ್ರಿಲ್ 10 ರಿಂದ ಏಪ್ರಿಲ್ 19 ರವರೆಗೆ ಪ್ರತಿದಿನ ಸಂಜೆ ಸಾಯಂಕಾಲ 6.45ಕ್ಕೆ ಷಟಸ್ಥಲ ಧ್ವಜಾರೋಹಣ ದಿಂದ ಪ್ರವಚನವನ್ನು ಪ್ರಾರಂಭ ಮಾಡಲಾಗುವುದು
ಏಪ್ರಿಲ್ 20 ರಂದು ಬೆಳಗ್ಗೆ 7.30ಕ್ಕೆ ಬಸವ ತೊಟ್ಟಿಲು ಕಾರ್ಯಕ್ರಮ ವನ್ನು ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ಮಹಿಳಾ ಘಟಕ ದಿಂದ ನೆರವೇರಿಸಲಾಗುವುದು. ಇದರ ನೇತೃತ್ವವನ್ನು ಹೀರಾಬಾಯಿ ಎಸ್ ಬಳಗಾನೂರ, ಷಟಸ್ಥಲ ಧ್ವಜಾರೋಹಣವನ್ನುಉದ್ಯಮಿ ಮೋಹನ ಯಾನಗುಂದಿ ವಹಿಸುವರು .ಅದೇ ದಿನ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಇದರ ಉದ್ಘಾಟನೆಯನ್ನು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ್ ನೆರವೇರಿಸುವರು .ಅತಿಥಿಗಳಾಗಿ ಡಾ. ಶಿವಶೆಟ್ಟಿ , ನಿಖಿಲ ಹರವಾಳ, ಡಾ. ಶಿವರಾಜ ಪಾಟೀಲ್ ಹರವಾಳ ಆಗಮಿಸುವರು. ಅದೇ ದಿನದಂದು ಬೆಳಗ್ಗೆ 10 ಗಂಟೆಗೆ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದ ಉದ್ಘಾಟನೆಯನ್ನು ಮಾಜಿ ಮಹಾಪೌರ ಎಲ್ಲಪ್ಪ ನಾಯ್ಕೋಡಿ ಅವರು ನೆರವೇರಿಸುವರು .ಅತಿಥಿಗಳಾಗಿ ಸ್ತ್ರೀರೋಗ ತಜ್ಞರಾದ ಡಾ. ಪೂಜಾ ಎಸ್ ಕಲಬುರ್ಗಿ ಆಗಮಿಸುವರು .
ಏ.20 ರಂದು ಸಂಜೆ 6 ಗಂಟೆಗೆ 893 ನೆಯ ಬಸವ ಜಯಂತಿ ಉತ್ಸವ ಹಾಗೂ ಪ್ರವಚನ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಎಸ್.ಕೆ ಕಾಂತಾ, ಶಶಿಲ್ ನಮೋಶಿ ,ದತ್ತಾತ್ರೇಯ ಪಾಟೀಲ್ ರೇವೂರ , ಅಮರೇಶ್ವರಿ ಬಾಬುರಾವ್ ಚಿಂಚನಸೂರ್ ಅವರು ಆಗಮಿಸುವರು. ಡಾ. ಬಾಬುರಾವ್ ಶೇರಿಕಾರ್ ಅಧ್ಯಕ್ಷತೆಯನ್ನು ವಹಿಸುವರು. ದೇವೇಗೌಡ ತೆಲ್ಲೂರ, ವಿಜಯಕುಮಾರ್ ಪಾಟೀಲ, ಎಸ್ ಬಿ ಕಿರಣ ಅಂಗಡಿ , ಭೀಮಾಶಂಕರ ವಿಭೂತಿ, ಶಿವಾನಂದ್ ದಾನಮಗುಡಿ ಅವರು ಅತಿಥಿಗಳಾಗಿ ಆಗಮಿಸುವರು, . ಪ್ರತಿ ದಿನ ಪ್ರವಚನದ ನಂತರ ಅನೇಕ ದಾಸೋಹಿ ಶರಣ ದಂಪತಿಗಳಿಂದ ಬಸವ ಬುತ್ತಿ ಪ್ರಸಾದವನ್ನು ಏರ್ಪಡಿಸಲಾಗಿದೆ. ಕಲ್ಬುರ್ಗಿಯ ಜಿಲ್ಲೆಯ ನಗರದ ಎಲ್ಲ ಶರಣಬಾಂಧವರು ಪ್ರತಿನಿತ್ಯ 7 ಗಂಟೆಗೆ ಆಗಮಿಸಿ ಪ್ರವಚನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಡಾ. ಬಾಬುರಾವ್ ಶೇರಿಕಾರ್ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಮಹಾಂತೇಶ್ ಕೊಣ್ಣೂರ್ , ಕೋಶಾಧ್ಯಕ್ಷ ಆದಪ್ಪ ಬಗಲಿ, ಉಪಾಧ್ಯಕ್ಷ ರವೀಂದ್ರ ಮಾಲಿ ಪಾಟೀಲ್, ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷಅಯ್ಯಣ್ಣ ನಂದಿ ,ಉಪಾಧ್ಯಕ್ಷÀ ಶಿವಕುಮಾರ್ ಧರ್ಮಗೊಂಡ, ಕಾರ್ಯದರ್ಶಿ ಡಾ. ಸಂಜೀವ ಶಟಕಾರ ,ಸಂಘಟನಾ ಕಾರ್ಯದರ್ಶಿ ನಾಗರಾಜ ಕಾಮಾ,ಕೋಶಾಧ್ಯಕ್ಷ ಸಿದ್ದರಾಮ ವಾಲಿ ,ಸದಸ್ಯರಾದ ಸತೀಶ ಸಜ್ಜನ್ ,ಮಲ್ಲಿಕಾರ್ಜುನ ಜಾಮಗೊಂಡ, ಹನುಮಂತರಾಯ ಐನೊಳಿ, ಪ್ರಸನ್ನ ವಂಜರ ಕೇಡೆ, ಸೂರ್ಯಕಾಂತ್ ಡುಮ್ಮಾ ಉಪಸ್ಥಿತರಿದ್ದರು.