
ದೇವನಹಳ್ಳಿ ಮೇ೦೭-ದಕ್ಷಿಣ ಭಾರತದ ರಾಜ್ಯಗಳಲ್ಲಿಭದ್ರಕೋಟೆಯನ್ನು ನಿರ್ಮಿಸುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಬಲಪಡಿಸಿದ ನಿರ್ಮಾತೃ ಯಡಿಯೂರಪ್ಪ ಅವರು ಆದ್ದರಿಂದ ಅವರ ಸುದೀರ್ಘ ೫೦ ವರ್ಷಗಳ ಆಡಳಿತ ಸೇವೆಯನ್ನು ಅಭಿನಂದಿಸುವ ಸಲುವಾಗಿ ಮೇ.೯ ರಂದು ಚಿತ್ರದುರ್ಗದ ಬಳಿ ಮಾಜಿ ಮುಖ್ಯ ಮಂತ್ರಿ ಬಿಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಕ್ಷದ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲು ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ದೇವನಹಳ್ಳಿ ತಾಲೂಕು ಮಂಡಲ ಅಧ್ಯಕ್ಷ ಅಂಬರೀಶ್ ಗೌಡ ಹೇಳಿದರು.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ನಡೆದ ಮೇ.೯ ರಂದು ಚಿತ್ರದುರ್ಗದ ಬಳಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿ ಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ ಪಶ್ಚಿಮ ಬಂಗಾಳದ ಈ ಗೆಲುವು ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವು ಇನ್ನಷ್ಟು ಸುಭದ್ರವಾಗಿ ಉಳಿಯುವಂತೆ ಗೆಲುವು ಸಾಧಿಸಲು ಎಲ್ಲರೂ ಒಗ್ಗೂಡಿ ಶ್ರಮವಹಿಸಲು ಪ್ರೇರಣೆಯಾಗಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದರು.
ತಾಲೂಕಿನ ಹಲವು ಮುಖಂಡರು ಇತರ ಪಕ್ಷ ತೊರೆದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದರು ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷದ ಗೆಲುವಿನ ಹಿನ್ನಲೆ ಕಚೇರಿಯ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ,ಎಸ್ ಎಲ್ ಎನ್ ಅಶ್ವಥ್ ನಾರಾಯಣ್,ಮುನಿಕೃಷ್ಣಪ್ಪ ತಮ್ಮಯ್ಯ, ಬುಳ್ಳಹಳ್ಳಿ ರಾಜಪ್ಪ, ಬಿ ಕೆ. ನಾರಾಯಣಸ್ವಾಮಿ, ಅನೀಲ್, ಕದಿರಪ್ಪ, ವಿಜಯಕುಮಾರ್,ಇಂಡ್ರಸನಹಳ್ಳಿ ಮಂಜುನಾಥ್, ಪ್ರಭಣ್ಣ ವೆಂಕಟೇಗೌಡ, ವಿಜಯಪುರ ನಗರ ಅಧ್ಯಕ್ಷ ವೆಂಕಟೇಶ್, ಯಶೋಧ, ತಾಯಮ್ಮ,ನಯನ, ಪ್ರೇಮ, ದಿವ್ಯಶ್ರೀ ಪ್ರಭಾಕರ್, ಸೇರಿದಂದಂತೆ ಮತ್ತಿತರರು ಭಾಗಿಯಾಗಿದ್ದರು.



















