
ರಬಕವಿ-ಬನಹಟ್ಟಿ,ಏ26 : ಕನ್ನಡ ಚಿತ್ರರಂಗದ ಮೇರು ನಟ, ವರನಟ ಡಾ. ರಾಜಕುಮಾರ್ ಅವರು ಶಿಸ್ತು, ಶೃದ್ಧೆಯುಳ್ಳವರಾಗಿ, ವಿನಯವಂತರಾಗಿದ್ದರು. ಚಲನಚಿತ್ರಗಳಲ್ಲಿ ಅದ್ಭುತ ಅಭಿನಯದಿಂದ, ಹಾಡುಗಾರಿಕೆಯಿಂದ ಅಸಾಮಾನ್ಯ ಎತ್ತರಕ್ಕೇರಿದವರು. ಅಭಿಮಾನಿಗಳನ್ನು ದೇವರುಗಳೆಂದೇ ಕರೆದವರು. ಅವರ ಹಾಡುಗಳು, ಸಿನಿಮಾಗಳು ಸ್ಪೂರ್ತಿದಾಯಕವಾಗಿವೆ ಎಂದು ಉದ್ದಿಮೆದಾರರಾದ ಬಸವರಾಜ ದಲಾಲ ಹೇಳಿದರು.
ಕನ್ನಡ ಸಾಹಿತ್ಯ ಪರಿ?Àತ್ತು ತಾಲ್ಲೂಕ ಘಟಕ ರಬಕವಿ-ಬನಹಟ್ಟಿ, ವಲಯ ಮಹಾಲಿಂಗಪುರ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕಾ ಘಟಕ ರಬಕವಿ-ಬನಹಟ್ಟಿ, ದಲಾಲ ಸ್ಪೋಟ್ರ್ಸ್ ಕ್ಲಬ್ ರಬಕವಿ ಇವರ ಸಂಯುಕ್ತಾಶ್ರಯದಲ್ಲಿ ರಬಕವಿಯ ದಲಾಲ್ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ಕರ್ನಾಟಕ ರತ್ನ, ನಟಸಾರ್ವಭೌಮ, ವರನಟ ಡಾ. ರಾಜಕುಮಾರ್ ಅವರ 97ನೇ ಹುಟ್ಟು ಹಬ್ಬದ ನಿಮಿತ್ತ ಡಾ. ರಾಜ್ ಗೀತ ಮಾಧುರ್ಯ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ ಪ್ರತಿವ?ರ್À ದಲಾಲ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ಡಾ. ರಾಜಕುಮಾರ್ ಜನ್ಮದಿನದಂದು ಗೀತ ಮಾಧುರ್ಯ ಹಮ್ಮಿಕೊಳ್ಳಲು ಸಹಕಾರ ನೀಡುವುದಾಗಿ ತಿಳಿಸಿದರು.
ಹಿರಿಯ ವೈದ್ಯ ಡಾ. ಬಿ.ಎನ್. ಬಾಗಲಕೋಟ ಕಾರ್ಯಕ್ರಮದಲ್ಲಿ ಡಾ. ರಾಜ್ ಹಾಡಿರುವ ಭಕ್ತಿಗೀತೆಗಳನ್ನು ಹಾಡಿದರು.
ನಾವಲಗಿ ಜೈ ಹನುಮಾನ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ದಾನಪ್ಪ ಆಸಂಗಿ ಮಾತನಾಡಿ ನಟಸಾರ್ವಭೌಮ ಡಾ. ರಾಜಕುಮಾರ್ ಅವರು ಕನ್ನಡ ನಾಡು, ನುಡಿ, ಭಾ?É, ಸಂಸ್ಕøತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಚಲನಚಿತ್ರಗಳು ಸಂದೇಶ, ಮಾರ್ಗದರ್ಶನ ನೀಡುವಂತಹುಗಳಾಗಿವೆ. ಅವರ ಪಾತ್ರಾಭಿನಯ, ಗೀತೆಗಳು ಅದ್ಭುತ ಎಂದರು.
ರಬಕವಿ-ಬನಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ, ಶಿಕ್ಷಕ-ಗಾಯಕ ಮಹಾಲಿಂಗ ಚಿಮ್ಮಡ, ತೇರದಾಳ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ರಾಜೇಶ್ವರಿ ಉಮದಿ, ಈರಯ್ಯ ಹಿರೇಮಠ, ಕೆ.ಎಸ್. ರಂಗಸ್ವಾಮಿ ಅವರು ಡಾ. ರಾಜಕುಮಾರ್ ಹಾಡಿರುವ ನಾಡ-ನುಡಿ ಗೀತೆಗಳು, ಅವರು ಅಭಿನಯದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರು.
ಬಂದೆಯಾ ಗುರುರಾಯ, ಏನು ದಾಹ ಯಾವ ಮೋಹ, ಹಾಲಲ್ಲಾದರು ಹಾಕು, ಎಲ್ಲಾದರು ಇರು, ತೆರೆದಿದೆ ಮನೆ ಓ ಬಾ ಅತಿಥಿ, ಓ ಪ್ರಿಯತಮಾ, ಎಲ್ಲೆಲ್ಲಿ ನೋಡಲಿ, ನೀ ಬಂದು ನಿಂತಾಗ, ಏನೆಂದು ನಾ ಹೇಳಲಿ, ಚಂದಿರ ತಂದಾ, ಆಕಾಶವೇ ಬೀಳಲಿ ಮೇಲೆ, ಜೇನಿನ ಹೊಳೆಯೋ ಹಾಡುಗಳನ್ನು ಹಾಡಿದರು. ಹನಗಂಡಿತೋಟದ ಶಾಲೆ ಶಿಕ್ಷಕ ಸಿದ್ಧಲಿಂಗ ಕಡಕೋಳ ಮಿಮಿಕ್ರಿ ನಡೆಸಿಕೊಟ್ಟರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕಾ ಘಟಕದ ಅಧ್ಯಕ್ಷ ಮೃತ್ಯುಂಜಯ ರಾಮದುರ್ಗ ಸ್ವಾಗತಿಸಿದರು. ಮಹಾಲಿಂಗಪುರ ವಲಯ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ಕಾರ್ಯಕ್ರಮ ನಿರೂಪಿಸಿದರು.
ಎಂ.ಎಸ್. ಬದಾಮಿ, ಶಿವಾನಂದ ದಾಶಾಳ, ಬ್ರಿಜ್ ಮೋಹನ್ ಡಾಗಾ, ಅಶೋಕ ಪತ್ತಾರ, ರವೀಂದ್ರ ಪತ್ತಾರ, ಡಾ. ಜಿ.ಎಚ್. ಚಿತ್ತರಗಿ, ಡಿ.ಬಿ. ಜಾಯಗೊಂಡ, ಪ್ರಭು ಉಮದಿ, ರವೀಂದ್ರ ಅ?À್ಟಗಿ, ಗೌರಿ ಮಿಳ್ಳಿ, ಸರ್ವಮಂಗಳಾ ಹಿರೇಮಠ, ಪಾರ್ವತಿ ಸಾಬೋಜಿ, ರಾಜು ಸಾಬೋಜಿ, ಸಾಗರ ಬಾಪುರೆ, ವಿರುಪಾಕ್ಷ ಫಕೀರಪುರ, ಸೇರಿದಂತೆ ಸಾಹಿತಿಗಳು, ಕಸಾಪ ಪದಾಧಿಕಾರಿಗಳು, ಕಲಾವಿದರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.






















