Home ಜಿಲ್ಲೆ ಕಲಬುರಗಿ ಕಲಾವಿದ ಶಿವ ಎಸ್.ಮುನೋಳಿಗೆ ನುಡಿನಮನ

ಕಲಾವಿದ ಶಿವ ಎಸ್.ಮುನೋಳಿಗೆ ನುಡಿನಮನ

ಕಲಬುರಗಿ,ಮಾ.10-ಕರ್ನಾಟಕ ಆಧುನಿಕ ಕಲೆಯ ಬೆಳವಣಿಗೆಗೆ ಉತ್ತೇಜನ ನಾಡಿನ ಹಿರಿಯ ಚಿತ್ರಕಲಾವಿದ ಶಿವ ಎಸ್. ಮುನೋಳಿ ಅವರು ಕರ್ನಾಟಕದಲ್ಲಿ ಆಧುನಿಕ ಕಲೆಯ ಬೆಳವಣಿಗೆಯನ್ನು ಪ್ರೋತ್ಸಾಹಿಸಿ, ಉತ್ತೇಜನ ನೀಡಿದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದರು ಎಂದು ನಾಡೋಜ ಡಾ. ಜೆ.ಎಸ್. ಖಂಡೇರಾವ್ ಹೇಳಿದರು.
ನಗರದ ಬಿಸಿಲು ಆರ್ಟ್ ಗ್ಯಾಲರಿ ಮತ್ತು ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 08.03.2026 ರಂದು ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ನಮ್ಮನ್ನಗಲಿದ ಹಿರಿಯ ಚಿತ್ರಕಲಾವಿದ ಶಿವ ಎಸ್. ಮುನೋಳಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲೆಯಲ್ಲಿ ಏನಾದರೂ ಹೊಸತನವನ್ನು ಸೃಷ್ಠಿಸಬೇಕೆಂಬ ಹುಮ್ಮಸ್ಸಿನ ಮತ್ತು ಪ್ರಾಮಾಣಿಕ ಕಲಾವಿದರಾಗಿದ್ದರು. ಕರ್ನಾಟಕದ ದೃಶ್ಯಕಲಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ‘ನಾವು ನಾಲ್ವರು’ ಕಲಾ ಪ್ರದರ್ಶನದ ಸಂಸ್ಥಾಪಕ ಸದಸ್ಯರಾಗಿದ್ದರು ಎಂದು ಅವರು ತಿಳಿಸಿದರು.
ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಿಂದ ಲಲಿತಕಲೆಯಲ್ಲಿ ಪದವಿ ಪಡೆದಿದ್ದ ಇವರು ನಿಸರ್ಗಚಿತ್ರ ಸ್ಟಿಲ್‍ಲೈಫ್, ಅಮೂರ್ತಚಿತ್ರ ಮತ್ತು ಮುದ್ರಣ ಕಲೆಯಲ್ಲಿ ಸಿದ್ದಹಸ್ತರಾಗಿದ್ದರು. ಇವರು ಸಾವಿರಾರು ರೇಖಾಚಿತ್ರಗಳನ್ನು
ರಚಿಸಿ ಜನಮನ್ನಣೆ ಪಡೆದಿದ್ದರು. ಎಸ್.ಎಸ್. ಮುನೋಳಿ ಅವರ ಅಗಲಿಕೆ ನಾಡಿನ ದೃಶ್ಯಕಲಾ ಕ್ಷೇತ್ರಕ್ಕೆ ತುಂಬಲಾರದ ಹಾನಿಯಾಗಿದೆ. ಮುನೋಳಿ ಅವರ ಕಲಾಕೃತಿಗಳು ಯುವ ಕಲಾವಿದರಿಗೆ ಇಂದಿಗೂ ಅಧ್ಯಯನ ಯೋಗ್ಯವಾಗಿವೆ ಎಂದು ಅವರು ವಿವರಿಸಿದರು.
ಚಿತ್ರಕಲಾವಿದರಾದ ಬಸವರಾಜ ಎಲ್. ಜಾನೆ, ನಾರಾಯಣ ಬೋಸಾವಳೆ, ಬಾಬುರಾವ್ ಎಚ್. ಅಂಬಾರಾಯ ಚಿನಮಳ್ಳಿ, ಸಂಗಯ್ಯ ಹಳ್ಳದಮಠ, ಡಾ. ಮಲ್ಲಿಕಾರ್ಜುನ ಬಾಗೋಡಿ, ಸಿದ್ದು ಮರಗೋಳ, ರಘುಪಾಲ್ ರೆಡ್ಡಿ, ಧನಂಜಯ ಕಾನಿಹಾಳ, ಸಂಜಯ ಕಾನಿಹಾಳ, ಮಲ್ಲಿಕಾರ್ಜುನ ಕೊರಳ್ಳಿ, ರಾಮಗಿರಿ ಪೊಲೀಸ್ ಪಾಟೀಲ್, ಸೂರ್ಯಕಾಂತ ನಂದೂರ, ಗಿರೀಶ ಕುಲಕರ್ಣಿ, ಗೌರಿಶಂಕರ ಅಂದಾನಿ, ರಾಮಕೃಷ್ಣ ಕುಲಕರ್ಣಿ, ಕುಪೇಂದ್ರ, ಅಭಿಜಿತ ಎಸ್.ಕೆ. ಸೇರಿದಂತೆ ಅನೇಕ ಹಿರಿಯ-ಕಿರಿಯ ಕಲಾವಿದರು ಆಗಮಿಸಿ ಮುನೋಳಿ ಅವರಿಗೆ ನುಡಿನಮನ ಸಲ್ಲಿಸಿದರು. ಬಿಸಿಲು ಆರ್ಟ್ ಗ್ಯಾಲರಿ ಮುಖ್ಯಸ್ಥ ವಿ.ಬಿ. ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ ಪಿ. ನಿರೂಪಿಸಿ ವಂದಿಸಿದರು.