
ನವಲಗುಂದ,ಮೇ8: ನಾಡಿನೆಲ್ಲೆಡೆ ಆಧ್ಯಾತ್ಮ ಪ್ರವಚನ ಮೂಲಕ ಭಕ್ತ ಸಮೂಹದಲ್ಲಿ ಸನ್ಮಾರ್ಗದ ಸಂದೇಶಗಳನ್ನು ನೀಡುವುದರೊಂದಿಗೆ ಅಪಾರ ಭಕ್ತ ವೃಂದವನ್ನು ಹೊಂದಿರುವ ಮಣಕವಾಡ ಗ್ರಾಮದ ಅಭಿನವ ಶ್ರೀ ಮೃತ್ಯುಂಜಯ ಸ್ವಾಮಿಗಳು ಪ್ರವಚಣ ಮಾಣಿಕ್ಯರೆಂಬ ಖ್ಯಾತಿ ಗಳಿಸಿದ್ದಾರೆಂದು ಪಂಚಗ್ರಹ ಹಿರೇಮಠದ ಶ್ರೀ ಸಿದೇಶ್ವರ ಶಿವಾಚಾರ್ಯ ಸ್ವಾಮಿಜಿ ನುಡಿದರು
ಅವರು ಪಂಚಗ್ರಹ ಹಿರೇಮಠದ ಗುರುಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಆಯೋಜಿಸಿದ 11 ದಿನಗಳ ನಿರಂತರ ಪ್ರವಚನ ಕಾರ್ಯಕ್ರಮದಲ್ಲಿ ಮಣಕವಾಡ ಶ್ರೀ ಮೃತ್ಯುಂಜಯ ಸ್ವಾಮಿಗಳ ಜನ್ಮ ದಿನಾಚಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗವಿಮಠದ ಶ್ರೀ ಬಸವಲಿಂಗಸ್ವಾಮಿಜಿ ಮಾತನಾಡಿ ಮಣಕವಾಡ ಶ್ರೀಗಳು ಗುರು ಪಟ್ಟಾಧಿಕಾರ ಮಹೋತ್ಸವ ಅಂಗವಾಗ ನಿರಂತರ 11 ದಿನಗಳ ಪ್ರವಚನವನ್ನು ಹೇಳುವ ಮೂಲಕ ಪಟ್ಟಣದ ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿ ಆಧ್ಯಾತ್ಮ ಜ್ಞಾನ ಬಿತ್ತರುಸುತ್ತಿರುವುದ ಭಕ್ತರಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು.
ಶಾಸಕ ಎನ್,ಎಚ್,ಕೋನರಡ್ಡಿ ಮಾತನಾಡಿ ಕಳೆದ 6 ದಿನಗಳಿಂದ ಮಣಕವಾಡ ಶ್ರೀಗಳು ಪಟ್ಟಣದಲ್ಲಿ ಪ್ರವಚನ ಆರಂಭಿಸಿದಾಗಿನಿಂದ ಸಾವಿರಾರು ಜನ ಪ್ರವಚನ ಆಲಿಸಲು ಬರುತ್ತಿರುವುದು ಜನತೆಲ್ಲಿರು ಆಧ್ಯಾತ್ಮತ ಹಸಿವಿಗೆ ಸಾಕ್ಷಿಯಾಗಿದೆ ಎಂದರು.
ಹಿರೇಮಠದ ನಿಯೋಜಿತ ಪಿಠಾಧೀಕಾರಿ ಶ್ರೀ ವೀರಬಸವ ದೇವರು, ಹಿರಿಯರಾದ ಅಣ್ಣಪ್ಪ ಬಾಗಿ,ಸಿದ್ದಲಿಂಗಯ್ಯ ಹಿರೇಮಠ, ಎಂ,ಡಿ,ಕುಲಕರ್ಣಿ,ಶ್ರೀಶೈಲ ಮೂಲಿಮನಿ,ಗಂಗಪ್ಪ ಹಳ್ಳದ ,ಪಾಂಡಪ್ಪ ಕೋನರಡ್ಡಿ,ಮಲ್ಲಿಕಾರ್ಜುನ ಜಲಾದಿ,ಯಲ್ಲಪ್ಪ ಭೋವಿ, ಅಪ್ಪಣ್ಣ ಹಳ್ಳದ, ಬಸವರಾಜ ಈಟಿ,ಸಿದ್ದಲಿಂಗಪ್ಪ ಹಳ್ಳದ,ಎ.ಬಿ.ಕೊಪ್ಪದ,ಆರ್,ಎಸ್,ನೇಗಲಿ ಸೇರಿದಂತೆ ಸಾವಿರಾರ ಭಕ್ತರು ಉಪಸ್ಥಿತರಿದ್ದರು.






















