
ಬೀದರ್: ಏ.೮:ಕಲಾವಿದರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಯೋಗ್ಯ ಗೌರವ ನೀಡಿದಾಗ ಮಾತ್ರ ಅವರು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅಭಿಪ್ರಾಯಪಟ್ಟರು. ಅವರು ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಹಾಗೂ ಗಡಿ ಜಿಲ್ಲೆಗಳ ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವಕುಮಾರ ಅತಿವಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ‘ಬೀದರ್ ಬಿಂದಾಸ್’ ಪತ್ರಿಕೆಯ ಸಂಪಾದಕರಾದ ಸುನೀಲ್ ಭಾವಿಕಟ್ಟಿ ಹಾಗೂ ಜೀವನ ಪ್ರಕಾಶ ಕಲ್ಚರಲ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ದೀಲಿಪಕುಮಾರ ಕಾಡವಾದ ಉಪಸ್ಥಿತರಿದ್ದರು.
ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಮುದಾಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕ ನುಡಿ ಹೇಳಿದರು. ಸಂಬುದ್ದ ಮುದಾಳೆ ಸ್ವಾಗತಿಸಿದರು. ಶಿವಕುಮಾರ ಭೋಸಲೆ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ಜಾನಪದ ವೈಭವ ಕಂಗೊಳಿಸಿತು. ಬೀದರಿನ ಹಿರಿಯ ಕಲಾವಿದರಾದ ದೀಲಿಪ ಕಾಡವಾದ, ಅರ್ಜುನ ಚಿಕ್ಲಿ, ಲಕ್ಷ್ಮೀ ಸಿಂಧೆ ತೋರಣ ಮತ್ತು ರತ್ನಮ್ಮ ಅವರು ಕಟ್ಟುವ ಮತ್ತು ಬೀಸುವ ಸಂಪ್ರದಾಯಿಕ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ನರಸಿಂಗ್ ಸಾಮ್ರಾಟ್ ಅವರ ತಂಡ ಕನ್ನಡ ಚಿತ್ರಗೀತೆಗಳು, ಅಂಬೇಡ್ಕರ್ ಹಾಡುಗಳು, ಕೋಲಾಟ ಹಾಗೂ ಬುಲಾಯಿ ಹಾಡುಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆಯಿತು.
ಇದಲ್ಲದೆ, ಸವಿತಾ ಮತ್ತು ತಂಡದಿAದ ಸಂಪ್ರದಾಯಿಕ ಹಾಡುಗಳು, ಮಲ್ಲಪ್ಪ ಮತ್ತು ತಂಡದಿAದ ಭಾವಗೀತೆಗಳು, ಸಂಬುದ್ದ ಮತ್ತು ತಂಡದಿAದ ಸುಗಮ ಸಂಗೀತ, ಅಕ್ಕ ಮಹಾದೇವಿ ಕೋಲಾಟ ತಂಡದಿAದ ಮಹಿಳಾ ಕೋಲಾಟ ನೃತ್ಯ ಹಾಗೂ ರಮೇಶ್ ಅಮಲಾಪುರ ಅವರಿಂದ ಕನ್ನಡ ಚಿತ್ರಗೀತೆಗಳು ಪ್ರದರ್ಶನಗೊಂಡವು.
ಈ ಕಾರ್ಯಕ್ರಮ ಜಾನಪದ ಸಂಸ್ಕೃತಿಯ ವೈಭವವನ್ನು ಹೊರಹೊಮ್ಮಿಸುವುದರ ಜೊತೆಗೆ ಅದರ ಮಹತ್ವವನ್ನು ಜನರಿಗೆ ಸಮೀಪಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.




















