
ಕಲಬುರಗಿ,ಮಾ.10-ಬಸವಜಯಂತಿ ಅರ್ಥಪೂರ್ಣವಾಗಿ ಆಚರಿಸಬೆಕು ಎನ್ನುವ ಉದ್ದೆಶದಿಂದ ಮಠಾಧೀೀಶರ, ಸಮಾಜದ ಹಿರಿಯ, ಕಿರಿಯ ಮುಖಂಡರ ಸಾಮುಹಿಕವಾದ ರಾಜಕೀಯ ರಹಿತವಾದ ಆಚರಣೆ ಮಾಡಬೆಕಾಗಿದೆ. ಕೇವಲ 20 ಜನ ಸಭೆ ಸೇರಿ ಅಧ್ಯ್ಯಕ್ಷರ ಆಯ್ಕೆ ಮಾಡಿರುವುದು ಸಮಾಜದಲ್ಲಿ ಅಸಮಾಧಾನÀ ಬುಗಿಲೆದ್ದಿದೆ ರಾಜಕಾರಣಿ ರಾಜಕೀಯ ಮಾಡಲಿ ಸಮಾಜದ ವಿಷಯದಲ್ಲಿ ರಾಜಕೀಯ ತರಬಾರದು ಎನ್ನುವುದು ಸಮಾಜದಲ್ಲಿ ಚರ್ಚೆಯಾಗುತ್ತಿದೆ ಸಮಾಜಕ್ಕಾಗಿ ಎಲೆ ಮರೆಯ ಕಾಯಿಯಂತೆ ದುಡಿಯುವವರು ವಿವಿಧ ಕ್ಷೇತ್ರದಲ್ಲಿ ಇದ್ದಾರೆ ಶಿಕ್ಷಣ ಮಾಧ್ಯಮ, ಉದ್ಯಮ, ಸಾಹಿತ್ಯ, ವೈದ್ಯಕೀಯ ಹಲವಾರು ಕ್ಷೇತ್ರಗಳಲ್ಲಿ ಸಾಧಕರು ಸಮಾಜಕ್ಕಾಗಿ ದುಡಿಯುವವರು ಇರುವುದರಿಂದ ಅಂತವರನ್ನು ಗುರುತಿಸಿ ಅವರುಗಳ ನೇತೃತ್ವದಲ್ಲಿ ಮಠಾಧೀಶರ ಮಾರ್ಗದರ್ಶನದಲ್ಲಿ ಜಯಂತಿ ಆಚರಿಸುವುದು ಬಿಟ್ಟು ಮಹಾಸಭೆಯ ಅಧ್ಯಕ್ಷರು ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಸಹಕರಿಸಿದ ರಾಜಕಾರಣಿಗಳ ಋಣ ತೀರಿಸಲು ಬಸವ ಜಯಂತಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮಾತನಾಡುವ ಸಂದರ್ಭಕ್ಕಾಗಿ ಕಾಯುತ್ತ ಕುಳಿತಿದ್ದು ಯಾವ ಸಂದರ್ಭದಲ್ಲಾದರು ಸ್ಪೋಟ ವಾಗಬಹುದು ಒಬ್ಬರು ಮಠಾಧೀಶರಿಲ್ಲದೆ ಸಮಾಜದ ಮುಖಂಡರುಗಳಿಲ್ಲದೆ ಬರಿ ರಾಜಕೀಯ ಮುಖಂಡರೆ ಸೇರಿ ಅಧ್ಯಕ್ಷರ ಆಯ್ಕೆ ಮಾಡಿದರೆ ನಡೆಯಲ್ಲ.
ಇದು ಸಮಾಜದ ಪೂಣ್ಯಪುರುಷನ ಜಯಂತಿಯ ಅಧ್ಯಕ್ಷರ ಆಯ್ಕೆ ಇದಕ್ಕೆ ಸರ್ವರ ಅಭಿಪ್ರಾಯವು ಮುಖ್ಯವಾಗುತ್ತದೆ. ಹೀಗಾಗಿ ಬರುವ ಮಾ.20 ರಂದು ಇಳಿಹೋತ್ತು 5 ಗಂಟೆಗೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣಮಂಟಪದಲ್ಲಿ ಮಠಾಧೀಶರ ಸಾನಿಧ್ಯದಲ್ಲಿ ಶಿಕ್ಷಣ ಮಾಧ್ಯಮ, ಉದ್ಯಮ, ವೈದ್ಯಕೀಯ ವಿಶೆಷವಾಗಿ ಮಹಿಳಾ ಕ್ಷೇತ್ರದ ಸಾಧಕರ ಸರ್ವರ ಸಾಮೂಹಿಕ ನಾಯಕತ್ವದಲ್ಲಿ ಬಸವಜಯಂತಿ ಪೂರ್ವ ಪೂರ್ವಭಾವಿ ಸಭೆ ಕರೆಯಲಾಗಿದ್ದು ಸಮಾಜದ ಹಿತ ಚಿಂತಕರು ಆಗಮಿಸಿ ಸಭೆ ಯಶಸ್ವಿಗೋಳಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯತ್ವ ಅಭಿಯಾನದ ಪ್ರಮುಖರಾದ ಎಂ.ಎಸ್. ಪಾಟೀಲ ನರಿಬೋಳ ಪ್ರಕಟಣೆಯಲ್ಲಿ ಕೋರಿದ್ದಾರೆ.


























