Home ಜಿಲ್ಲೆ ಕಲಬುರಗಿ ಷಣ್ಮುಖ ಹುಗ್ಗಿಗೆ ಬಸವಕೇಂದ್ರದ ಸನ್ಮಾನ

ಷಣ್ಮುಖ ಹುಗ್ಗಿಗೆ ಬಸವಕೇಂದ್ರದ ಸನ್ಮಾನ

ಜೇವರಗಿ,ಏ 7: ಕರ್ನಾಟಕ ನಾಟಕ ಅಕಾಡೆಮಿ ಸುಭಾಷ್ ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ P ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ದಿನದಂದು ಜೇವರ್ಗಿ ತಾಲೂಕಿನ ಹವ್ಯಾಸಿ ರಂಗಭೂಮಿ ಕಲಾವಿದ ಷಣ್ಮುಖ ಹುಗ್ಗಿಗೆ “ವಿಶ್ವರಂಗ ಗೌರವ ಪುರಸ್ಕೃತ” ಪ್ರಶಸ್ತಿ ಪ್ರದಾನ ಮಾಡಿದ ಹಿನ್ನೆಲೆಯಲ್ಲಿ ತಾಲೂಕ ಬಸವ ಕೇಂದ್ರ ಮಹಿಳಾ ಘಟಕದ ವತಿಯಿಂದ ಷಣ್ಮುಖ ಸಾಹು ಹುಗ್ಗಿ ದಂಪತಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ಸದಾನಂದ ಎನ್ ಪಾಟೀಲ್ ಅವರು ಷಣ್ಮುಖ ಸಾಹು ಹುಗ್ಗಿ ಚಿಕ್ಕವರಾಗಿದ್ದಾಗಿನಿಂದಲೂ ತಮ್ಮಲ್ಲಿ ವಿಶೇಷ ಕಲೆಯನ್ನು ಮೈಗೂಡಿಸಿಕೊಂಡು ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಸುಮಾರು 30 ವರ್ಷಗಳಿಂದ ತಮ್ಮನ್ನು ಈ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಬಸವ ಕೇಂದ್ರ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಾಜೇಶ್ವರಿ ವಿ ಪಾಟೀಲ್ ಮಾತನಾಡಿದರು
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹುಗ್ಗಿ, ಅಖಂಡೆಪ್ಪ ಹುಗ್ಗಿ, ಸಿದ್ದು ಅಂಕುಶದೊಡ್ಡಿ, ಶಶಿಧರ್ ಎಂ ಬಿಳವಾರ, ವಿಜಯಕುಮಾರ್ ಪಾಟೀಲ್ ಸೇಡಂ, ಶಿಕ್ಷಕರಾದ ಸುನಿಲ್ ಕುಮಾರ್ ಗಡಗಿ, ವಿಜಯಲಕ್ಷ್ಮೀ ಪಾಟೀಲ್, ರಾಜೇಶ್ವರಿ ಹಿರೇಗೌಡ, ಕಾವೇರಿ ಪಾಟೀಲ್ ಉಪಸ್ಥಿತರಿದ್ದರು.