Home ಜಿಲ್ಲೆ ಶ್ರೀಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟನಿಂದ ಬಾಯಾರಿದವರಿಗೆ ನೀರು-ಮಜ್ಜಿಗೆ

ಶ್ರೀಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟನಿಂದ ಬಾಯಾರಿದವರಿಗೆ ನೀರು-ಮಜ್ಜಿಗೆ

ಬಳ್ಳಾರಿ, ಏ.26: ಬೇಸಿಗೆ ಎಂದಾಕ್ಷಣ ಬಳ್ಳಾರಿಯ ಬಿಸಿಲಿನ ಬೇಗೆ ಎಲ್ಲರನ್ನು ಚಿಂತೆಗೀಡು ಮಾಡುತ್ತದೆ. ಕಾರಣ ಇಲ್ಲಿನ 40 ಡಿಗ್ರಿ ಸೆಲ್ಸಿತಸ್ ಗೂ ಹೆಚ್ಚಿನ ತಾಪಮಾನ.

ನಗರದಕ್ಕೆ ಬರುವ ಮತ್ತು ಇಲ್ಲಿಯೇ ಓಡಾಡುವ ಜನತೆ ಮಧ್ಯಾಹ್ನದ ವೇಳೆ ಬಿಸಿಲಿನ ತಾಪಕ್ಕೆ ಬಾಯಾರಿದರೆ ಎಳೆನೀರು, ತಂಪು ಪಾನಿಯ, ಹಣತಣುಗಳ ಮೊರೆ ಹೋಗುತ್ತಾರೆ ಹಣ ಇದ್ದವರು.

ಆದರೆ ಬಡಜನತೆ ದುಡಿಯುವ ವರ್ಗದವರು, ಒಂದಿಷ್ಟು ತಂಪು ನೀರು, ಮಜ್ಜಿಗೆ ಸಿಕ್ಕರೆ ಸಾಕು ಎನ್ನುತ್ತಾರೆ.

ಇದನ್ನು ಮನಗಂಡು ನಗರದ ಶ್ರೀಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ ಕಳೆದ 11 ವರ್ಷಗಳಿಂದ ಇಲ್ಲಿನ ಗ್ರಹಂ ರಸ್ತೆಯಲ್ಲಿ ಸಣ್ಣ ಮಾರುಕಟ್ಟೆ ಬಳಿ ಬೇಸಿಗೆಯ ಮೂರು ತಿಂಗಳಕಾಲ ನೀರು, ಮಜ್ಜಿಗೆ ವಿತರಣೆ ಮಾಡುತ್ತಿದೆ.

ಕಳೆದ ಮಾರ್ಚ್ 11 ರಿಂದ ಈ ಸೇವಾ ಕಾರ್ಯ ಆರಂಭಗೊಂಡಿದೆ. ನಿತ್ಯ 500 ಲೀಟರ್ ಮಜ್ಜಿಗೆ ವಿತರಣೆ ಮಾಡುತ್ತಾರೆ. ಇಲ್ಲಿಗೆ ಬರುವ, ಸುತ್ತಮುತ್ತಲಿನ ವ್ಯಾಪಾರಿ ಪ್ರದೇಶದ ಬಡ ಜನತೆ ಮಜ್ಜಿಗೆ, ನೀರು ಸೇವಿಸುತ್ತಾರೆ.

ನೀರನ್ನು ಪಾಲಿಕಯವರೇ ಇವರಿಗೆ ಕೊಡುತ್ತಾರೆ. ಇನ್ನು ಮಜ್ಜಿಗೆಯನ್ನು ದಾನಿಗಳು ಕೊಡುತ್ತಾರೆ.ದಾನಿಗಳ ದೊರೆಯದಿದ್ದರೆ ಟ್ರಸ್ಟ್ ನಿಂದಲೇ ಅದರ ವೆಚ್ಚ ಭರಿಸಲಾಗುತ್ತಿದೆ ಎನ್ನುತ್ತಾರೆ ಟ್ರಸ್ಟ್ ನ ಅಧ್ಯಕ್ಷ ಗೋಪಾಲ ಕೃಷ್ಣ ಅವರು.

ಇನ್ನು ಸಾಯಿ ವಾರವಾದ ಪ್ರತಿ ಗುರುವಾರ ದೊಣ್ಣೆಯಲ್ಲಿ ಅನ್ನ ಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ.

ಈ ಟ್ರಸ್ಟ್ ಇದೊಂದೆ ಕಾರ್ಯ ಅಲ್ಲದೆ, ಯುವಕರಿಗೆ ಕಂಪ್ಯೂಟರ್, ಟೈಲರಿಂಗ್ ಮೊದಲಾದ ತರಬೇತಿ ನೀಡುತ್ತದೆ. ವಿಕಲಚೇತನರಿಗೆ ಕೃತಕ ಅಂಗಾಂಗಳನ್ನು ನೀಡುತ್ತದೆ. ಉಚಿತ ನೇತ್ರ ಪರೀಕ್ಷೆ, ವಿಕಲಚೇತನರ ದಿನಾಚರಣೆ ಸರ್ಕಾರಿ ಸಮಾರಂಭದ ಸಂಪೂರ್ಣ ಊಟದ ವೆಚ್ಚವನ್ನು ಸಹ ಭರಿಸುತ್ತದೆ. ಹೀಗೆ ನಾನಾ ಸಾಮಾಜಿಕ ನೆರವಿನ ಕಾರ್ಯಗಳಲ್ಲಿ ಟ್ರಸ್ಟ್ನ ಸರ್ವ ಸದಸ್ಯರು ತೊಡಗಿಸಿಕೊಂಡು ಗಮನಸೆಳೆದಿದ್ದಾರೆ.