
ಕೆ.ಆರ್.ಪುರ, ಮೇ.೫-ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಕ್ಷೇತ್ರದ ದೂರವಾಣಿ ನಗರ ವಾರ್ಡನಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ ಅವರು ಮೂರು ರಾಜ್ಯಗಳಲ್ಲಿ ಮತದಾರರು ನೀಡಿರುವ ಸ್ಪಷ್ಟ ಬಹುಮತವು, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವ ಣೆಗೆ ದಿಕ್ಕೂಚಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಉತ್ತಮ ಆಡಳಿತ ನೀಡಿದ ಹಿನ್ನಲೆಯಲ್ಲಿ ಬಿಜೆಪಿ ಪರ ಅಲೆ ಮುಂದುವರೆದಿದೆ ಎಂದು ನುಡಿದರು.
ಶಾಸಕರಾದ ಬೈರುತಿ ಬಸವರಾಜ ಅವರ ಮಾರ್ಗದರ್ಶನದಲ್ಲಿ ಸಂಭ್ರಮಾಚರಣೆ ನಡೆಸಿ, ಸಿಹಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಮುಖಂಡ ಎಂ.ಎಲ್.ಡಿ.ಸಿ. ಮುನಿರಾಜು ಅವರು ಮಾತನಾಡಿ ಶ್ಯಾಂಪ್ರಸಾದ್ ಮುಖರ್ಜಿ ಅವರ ಶ್ರಮಕ್ಕೆ ಪಶ್ಚಿಮ ಬಂಗಾಳದಲ್ಲಿ ನಿಜವಾದ ಜಯ ಸಿಕ್ಕಿದೆ. ಅವರ ಹೋರಾಟ ಇಂದು ಸಾರ್ಥ ಕವಾಗಿದೆ. ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವವನ್ನು ಜನರು ಮೆಚ್ಚಿ ದ್ದಾರೆಂದು ಈ ಫಲಿಥಾಂಶದಿಂದಲೇ ಅರ್ಥವಾಗುತ್ತಿದೆ ಎಂದರು. ಜನಪರ ಯೋಜನೆಗೆ ಸಿಕ್ಕ ಜಯದೊರೆತಿದೆ ದೇಶದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಜನರು, ಅಭಿವೃದ್ಧಿಪರವಾಗಿ ದ್ದಾರೆ ಎಂಬುದನ್ನು ವಂಚರಾಜ್ಯಗಳ ಚುನಾವಣೆಯಲ್ಲಿ ಸಾಬೀತಾಗಿದೆ. ಇದು ದೇಶದಲ್ಲಿ ಜನಪರವಾದ ಯೋಜನೆಗಳಿಗೆ ಸಿಕ್ಕ ಜಯವಾಗಿದೆ ಎಂದರು.



















