Home ಜಿಲ್ಲೆ ಪುರಸ್ಕಾರ ಸಮಾರಂಭ

ಪುರಸ್ಕಾರ ಸಮಾರಂಭ


ಹಾನಗಲ್,ಮೇ.೮:
ಇಲ್ಲಿನ ಪಿಎಂಶ್ರೀ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಮೇ ೯ ರಂದು ಬೆಳಗ್ಗೆ ೯.೩೦ ಗಂಟೆಗೆ ಶಾಸಕ ಶ್ರೀನಿವಾಸ ಮಾನೆ ಅವರ ನೇತೃತ್ವದಲ್ಲಿ ೩ ನೇ ವರ್ಷದ ಸಾಧನೆ ಸಂಭ್ರಮ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ.


ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಬಿಇಡಿ, ಸ್ನಾತಕೋತ್ತರ ಪದವಿ, ಎನ್‌ಎಂಎAಎಸ್ ಪರೀಕ್ಷೆಗಳಲ್ಲಿ ಸಾಧನೆ ತೋರಿದ ತಾಲೂಕಿನ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ೫ ಲಕ್ಷ ರೂ.ಗೂ ಅಧಿಕ ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಗುವುದು.


ಶಾಸಕ ಶ್ರೀನಿವಾಸ ಮಾನೆ ಪುರಸ್ಕಾರ ನೀಡಲಿದ್ದು, ಪರಿವರ್ತನ ಕಲಿಕಾ ಕೇಂದ್ರದ ಅಧ್ಯಕ್ಷೆ ಸ್ವಾತಿ ಮಾಳಗಿ, ಆಡಳಿತಾಧಿಕಾರಿ ಮಾರುತಿ ಶಿಡ್ಲಾಪೂರ, ರಾಣೇಬೆನ್ನೂರಿನ ಸಂಜೀವಿನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಭುಲಿಂಗ ಕೋಡದ, ಬಿಇಒ ಆರ್.ವಿ.ಚಿನ್ನಿಕಟ್ಟಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.