Home ಜಿಲ್ಲೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಡೆದ ಕಾಂಗ್ರೆಸ್ ಮಿತ್ರಪಕ್ಷಗಳ ವಿರುದ್ಧ ಮಹಿಳೆಯರು ಆಕ್ರೋಶ

ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಡೆದ ಕಾಂಗ್ರೆಸ್ ಮಿತ್ರಪಕ್ಷಗಳ ವಿರುದ್ಧ ಮಹಿಳೆಯರು ಆಕ್ರೋಶ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.26: ನಾರಿ ಶಕ್ತಿ ಫೋರಂ ನಿಂದ. ನಾರಿ ಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಜಾರಿಯಾಗದಂತೆ ತಡೆದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ವಿರುದ್ಧ ಮಹಿಳೆಯರು ನಿನ್ನೆ ಸಂಜೆ ನಗರದಲ್ಲಿ ಜನಾಕ್ರೋಶ ಜಾಥಾ ನಡೆಸಿದರು.

ಶೇ 33 ರಷ್ಟು ಮಹಿಳಾ ಮೀಸಲಾತಿ ಬೇಕೆ, ಬೇಕು, ನಾರಿ ಶಕ್ತಿ ದೇಶದ ಶಕ್ತಿ ಸೇರಿದಂತೆ ಹಲವು ಘೋಷಣೆಗಳ ಫಲಕ ಹಿಡಿದ ಮಹುಳೆಯರು, ಅದರಲ್ಲೂ ಅಲ್ಪ ಸಂಖ್ಯಾತರು, ತೃತೀಯ ಲಿಂಗಿಗಳು, ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಗರದ ದುರ್ಗಮ್ಮ ದೇವಸ್ಥಾನದಿಂದ ಆರಂಭಗೊಂಡ ಜಾಥಾ ಗಡಗಿ ಚೆನ್ನಪ್ಪ ಸರ್ಕಲ್ ಗೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ನಾರಿಯರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ಈ ವೇಳೆ ಮಾತನಾಡಿದ ವೈದ್ಯೆ ಡಾ.ಅರುಣಾ ಕಾಮಿನೇನಿ. ಪ್ರಧಾನಿ ನರೇಂದ್ರ ಮೋದಿ ಅವರು ಇ೮ ದೇಶದ ಮಹಿಳೆಯರಿಗೆ ರಾಜಕೀಯವಾಗಿ ಹೆಚ್ಚಿನ ಶಕ್ತಿ ತರಲು ನಡೆಸುದ ಪ್ರಯತ್ನಕ್ಕೆ ವಿರೋಧ ಪಕ್ಷಗಳು ವಿರೋದ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ಮತ್ತೋರ್ವ ವೈದ್ಯೆ ಡಾ. ರೇಣುಕಾ ಮಂಜುನಾಥ ಮಾತನಾಡಿ, ದೇಶದ ರಾಷ್ಟ್ರಪತಿ, ಹಣಕಾಸು ಸಚಿವೆ, ಅಷ್ಟೇ ಏಕೆ ಆಪರೇಷನ್ ಸಿಂದೂರವನ್ನು ಮುನ್ನಡೆಸಿದವರು ಮಹಿಳಾ ಶಕ್ತಿಯೇ ಹೀಗಿರುವಾಗ ಪ್ರತಿಪಕ್ಷಗಳು ನಾರಿ ಶಕ್ತಿ ರಾಜಕೀಯವಾಗಿ ಮೀಸಲಾತಿ ಪಡೆಯುವುದನ್ನು ವಿರೋಧಿಸುವುದು ಸರಿಯಲ್ಲ  ನಮ್ಎಂಮ ಹೋರಾಟ ನಿರಂತರ ಎಂದರು.

ಮಾಜಿ ಸೈನಿಕರಾದ ಕರ್ನಲ್ ಶಶಿಕಲಾ ಅವರು ಮಾತನಾಡಿ,  ಮಹಿಳಾ ಮೀಸಲಾತಿಯನ್ನು ಮಹಿಳೆಯರ ಹಕ್ಕಾಗಿ ನೀಡಿ, ಈಗಾಗಲೇ ಸಂಸತ್ ನಲ್ಲಿ ಮಸೂದೆ  ಅನುಮೋದನೆಗೊಂಡಿದೆ ಅದನ್ನು ಕ್ಷೇತ್ರ ಮರುವಿಂಗಡಣೆ ಮೂಲಕ ಜಾರಿಗೆ ತನ್ನಿ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕ ಜಿಲ್ಲಾದ್ಯಕ್ಷೆ ಹಂಪಿ ರಮಣ, ರಾಜ್ಯ ಉಪಾದ್ಯಕ್ಷೆ ಕೆ.ಆರ್.ವಿಜಯಲಕ್ಷ್ಮಿ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ,  ಚೇತನಾ ಮೇಮಣ್ಣ ಮುಖಂಡರಾದ    ಸಾಧನಾ ಹಿರೇಮಠ್, ಗ್ರಾಯತಿ ರೆಡ್ಡಿ ಪುಷ್ಪಲತಾ, ಚಂದಾನಿ ಮೊದಲಾದವರು ಪಾಲ್ಗೊಂಡಿದ್ದರು.