Home ಜಿಲ್ಲೆ ಕಲಬುರಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅಮೂಲ್ಯಗೆ ಜಿಲ್ಲೆಗೆ 6ನೇ ರ್ಯಾಂಕ್

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅಮೂಲ್ಯಗೆ ಜಿಲ್ಲೆಗೆ 6ನೇ ರ್ಯಾಂಕ್

ಕಲಬುರಗಿ,ಏ.26-ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಗರದ ಬೃಂದಾವನ ಕಾಲೋನಿಯ ತಿರುಮಲ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಗುರುಕುಲ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಯು.ಶೀಲವಂತ ಅವರು ಶೇ.89.28 ರಷ್ಟು ಅಂಕ ಪಡೆದು ಜಿಲ್ಲೆಗೆ 6ನೇ ರ್ಯಾಂಕ್ ಪಡೆದಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆ ಅಧ್ಯಕ್ಷ ಸುರೇಶ ಬಿ.ಪತಂಗೆ, ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯ ರೇವತಿ ಆರ್.ಚೆಟ್ನಳ್ಳಿಕರ್, ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.