Home ಜಿಲ್ಲೆ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಕೆ ಅವಶ್ಯಕ: ಸಂಗನಬಸವ ಶಿವಾಚಾರ್ಯರು

ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಕೆ ಅವಶ್ಯಕ: ಸಂಗನಬಸವ ಶಿವಾಚಾರ್ಯರು

ಕೊಲ್ಹಾರ:ಫೆ.11: ಪ್ರಸ್ತುತ ಕಲಿಕೆಯ ಜೊತೆಗೆ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಮನಗೂಳಿ ಹಿರೇಮಠದ ಪ.ಬ್ರ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ರೋಣಿಹಾಳ ಗ್ರಾಮದ ಸಂಗನಬಸವ ವಿದ್ಯಾವರ್ಧಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ, ಸಂಗನಬಸವ ಉತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು ಶೈಕ್ಷಣಿಕ ರಂಗದ ಪ್ರತಿ ಹಂತದಲ್ಲೂ ಪಾಶ್ಚಾತ್ಯಿಕರಣ ಹಾಸುಹೊಕ್ಕಾಗಿದೆ, ಪಾಶ್ಚಾತ್ಯಿಕರಣದ ಮದ್ಯ ಮಕ್ಕಳಿಗೆ ದೇಶಿಯ ಸಂಸ್ಕøತಿ, ಆಚಾರ, ವಿಚಾರದ ತಿರುಳು ತಿಳಿಸುವ ಕಾರ್ಯ ನಡೆಯಬೇಕಿದೆ ಎಂದರು.

ಸಂಗನಬಸವ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರೇಶ್ ಮನಗೂಳಿ ಮಾತನಾಡಿ ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ಆಹಾರ ಪದ್ಧತಿಯು ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಮಕ್ಕಳಿಗೆ ದೇಶಿಯ ಹಾಗೂ ಸಾವಯವ ಕೃಷಿಯ ಆಹಾರವನ್ನು ದೈನಂದಿನ ಪದ್ಧತಿಯಲ್ಲಿ ಅಳವಡಿಸಬೇಕು ಇದು ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಹಕಾರಿಯಾಗುತ್ತದೆ ಎಂದರು.
ಸಾವಯವ ಕೃಷಿ ಪದ್ಧತಿಯು ದೇಶಿಯ ಪದ್ಧತಿಯಾಗಿದ್ದು ರೈತರು ಸಾವಯವ ಕೃಷಿಯ ಕಡೆಗೆ ಹೆಚ್ಚಿನ ಒಲವು ತೋರಬೇಕು ಎಂದರು.

ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ ಕಲಿಕೆಯ ಕೊನೆಯ ಘಟ್ಟದಲ್ಲಿ ಜರುಗುವ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ವಿಕಸನಕ್ಕೆ ಸಹಕಾರಿಯಾಗುತ್ತವೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಕುವ ಮಹಾನ್ ನಾಯಕರುಗಳ ವೇಷಭೂಷಣಗಳಿಂದ ದೇಶಭಕ್ತಯ ಪ್ರೇರಣೆ ದೊರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಗನಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಸಂಗನಬಸವ ಶಾಲೆಯಲ್ಲಿ ಕಲಿತು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ರಾಜಶೇಖರಯ್ಯ ಹಿರೇಮಠ, ಮಹಾಂತಯ್ಯ ಮಠಪತಿ ಸಾನಿಧ್ಯ ವಹಿಸಿದ್ದರು. ಶಿವಗೊಂಡ ಪಾರಗೊಂಡ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಅರಸು ಹಿಂದುಳಿದ ವರ್ಗ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಲ್ಲನಗೌಡ ಜಿ. ಬಿರಾದಾರ ಉದ್ಘಾಟನೆ ನೆರವೇರಿಸಿದರು. ಅರುಣ ಡಿ. ಜೇವರಗಿ, ಬಸವರಾಜ ಪೂಜಾರಿ, ಸುಭಾಸ ಹ. ತಂಬ, ಮಲ್ಲು ದೇಸಾಯಿ, ಜಿ.ಆರ್ ನ್ಯಾಮಗೊಂಡ, ವಿರುಪಾಕ್ಷಿ ಮುತ್ತಗಿ, ಓಂಕಾರಗೌಡ ಪಾಟೀಲ, ಗುರನಗೌಡ ಬಿರಾದಾರ, ಗಂಗಾಧರ ಚೌಧರಿ, ವಿ.ಎಚ್ ಪೂಜಾರಿ, ಸಂಗಮೇಶ್ವರ ಜಂಗಶೆಟ್ಟಿ, ಆಡಳಿತಾಧಿಕಾರಿ ಅಪ್ಪು ಪತಂಗಿ ಸಹಿತ ಇನ್ನಿತರರು ಉಪಸ್ಥಿತರಿದ್ದರು.
ಮಂಜುನಾಥ್ ನಿರೂಪಿಸಿದರು.