Home ಜಿಲ್ಲೆ ತಾಳೂರಿನಲ್ಲಿ ಸಮರ್ಪಣಾ ಸಮಾವೇಶ ಕಾರ್ಮಿಕರ ಕನಿಷ್ಠ ವೇತನ ಬಿಲ್ ಇನ್ನೊಂದು ವಾರದಲ್ಲಿ: ಸಂತೋಷ್ ಲಾಡ್

ತಾಳೂರಿನಲ್ಲಿ ಸಮರ್ಪಣಾ ಸಮಾವೇಶ ಕಾರ್ಮಿಕರ ಕನಿಷ್ಠ ವೇತನ ಬಿಲ್ ಇನ್ನೊಂದು ವಾರದಲ್ಲಿ: ಸಂತೋಷ್ ಲಾಡ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.26:  ಕಾರ್ಮಿಕ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಇಂದು  ಸಂಡೂರು   ತಾಲೂಕಿನ ತಾಳೂರು ಗ್ರಾಮದಲ್ಲಿ ಸಮರ್ಪಣಾ ಸಮಾವೇಶ ನಡೆಯಿತು.

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಹಕ್ಕು ಪತ್ರ ವಿತರಣೆ,ರಸ್ತೆ, ಚರಂಡಿ, ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ  ಸಚಿವ ಲಾಡ್ ಚಾಲನೆ.  ಸಂತೋಷ ಲಾಡ್ ಗೆ ಸಂಸದ ತುಕಾರಾಂ, ಶಾಸಕಿ ಅನ್ನಪೂರ್ಣ ಸಾಥ್ ನೀಡಿದ್ದರು.

ನೂರಾರು ಕೋಟಿ ರೂ  ವೆಚ್ಚದ. ಅನುದಾನದಲ್ಲಿ ಮಾಡಿರೋ ಕಾಮಗಾರಿಗಳ ಬಗ್ಗೆ ವಿಡಿಯೋ ಪ್ರದರ್ಶನದ ಮೂಲಕ ಮಾಡಿ ಜನತೆಗೆ ತಿಳಿಸಿದರು.

ಸಮಾವೇಶದಲ್ಲಿ ಸಚಿವ ಸಂತೋಷ ಲಾಡ್ ಮಾತನಾಡಿ, ಅಮೆರಿಕಾ ಅಧ್ಯಕ್ಷ ಟ್ರಂಪ್ ನಮ್ಮ ದೇಶಕ್ಕೆ ಕೀಳಾಗಿ ಮಾತನಾಡಿದ್ದಾರೆ. ಬುದ್ಧರ ನಾಡು, ಅಂಬೇಡ್ಕರ್ ದೇಶ, ಗಾಂಧಿಯವರ ದೇಶಕ್ಕೆ ನರಕದ ದೇಶ ಎಂದು ಹೇಳಿದ್ದಾರೆ. ನೂರೈವತ್ತು ಕೋಟಿ ಭಾರತೀಯರಿಗೆ ಅಗೌರವ ರೀತಿಯಲ್ಲಿ ಮಾತನಾಡಿದ್ದಾರೆ ಈ ವೇದಿಕೆ ಮೂಲಕ ಟ್ರಂಪ್ ಹೇಳಿಕೆ ಖಂಡನೆ ಮಾಡ್ತೇನೆ. ಭಾರತ ಮಾತಾಕೀ ಜೈ ಎನ್ನುವ ಬಿಜೆಪಿಯವರು ಮತ್ತು ಕೇಂದ್ರ ಸರ್ಕಾರದ ನಾಯಕರ ಟ್ರಂಪ್ ವಿರುದ್ಧ ಮಾತನಾಡ್ತಿಲ್ಲ. ಬಿಜೆಪಿಯವರಷ್ಟೇ ಅಲ್ಲಭಾರತೀಯರು ಎಲ್ಲರೂ ಇದನ್ನು ಖಂಡಿಸಬೇಕಿದೆಂದರು.

ಇಲಾಖೆಯ ಅಭಿವೃದ್ದಿ:

ಗೀಗ್ ಕಾರ್ಮಿಕರಿಗೆ ಸಹಕಾರ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ ಕಾರ್ಮಿಕ ಇಲಾಖೆಯ ಸ್ಮಾರ್ಟ್ ಕಾರ್ಡ್ ನೀಡಿದ್ದೇವೆ.

ಸಿನಿಮಾದ ಕಾರ್ಮಿಕರಿಗೆ ಸಿನಿ ಬಿಲ್, ಮನೆ ಕೆಲಸದವರಿಗೆ ಡೊಮೋಸ್ಟಿಕ್ ಕಾರ್ಮಿಕರ ಬಿಲ್ ಸೇರಿದಂತೆ ವಿವಿಧ ವಿಭಾಗದ ಕಾರ್ಮಿಕರ ಸಹಕಾರ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ.ಕಾರ್ಮಿಕರ ಕನಿಷ್ಠ ವೇತನ ಬಿಲ್ ತಂದೇ ತರುತ್ತೇವೆ. ಇನ್ನೊಂದು ವಾರದಲ್ಲಿ ಚರ್ಚೆ ಮಾಡಿ ಫೈನಲ್ ಮಾಡ್ತೇವೆಂದರು.

ಮೋದಿ ವಿರುದ್ಧ ವಾಗ್ದಾಳಿ:

ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಮೋದಿ ಅವರು. ಭಾರತದ ಮೇಲೆ 225 ಲಕ್ಷ ಕೋಟಿ ಸಾಲ ಇದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೇವೆ ಎಂದರು. ಉದ್ಯಮಿಗಳ ಸಾಲ ಮನ್ನ ಮಾಡಿದ್ದಾರೆ. ಆದ್ರೇ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಅಂಬಾನಿ, ಅದಾನಿಯೊಬ್ಬರನ್ನು ಉದ್ದಾರ ಮಾಡಿದ್ದಾರೆಂದು ಆರೋಪಿಸಿದರು.

ದೊಡ್ಡವರು ಸಣ್ಣವರನ್ನು ತಿನ್ನುತ್ತಿದ್ದಾರೆ. ಒಂದಷ್ಟು ಕೈಯಲ್ಲಿ ದೇಶದ ನಲವತ್ತು ಪರ್ಸೆಂಟ್ ಆಸ್ತಿ ಇದೆ. ದೇಶದಲ್ಲಿ ಕರ್ನಾಟಕ ಮಾತ್ರ ಅಭಿವೃದ್ಧಿಯಾಗಿದೆ ಉಳಿದ ರಾಜ್ಯಗಳು ಹಿಂದಿವೆಂದರು.

ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡ್ತಿರೋ ಬಿಜೆಪಿ ದೇಶವನ್ನು ಒಡೆದು ಅಳುತ್ತಿರೋ ಬಿಜೆಪಿ ಬಗ್ಗೆ ಯುವಕರು ಎಚ್ಚರವಾಗಿರಿ ದೇಶ ಬಿಜೆಪಿ ಮತ್ತು ಕಾಂಗ್ರೆಸ್ ನದ್ದು ಅಲ್ಲ ದೇಶ ನಮಗಮೆಲ್ಲರದ್ದು ಎಂದರು.

ಸಮಾವೇಶದಲ್ಲಿ ಮಾತನಾಡಿದ  ಸಂಸದ ತುಕಾರಾಂ, ಜನರಿಂದ ಅಯ್ಕೆಯಾಗಿರೋ ನಾವು ಜನರಿಗಾಗಿಯೇ ಕೆಲಸ ಮಾಡ್ತೇವೆ. 2004ರಲ್ಲಿ ಸಂತೋಷ ಲಾಡ್ ಸಂಡೂರು ಶಾಸಕರಾಗಿದ್ರು. ಲಾಡ್ ಅವರ ಅಭಿವೃದ್ಧಿಯ ಕನಸನ್ನು ನನಸು ಮಾಡುವ ಕೆಲಸ ಮಾಡ್ತಿದ್ದೇವೆ. ಶಿಕ್ಷಣ, ರಸ್ತೆ ಅಭಿವೃದ್ಧಿ, ಸೇರಿದಂತೆ ಇಡೀ ಕ್ಷೇತ್ರದ ಅಭಿವೃದ್ಧಿ ಮಾಡ್ತಿದ್ದೇವೆ. ಪಕ್ಷ, ಜಾತಿ, ಸೇರಿದಂತೆ ಯಾವುದನ್ನೂ ನೋಡದೇ ಅಭಿವೃದ್ಧಿ ಮಾಡ್ತಿದ್ದೇವೆ. ಕ್ಷೇತ್ರದಾದ್ಯಾಂತ ತುಂಗಭದ್ರಾ ಜಲಾಶಯದಿಂದ ನೀರು ತಂದುಕೊಟ್ಟಿದ್ದೇವೆ.ರಾಜಕೀಯ ಜೀವನ ಅಂದ್ರೇ ಅದು ದೇವರ ಕೆಲಸ ನನ್ನನ್ನು ಸಂಸದರಾಗಿ ನನ್ನ ಪತ್ನಿಯನ್ನು ಶಾಸಕಿ ಮಾಡಿದ ಜನರಿಗೆ ಋಣಿಯಾಗಿದ್ದೇವೆ ಎಂದರು.