ಜ.2ರಂದು ಅಕ್ಕಮಹಾದೇವಿ ಚಲನ ಚಿತ್ರ ಬಿಡುಗಡೆ: ವಿಷ್ಣುಕಾಂತ ಬಿ.ಜೆ

ಬೀದರ್: ಡಿ.17:ಜನೆವರಿ 2ರಂದು ಬೀದರ್ ನಗರದ ಸಪ್ನಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಅಕ್ಕಮಹಾದೇವಿಯ ಚಲನಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ, ನಿರ್ದೇಶಕರು ಹಾಗೂ ನಟ ವಿಷ್ಣುಕಾಂತ ಬಿ.ಜೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ತಿಂಗಳ 19ರಂದು ಚಲನಚಿತ್ರ ಬಿಡುಗಡೆಗೊಳಿಸಲು ತಿರ್ಮಾನಿಸಲಾಗಿತ್ತು. ಆದರೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಸೆ ಬಹು ಅರ್ಥಪೂರ್ಣ ಅಷ್ಟೆ ಅದ್ದೂರಿಯಾಗಿ ಆಚೆಇಸುವ ಹಿನ್ನೆಲೆಯಲ್ಲಿ ಇದನ್ನು ಮುಂದೂಡಿ ಜನೆವರಿ 2 2026ರಂದು ಕಲ್ಯಾಣ ಕರ್ನಾಟಕದ ಕಿರಿಟ ಬೀದರ್‍ನಿಂದಲೇ ಚಿತ್ರ ಬಿಡುಗಡೆಗೊಳಿಸುವ ಇರಾದೆ ಹೊಂದಿದ್ದೇವೆ. ನಾನು ಕೌಶಿಕ ರಾಜನ ಪಾತ್ರದಲ್ಲಿ ಅಭಿನಯಿಸಿದ್ದು, ನಟಿ ಸುಲಕ್ಷಾ ಅಕ್ಕಮಹಾದೇವಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜುನಿಯರ್ ಅಕ್ಕಮಹಾದೇವಿಯಾಗಿ ದೀಕ್ಷಾ ಹಾಗೂ ನಿಧಿ ಪಾತ್ರ ನಿರ್ವಹಿಸಿದ್ದಾರೆ. ಇವರೆಲ್ಲರು ಬೀದರ್ ಜಿಲ್ಲೆಯವರೆ ಆಗಿದ್ದು, ಸುಮಾರು 30ಕ್ಕೂ ಹೆಚ್ಚು ಕಲಾವಿದರು ಬೀದರ್ ಜಿಲ್ಲೆಯವರಾಗಿರುವುದು ಅಭಿಮಾನದ ಸಂಗತಿ. ಈ ಎಲ್ಲ ಕಲಾವಿದರು ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ಸಾರೆ. ಈ ಕಲಾವಿದರು ಹೊಸಬರಾಗಿದ್ದಾರೆ ಎನ್ನುವುದು ತೆರೆಯಲ್ಲಿ ಕಾಣುವುದಿಲ್ಲ. ಒಳ್ಳೆಯ ಅನುಭವಿ ಕಲಾವಿದರಂತೆ ಅಭಿನಯಿಸಿದ್ದಾರೆ ಎಂದರು.
ಈ ಚಿತ್ರಕ್ಕೆ ಸಂಗೀತ ನೀಡಿರುವ ಪಳನಿ ಡಿ ಸೇನಾಪತಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಗರಡಿಯಲ್ಲಿ ಸುಮಾರು 25 ವರ್ಷಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಜಗನ್ಮಾತೆ ಅಕ್ಕಮಹಾದೇವಿಯ ಚಲನಚಿತ್ರಕ್ಕೆ ಬೇಕಾಗಿರುವ ನನ್ನ ಅಣತಿಯಂತೆ ಸಂಗೀತ ನೀಡಿರುತ್ತಾರೆ. ಇನ್ನೊಂದು ವಿಶೇಷ ಸಂಗತಿ ಎಂದರೆ, ಈ ಚಲನಚಿತ್ರದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿಯ 22 ವಚನಗಳಿಗೆ ರಾಗ ಸಂಯೋಜನೆ ಮಾಡಲಾಗಿದೆ. ನಾನು ಬರೆದಿರುವ ನಾಲ್ಕು ಸಾಂದರ್ಭಿಕ ಹಾಡುಗಳಿವೆ. ಇದೊಂದು ಸಂಗಿಥ ನಿರ್ದೇಶಕನ ಅತ್ಯತ್ತಮ ಚಿತ್ರವೆಂದು ಪರಿಗಣಿಸಲಾಗಿದೆ. ಖ್ಯಾತ ಗಾಯಕ ರಾಜೇಶಕೃಷ್ಣ ಸಹ ಗಾಯನ ಮಾಡಿದ್ದಾರೆ. ಇವರ ಗಾಯನಕ್ಕೆ ಖ್ಯಾತ ಕೋರಿಯೊ ಗ್ರಾಫರ್ ಮದನ ಹರಡಿಯವರದ್ದಾಗಿದೆ. ಛಾಯಾಗ್ರಾಹಕ ರವಿ ಸೂವರ್ಣ ಸಂಕಲನ ಅಮಿತ ಜವಳಕರ್ ಡಿ.ಐ ಅಮಿತಾವ ಡೆಬ್, ಸಿ ಚಂದ್ರಶೇಖರ ಸೌಂಡ್ ಇಂಜಿನಿಯರ್ ಆಗಿದ್ದಾರೆ. ಪ್ರಸಾದ ಲ್ಯಾಬ್‍ನಲ್ಲಿ ಧ್ವನಿ ಮುದ್ರಣಗೊಂಡಿರುತ್ತದೆ. ನನ್ನ ನಿರ್ದೇಶನದಲ್ಲಿ ನಿರ್ಮಿಸಲ್ಪಟ್ಟ ಈ ಚಲನಚಿತ್ರಕ್ಕೆ ಉಮೇಶ ಸಲಗರ ಸಹ ನಿರ್ದೇಶಕನಾಗಿದ್ದು, ನಿಖಿಲರಾಜ್ ಹಾಗೂ ಕೇದಾರನಾಥ ಸ್ವಾಮಿ ಸಹಾಯಕ ನಿರ್ದೇಶಕರಾಗಿದ್ದಾರೆ. ಅಲ್ಲಮ ಪ್ರಭುವಿನ ಪಾತ್ರದಲ್ಲಿ ಸುಚೇಂದ್ರ ಪ್ರಸಾದ, ಮಂತ್ರ ವಸಂತಕನ ಪಾತ್ರದಲ್ಲಿ ತಬಲಾನಾಣಿ, ಅಕ್ಕಮಹಾದೇವಿಯ ತಾಯಿಯ ಪಾತ್ರದಲ್ಲಿ ಮೈಸೂರು ಹಿಲನ್ ಹಾಗೂ ತಂದೆಯ ವೈಜಿನಥ ಬಿರಾದಾರ ಜ್ಯಾಂತಿ ಅಭಿನಯಿಸಿದ್ದಾರೆ. ಇದು ನನ್ನ ಐದನೇ ಚಲನಚಿತ್ರವಾಗಿದ್ದು, ಇದು ಸಂಪೂರ್ಣ ಶರಣ ಸಂಪ್ರದಾಯ, ಸಮಾಜ ಸುಧಾರಣೆ ಹಾಗೂ ಧಾರ್ಮಿಕ ಚಿಂತನೆಯ ನೆಲಗಟ್ಟಿನಲ್ಲಿ ನಿಂತಿದೆ ಎಂದು ವಿಷ್ಣುಕಾಂತ ತಿಳಿಸಿದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬುವಾಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೆಶ ಚನಶೆಟ್ಟಿ, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಬಸವಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಪತ್ರಿಕಾಗೋಷ್ಟಿಯಲ್ಲಿದ್ದರು.