Home ಜಿಲ್ಲೆ ನಿಸ್ವಾರ್ಥ ಸಮಾಜ ಸೇವಕರೇ ಲೋಕಮಿತ್ರರು: ಪ್ರೊ.ಬಿ.ಎಸ್. ಬಿರಾದಾರ

ನಿಸ್ವಾರ್ಥ ಸಮಾಜ ಸೇವಕರೇ ಲೋಕಮಿತ್ರರು: ಪ್ರೊ.ಬಿ.ಎಸ್. ಬಿರಾದಾರ

ಬೀದರ:ಮೇ.8: ನಿಸ್ವಾರ್ಥ ಸಮಾಜ ಸೇವೆ. ಜನರೊಂದಿಗೆ ಉತ್ತಮ ಒಡನಾಟ ಹೊಂದಿದವರೇ ನಿಜವಾದ ಲೋಕಮಿತ್ರರು. ಅಂತಹ ಸುಂದರ ವ್ಯಕ್ತಿತ್ವ ಹೊಂದಿರುವ ನಿವೃತ್ತ ಪ್ರಾಚಾರ್ಯರಾದ ವೆಂಕಟರಾವ ಖರಾತ್ ಅವರ ಜೀವನ ಮತ್ತು ಸಾಧನೆ ಕುರಿತು ರಚಿಸಿದ ಲೋಕಮಿತ್ರ ಅಭಿನಂದನಾ ಗ್ರಂಥ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಿ.ಎಸ್. ಬಿರಾದಾರ ತಿಳಿಸಿದರು.
ಕರ್ನಾಟಕ ಸಾಹಿತ್ಯ ಸಂಘ ಹಾಗೂ ಶೃದ್ಧಾ ಪ್ರಕಾಶನ ಕಲಬುರಗಿ ಅವರ ಸಂಯುಕ್ತಾಶ್ರಯದಲ್ಲಿ ಸಂಘದ ಸಾಂಸ್ಕøತಿಕ ಭವನದಲ್ಲಿ ಜರುಗಿದ ನಿವೃತ್ತ ಪ್ರಾಚಾರ್ಯರಾದ ವೆಂಕಟರಾವ ಖರಾತ್ ಅವರ ಲೋಕಮಿತ್ರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ, ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಲೋಕಮಿತ್ರ ಎಂದರೆ ಅವರಿಗೆ ಯಾರೂ ಶತ್ರುಗಳೇ ಇಲ್ಲ ಎಂಬಂರ್ಥವಾಗಿದೆ. ತಮ್ಮ ಕರ್ತವ್ಯದ ಸಂದರ್ಭದಲ್ಲಿ ಸದಾ ಹಸನ್ಮುಖರಾಗಿ, ಸರಳ ಸಜ್ಜನಿಕೆಯಿಂದ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಅತ್ಯುತ್ತಮ ಗುರುವಾಗಿ ಹೊರಹೊಮ್ಮಿದ ವೆಂಕಟರಾವ ಖರಾತ್ ಅವರು ತಮಗೆ ನೀಡಿದ ಕಾರ್ಯ ನಿಷ್ಠೆಯಿಂದ, ಶೃದ್ಧೆಯಿಂದ ಮಾಡಿದ್ದಾರೆ. ಬೀದರ ವಿಶ್ವವಿದ್ಯಾಲಯದ ಬೆಳವಣಿಗೆಗೆ ಅವರ ಅದಮ್ಯ ಸೇವೆ ಮರೆಯಲಸಾಧ್ಯವಾದುದು. ದಕ್ಷ ಮತ್ತು ಪ್ರಾಮಾಣಿಕತೆಗೆ ಖರಾತ್ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪೆÇ್ರ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಲೋಕಮಿತ್ರ ಎಂಬ ಅಭಿನಂದನಾ ಗ್ರಂಥಕ್ಕೆ ಹೇಳಿ ಮಾಡಿಸಿದಂತೆ ಅರ್ಹರಾಗಿದ್ದಾರೆ ವೆಂಕಟರಾವ ಖರಾತ ಅವರು. ಈ ಗ್ರಂಥವನ್ನು ಪ್ರಧಾನ ಸಂಪಾದಕರಾಗಿ ಡಾ. ಸಂಜೀವಕುಮಾರ ತಾಂದಳೆ, ಸಂಪಾದಕರಾಗಿ ಡಾ. ಅಶೋಕ ಕೋರೆ, ವ್ಯವಸ್ಥಾಪಕ ಸಂಚಾಲಕರಾಗಿ ಪೆÇ್ರ. ಸಚ್ಚಿದಾನಂದ ರುಮ್ಮಾ ರಚಿಸಿದ್ದಾರೆ. ಇದರಲ್ಲಿ 16 ಗಣ್ಯರು, ಪೂಜ್ಯರ ಶುಭ ಹಾರೈಕೆಗಳಿವೆ. ವಿಮರ್ಶಾತ್ಮಕ ಸಂಶೋಧನಾ ಲೇಖನಗಳಿವೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಅದ್ಭುತ ಲೇಖನಗಳು ಮತ್ತು ಖರಾತ್ ಅವರ ಉತ್ತಮ ವ್ಯಕ್ತಿತ್ವ ಈ ಕೃತಿಯಲ್ಲಿ ಬಿಂಬಿತವಾಗಿದೆ. ಇದು ಅವರ ಮಾದರಿ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ಡಾ. ಸುನಿತಾ ಕೂಡ್ಲಿಕರ್ ವಿಶೇಷ ಉಪನ್ಯಾಸ ನೀಡುತ್ತ ನಿವೃತ್ತ ಪ್ರಾಚಾರ್ಯರಾದ ವೆಂಕಟರಾವ ಖರಾತ್ ಅವರು ಶಿಸ್ತಿನ ಸಿಪಾಯಿಯಾಗಿ, ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿ ಸಮಾಜಶಾಸ್ತ್ರ ವಿಷಯ ಬೋಧನೆ ಮಾಡಿದ್ದಾರೆ. ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದುಕೊಂಡ ಅವರ ಮೇಲೆ ಬಸವ, ಬುದ್ಧ ಮತ್ತು ಶಿವಾಜಿ ಮಹಾರಾಜರ ಪ್ರಭಾವ ಸಾಕಷ್ಟಾಗಿದೆ. ಸಹನಶೀಲತೆ, ಗರ್ವರಹಿತ ಬದುಕು ರೂಪಿಸಿಕೊಂಡ ಅವರು ಸ್ನೇಹಜೀವಿ, ಬಿಚ್ಚುಮನಸ್ಸಿನ ಸಹೃದಯವಂತರಾಗಿದ್ದಾರೆ. ಈ ಲೋಕಮಿತ್ರ ಅಭಿನಂದನಾ ಗ್ರಂಥ ಅವರ ಹೆಜ್ಜೆಗುರುತಾಗಿದೆ ಎಂದರು. ಅಭಿನಂದನೆಗೆ ಪಾತ್ರರಾದ ವೆಂಟಕರಾವ ಖರಾತ್ ಮಾತನಾಡಿ ಜೀವನದಲ್ಲಿ ನಾನು ಅಪಾರ ವಿದ್ಯಾರ್ಥಿ ಬಳಗ ಹಾಗೂ ಸ್ನೇಹ ಬಳಗ ಸಂಪಾದಿಸಿದ್ದೇನೆ ಎಂದು ನುಡಿದರು.
ಲೋಕಮಿತ್ರ ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಡಾ. ಸಂಜೀವಕುಮಾರ ತಾಂದಳೆ, ಸಂಪಾದಕ ಡಾ. ಅಶೋಕ ಕೋರೆ, ಸ.ಪ್ರ.ದ.ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಮನೋಜಕುಮಾರ ಕುಲಕರ್ಣಿ ಮಾತನಾಡಿದರು. ಇದೇ ವೇಳೆ ಲೋಕಮಿತ್ರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು. ಜೊತೆಗೆ ಬಿಎ ನಾಲ್ಕನೇ ಸೆಮಿಸ್ಟರ್‍ನ ಸಾಮಾನ್ಯ ಕನ್ನಡ ಪಠ್ಯಪುಸ್ತಕವಾದ ವ್ಯಕ್ತಿತ್ವ ವಿಕಸನ ಗ್ರಂಥವನ್ನು ಡಾ. ರೂಟಾ ತಾಳಮಡಗಿ ಮತ್ತು ಡಾ. ಅಶೋಕ ಕೋರೆ ರಚಿಸಿದ್ದಾರೆ. ಈ ಪುಸ್ತಕ ಕೂಡ ಬಿಡುಗಡೆ ಮಾಡಲಾಯಿತು.
ಘೋಡಂಪಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷಕುಮಾರ ಬಡಿಗೇರ ಸ್ವಾಗತಿಸಿದರು. ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಜೈಶೀಲಾ ಬಿ. ನಿರೂಪಿಸಿದರು. ವೈಜಿನಾಥ ಪಾಟೀಲ ವಂದಿಸಿದರು.