
ಕಲಬುರಗಿ,ಏ.26-ಸಿದ್ಧರಾಮಯ್ಯ ನೇತೃತ್ವದ ಸರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಗೋವಿಂದರಾವ ನೇತೃತ್ವದಲ್ಲಿ ಪ್ರಾದೇಶಿಕ ಅಸಮತೋಲನಾ ಸಮಿತಿ ರಚನೆ ಮಾಡಿ ಕಾಲಮಿತಿಯಲ್ಲಿ ವರದಿ ಸಲ್ಲಿಸಲು ನಿರ್ದೇಶನ ನೀಡಿರುವಂತೆ ಗೋವಿಂದರಾವ್ ಸಮಿತಿ ಸರಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ.
ಈ ವರದಿಗೆ ಸಂಬಂಧಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕೋರ್ ಕಮಿಟಿಯಲ್ಲಿ ಪರಾಮರ್ಶೆ ನಡೆಸಲಾಯಿತು. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸರ್ವಾನುಮತದ ನಿರ್ಣಯದಂತೆ ಆದಷ್ಟು ಶೀಘ್ರ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗಿಣ ಕಾಲಮಿತಿಯ ಅಭಿವೃದ್ಧಿ ಕುರಿತು ಆದಷ್ಟು ಶೀಘ್ರ ಶಿಕ್ಷಣ ಸಂಸ್ಥೆಗಳ ಮತ್ತು ಸಂಘ ಸಂಸ್ಥೆಗಳ ಸಂಯೋಗದಲ್ಲಿ ಆದಷ್ಟು ಶೀಗ್ರ ಬೃಹತ್ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವದೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಬಸವರಾಜ ದೇಶಮುಖ, ಸಂಸ್ಥಾಪಕ ಅಧ್ಯಕ್ಷರಾದ ಡಾ. ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಗೋವಿಂದರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ಸಮಿತಿ ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ ಮತ್ತು ಇತರೆ
ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದ ಸ್ಥಾನದಲ್ಲಿರುವ ಬಗ್ಗೆ ಉಲ್ಲೇಖಿಸಿರುವ ಬಗ್ಗೆ ಕಲ್ಯಾಣದ ಸಚಿವರು, ಸಂಸರು, ಶಾಸಕರು, ಗಂಭೀರವಾಗಿ ಪರಿಗಣಿಸಬೇಕೆಂದು ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ರವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ಪರಿಣಿತ ತಜ್ಞರಾದ ಪೆÇ್ರ. ಆರ್.ಕೆ. ಹುಡಗಿ, ಗೋವಿಂದರಾವ್ ನೇತೃತ್ವದ ಸಮಿತಿಯ ಸದಸ್ಯರು ಮತ್ತು ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರು ಆದ ಡಾ.
ಸಂಗೀತಾ ಕಟ್ಟಿ, ಪೆÇ್ರ. ಸನಾವುಲ್ಲಾ ಮಾತನಾಡಿ ಕಲ್ಯಾಣ ಕರ್ನಾಟಕದ ಸರ್ವಾಂಗಿಣ ಅಭಿವೃದ್ಧಿಗೆ ಕಾಲಮಿತಿಯ ಕ್ರೀಯಾ ಯೋಜನೆ ಹಮ್ಮಿಕೊಳ್ಳುವುದು ಅತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಲ್ಯಾಣದ
ಸಚಿವರು, ಸಂಸದರು, ಶಾಸಕರುಗಳನ್ನೊಳಗೊಂಡಂತೆ ದುಂಡು ಮೇಜಿನ ಸಭೆಗಳು ಮತ್ತು ಬೃಹತ್ ವಿಚಾರ ಸಂಕಿರಣಗಳು ನಡೆಸಿ ಸರಕಾರಕ್ಕೆ ಕಲ್ಯಾಣದ ಪ್ರಾದೇಶಿಕ ಅಸಮತೋಲನೆ ನಿವಾರಣೆ ಬಗ್ಗೆ ಬಲವಾದ ಒತ್ತಡ ತರಲು ಸಭೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.
ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶಕ ದೀರ್ಘ ಕಾಲದ ಹೋರಾಟ ಮತ್ತು ಬಲವಾದ ರಾಜಕೀಯ ಇಚ್ಛಾಶಕ್ತಿಯಿಂದ ಸಂವಿಧಾನದ 371ನೇ (ಜೆ) ಕಲಂ ಸಿಕ್ಕಿರುವುದರಿಂದ ನಮ್ಮ ಪ್ರದೇಶದ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸುಗಳಲ್ಲಿ 100ರಷ್ಟು ಲಾಭವಾಗಿದೆ, ನೇಮಕಾತಿಗಳಲ್ಲಿ ಅನುಷ್ಠಾನಾಧಿಕಾರಿಗಳ ನಿರ್ಲಕ್ಷದಿಂದ ನೇಮಕಾತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ,
ಅದರಂತೆ, ಮುಂಬಡ್ತಿಗಳು ಸಹ ಸಹಜ ಪ್ರಕ್ರಿಯೆಯಂತೆ ನಡೆಯದೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮಾನಸಿಕ ಹಿಂಸೆಯ ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಕಲ್ಯಾಣದ ಸಚಿವರು, ಗಂಭೀರವಾಗಿ ಪರಿಗಣಿಸಲು ಸಭೆಯಲ್ಲಿ ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು. ಮುಂದುವರೆದು, ಅವರು ಈಗಾಗಲೇ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 371ನೇ(ಜೆ) ಕಲಂ ಅನುಷ್ಠಾನ ಸಂಪುಟ ಉಪ ಸಮಿತಿಯ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆಯವರ ಗಮನಕ್ಕೆ ತಂದಿರುವಂತೆ ಆದಷ್ಟು ಶೀಘ್ರ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಕುರಿತು ಮತ್ತು 371ನೇ(ಜೆ) ಕಲಂ ಸಾಧನೆಯ ಆಶೆಯ ಬಗ್ಗೆ ಶಿಕ್ಷಣ ಸಂಸ್ಥೆಗಳ,
ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರ ದಿನಾಂಕವನ್ನು ನಿಗದಿ ಮಾಡಿ ವಿಭಾಗಿಯ ಕೇಂದ್ರ ಕಲಬುರಗಿಯಲ್ಲಿ ಬೃಹತ್ ವಿಚಾರ ಸಂಕಿರಣ ಹಮ್ಮಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವದೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ. ಸಂಗೀತಾ ಕಟ್ಟಿಮನಿ ಮತ್ತು ಬಸವಶ್ರೀ ಪ್ರಶಸ್ತಿಗೆ ಭಾಜನರಾದ ಪೆÇ್ರ.ಆರ್.ಕೆ. ಹುಡಗಿಯವರಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಕೈಲಾಸನಾಥ ದೀಕ್ಷಿತ್, ಅಬ್ದುಲ ರಹೀಂ, ಕೆ.ಎಂ. ಬಿರಾದಾರ, ರೌಫ್ ಖಾದ್ರಿ, ಎಂ.ಬಿ. ನಿಂಗಪ್ಪ, ಅಸ್ಲಂ ಚೌಂಗೆ, ಶರಣಗೌಡ ಪಾಟೀಲ ಪಾಳಾ, ವಿಜಯಕುಮಾರ ದೇಶಪಾಂಡೆ,
ಶ್ರೀಕಾಂತ ಪಾಟೀಲ್, ಮುತ್ತಣ್ಣ ನಡಗೇರಿ, ವಿಶ್ವನಾಥ ಬಿರಾದಾರ, ರವಿಂದ್ರ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






















