
ಕಲಬುರಗಿ,ಜ.9-ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕ ಮಾಡಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ಪಿ.ಎಸ್.ಅವರಿಗೆ ನವ ಕರ್ನಾಟಕ ಸಂಗೀತ ಪದವೀಧರ ಸಂಘದ ನಿಯೋಗ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಿತು.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಕಳೆ 15 ವರ್ಷಗಳಿಂದ ಸಂಗೀತ ಶಿಕ್ಷಕರ ನೇಮಕಾತಿ ನಡೆದಿರುವುದಿಲ್ಲ. ಆದರಿಂದ ಸಂಗೀತ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಹಾಗೂ ಹೊಸದಾಗಿ ಆರಂಭವಾಗಿರುವ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದರ ಕುರಿತು ಮನವಿ ಮಾಡಿಕೊಂಡಾಗ ಹಿಂದಿನ ನೇಮಕಾತಿ ಮತ್ತು ನೇಮಕಾತಿ ಮಾಡಿಕೊಳ್ಳುವ ಅನೇಕ ವಿಚಾರಧಾರೆಗಳನ್ನು ಪದವೀಧರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಆಗಬೇಕಾಗಿರುವ ನೇಮಕಾತಿಗಳ ಬಗ್ಗೆ ಮತ್ತ ಹಿಂದೆ ನೇಮಕಾತಿ ಆದಾಗ ಖಾಲಿ ಇರುವ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡು ನೇಮಕಾತಿ ಮಾಡಿಕೊಳ್ಳುವುದಾಗಿ ನಿಯೋಗಕ್ಕೆ ಅವರು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಬಂಡಯ್ಯ ಹಿರೇಮಠ ಸುಂಟನೂರ ಪದವೀಧರರಾದ ಸತ್ಯವತಿ ದೇಶಪಾಂಡೆ, ಪ್ರಭು ಶಂಕರ ದಾವಣಗೆರೆ, ಶ್ರೀಶೈಲ್ ಬಿರಾದಾರ, ಮಂಜುನಾಥ್ ಸ್ವಾಮಿ, ಶಂಕರ ಹಿರೇಮಠ, ಸಂತೋಷ ಹೂಗಾರ್, ಶೇಖರ್ ಗಲಗ, ರಹಿಮನ್ ಸಾಬ್ ನದಾಫ್,ರಕ್ಷಿತ್ ದಾವಣಗೆರೆ ಇನ್ನೂ ಅನೇಕ ಪದವೀಧರರು ಹಾಜರಿದ್ದರು.

























