
(ಸಂಜೆವಾಣಿ ವಾರ್ತೆ)
ಕಂಪ್ಲಿ, ಏ.26: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ದಿಂದ ಲೇಖಕ, ಪತ್ರಕರ್ತ, ಬಂಗಿ ದೊಡ್ಡ ಮಂಜುನಾಥ ಅವರ ಸಾಮಾಜಿಕ ಜೋಡಿ ಕಾದಂಬರಿ ಬೆಂಕಿಯ ಶೀತ ಮತ್ತು ಶೀತದ ಕಾವು ಲೋಕಾರ್ಪಣಾ ಸಮಾರಂಭ ಏ.28 ರಂದು ಸಂಜೆ 5. 30 ಕ್ಕೆ ಪಟ್ಟಣದ
ಪೇಟೆ ಬಸವೇಶ್ವರ ದೇವಸ್ಥಾನದ ಹಿಂಭಾಗದ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ|| ನಿಷ್ಠಿ ರುದ್ರಪ್ಪ ಅಧ್ಯಕ್ಷತೆವಹಿಸಲಿದ್ದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಕೊಪ್ಪಳದ ಡಾ|| ಸಿದ್ದಯ್ಯ ಪುರಾಣಿಕ್ ಟ್ರಸ್ಟ್ ನ ಅಧ್ಯಕ್ಷ ಅಜಮೀರ ನಂದಾಪುರ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದು. ಗಂಗಾವತಿಯ ಎಸ್.ಕೆ.ಎನ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|| ಮುಮ್ರಾಜ್ ಬೇಗಂ ಕೃತಿ ವಿಮರ್ಶೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಂಪ್ಲಿಉ ಡಿ. ವೀರಪ್ಪ, ಅಧ್ಯಕ್ಷರು. ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ. ಕೆ.ಬಿ. ವಾಸುಕುಮಾರ್. ಆರಕ್ಷಕ ನಿರೀಕ್ಷಕರು, ಬಿ. ಮಲ್ಲಿಕಾರ್ಜುನ, ಪ್ರಭಾರಿ ಮುಖ್ಯಾಧಿಕಾರಿಗಳು, ಪುರಸಭೆ, ಕ.ಮ. ಹೇಮಯ್ಯಸ್ವಾಮಿ, ಗೌರವಾಧ್ಯಕ್ಷರು, ಕನ್ನಡ ಹಿತರಕ್ಷಕ ಸಂಘ, ಕೃಷ್ಣ ಎಸ್. ಪೋಳ, ಅಧ್ಯಕ್ಷರು, ನಗರಾಭಿವೃದ್ಧಿ ಹೋರಾಟ ಸಮಿತಿ, ಕೋನೇರು ಶ್ರೀರಾಮಕೃಷ್ಣ, ಪಿರಮಿಡ್ ಮಾಸ್ಟರ್, ಸಣಾಪುರ-ಕಂಪ್ಲಿ ಇವರು ಆಗಮಿಸಲಿದ್ದಾರೆಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ತಿಳಿಸಿದ್ದಾರೆ






















