
ಬೆಂಗಳೂರು, ಮಾ. ೧೮- ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹತ್ಯೆ, ಹಲ್ಲೆ ಮತ್ತು ಬೆದರಿಕೆ ಹಾಕುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಕಲ್ಪಿಸುವ “ಇವ ನಮ್ಮವ ಇವ ನಮ್ಮವ” ಎಂಬ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.
ರಾಜ್ಯದಲ್ಲಿ ಮರ್ಯಾದೆ ಹೆಸರಿನಲ್ಲಿ ಹತ್ಯೆ ಮತ್ತು ಹಲ್ಲೆಗಳನ್ನು ತಡೆಗಟ್ಟಲು ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆಯ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧಕ (ಇವ ನಮ್ಮವ ಇವ ನಮ್ಮವ) ೨೦೨೬ನ್ನು ವಿಧಾನಸಭೆಯಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಕಾನೂನು ಸಚಿವರ ಪರವಾಗಿ ಮಂಡಿಸಿದರು.
ಈ ಕಾಯ್ದೆಯಲ್ಲಿ ಮರ್ಯಾದೆ ಹೆಸರಿನಲ್ಲಿ ಹತ್ಯೆಯಾದರೆ ಭಾರತೀಯ ನ್ಯಾಯ ಸಮ್ಮಿತಿ ಅಡಿ ವಿಧಿಸಲಾದ ದಂಡನೆಗೆ ಬಾಧಕವಾಗದಂತೆ ಮರ್ಯಾದೆ ಹೆಸರಿನಲ್ಲಿ ದಂಪತಿ ಅಥವಾ ಅವರಲ್ಲಿ ಯಾರೊಬ್ಬರನ್ನೂ ಅಥವಾ ಯಾರೇ ವ್ಯಕ್ತಿಯನ್ನು ಯಾವುದೇ ರೀತಿಯ ಮೂಲಕ ಅವರ ಸಾವಿಗೆ ಕಾರಣರಾದ ಅಥವಾ ಸಾವಿಗೆ ಕಾರಣವಾಗುವ ಯಾವುದೇ ಅಂತಹ ಕೃತ್ಯವನ್ನು ಎಸಗಿದ ಯಾರೇ ವ್ಯಕ್ತಿಯು ಕನಿಷ್ಠ ಐದು ವರ್ಷಗಳ ಅವಧಿಯ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮರ್ಯಾದೆ ಹೆಸರಿನಲ್ಲಿ ದಂಪತಿ ಅಥವಾ ಅವರಲ್ಲಿ ಯಾರೊಬ್ಬರಿಗೂ ತೀವ್ರ ಗಾಯಗೊಳ್ಳಲು ಕಾರಣರಾದ ಯಾರೇ ವ್ಯಕ್ತಿಗೆ ಮೂರು ವರ್ಷಗಳಿಗೆ ಕಡಿಮೆ ಇಲ್ಲದ ಅವಧಿಯ ಜೈಲು ಶಿಕ್ಷೆ ಮತ್ತು ೩ ಲಕ್ಷ ರೂ.ಗಳವರೆಗೆ ಜುಲ್ಮಾನೆಯನ್ನು ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮರ್ಯಾದೆ ಹೆಸರಿನಲ್ಲಿ ದಂಪತಿ ಅಥವಾ ಅವರಲ್ಲಿ ಯಾರೊಬ್ಬರಿಗೂ ಸಣ್ಣ ಗಾಯವಾಗಲು ಕಾರಣರಾದ ಯಾರೇ ವ್ಯಕ್ತಿಗೆ ೨ ವರ್ಷಗಳಿಗೆ ಕಡಿಮೆ ಇಲ್ಲದೆ ಜೈಲು ಶಿಕ್ಷೆ ಮತ್ತು ೨ ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಸಭೆ ಸೇರುವ ಯಾರೇ ಸದಸ್ಯನನ್ನು ಒಳಗೊಂಡು ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳು ಮದುವೆ ಆಗುವ ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳು ಅಥವಾ ಅವರ ಯಾರೇ ಸಂಬಂಧಿಕರು ಅಥವಾ ಬೆಂಬಲಿಗರನ್ನು ಅಪರಾಧಿಕವಾಗಿ ಬೆದರಿಸಿದರೆ ಅಂತವಹವರಿಗೂ ಮೂರು ವರ್ಷಗಳಿಗೆ ಕಡಿಮೆ ಇಲ್ಲದ ಆದರೇ ಐದು ವರ್ಷಗಳಿಗೆ ವಿಸ್ತರಿಬಹುದಾದ ಅವಧಿಯ ಜೈಲು ಶಿಕ್ಷೆ ಮತ್ತು ೨ಲಕ್ಷ ರೂ. ಜುಲ್ಮಾನೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮರ್ಯಾದೆ ಹತ್ಯೆಯ ಹೆಸರಿನ ಅಪರಾಧಗಳು ಜಾಮೀನು ರಹಿತ ಅಪರಾಧಗಳು ಎಂದು ಈ ವಿಧೇಯಕದಲ್ಲಿ ಹೇಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯವು ನಿರಂತರವಾಗಿ ಅಂತರ್ಜಾತಿ ವಿವಾಹಗಳ ಮೂಲಕ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ತಮ್ಮ ಸಾಂವಿಧಾನಕ ಹಕ್ಕನ್ನು ಚಲಾಯಿಸುವವರ ವಿಶೇಷವಾಗಿ ಯುವ ವಯಸ್ಕರ ವಿರುದ್ಧ ಮರ್ಯಾದೆಗೇಡು ಹತ್ಯೆಗಳನ್ನು ಒಳಗೊಂಡಂತೆ ಕ್ರೂರ ಸ್ವರೂಪದ ಹಿಂಸಾಚಾರಗಳು ವ್ಯಕ್ತವಾಗುತ್ತಿರುವುದು ತಡೆಯಲು ಈ ಕಾಯ್ದೆಯ ಉದ್ದೇಶ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಕೊಲೆ, ಹಲ್ಲೆ ಮತ್ತು ಅಪರಾಧಿಕ ಬೆದರಿಸುವಿಕೆಯಂತಹ ಅಪರಾಧಗಳು ಭಾರತೀಯ ನ್ಯೂನ್ಯತೆ ಸಂಹಿತೆ ಅಡಿ ಶಿಕ್ಷಾರ್ಹವಾಗಿದ್ದರೂ ಈ ಉಪಬಂಧಗಳು ಜೀವಂತ ಹೆಣ್ಣು ಮಕ್ಕಳಿಗೆ ಮರಣ ಆಚರಣೆಗಳನ್ನು (ತಿಥಿ) ಮಾಡುವುದರಿಂದ ಕಾನೂನು ಬದ್ಧ ಪಿತ್ರಾರ್ಜಿತ ಹಕ್ಕುಗಳನ್ನು ನಿರಾಕರಿಸುವುದರಿಂದ ಸಾಮಾಜಿಕ ಬಹಿಷ್ಕಾರದಿಂದ ವಿಷ ಉಣಿಸುವ ಮೂಲಕ ಅಥವಾ ಇತರ ನಿಗೂಢ ವಿಧಾನಗಳ ಮೂಲಕ ಹಾನಿಯನ್ನುಂಟು ಮಾಡುವ ಕಪಟ ಪ್ರಯತ್ನಗಳಿಂದ ಪರಿಗಣಿಸಲಾದ ಜಾತಿ ಮರ್ಯಾದೆಯನ್ನು ಸಂರಕ್ಷಿಸುವ ನಿರ್ದಿಷ್ಟ ಉದ್ದೇಶ ಅಥವಾ ವ್ಯಾಪಕ ಶ್ರೇಣಿಯ ದಬ್ಬಾಳಿಕೆಯ ಅಭ್ಯಾಸಗಳನ್ನು ಸಮರ್ಪಕವಾಗಿ ಪರಿಗಣಿಸಲಾಗಿದೆ.
ಅಂತಹ ಕೃತ್ಯಗಳು ಭಾರತೀಯ ಸಂವಿಧಾನದ ೧೪, ೧೯ ಮತ್ತು ೨೧ನೇ ಅನುಚ್ಛೇದಗಳಡಿಯಲ್ಲಿ ಖಾತರಿಪಪಡಿಸುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲ ಜಾತಿ, ಶ್ರೇಣೀಕರಣ ನಿರ್ಮೂಲನೆ ಮಾಡುವ ಸಾಧನಾಗಿ ಅಂತರ್ಜಾತಿ ವಿವಾಹಗಳನ್ನು ಪ್ರತಿಪಾದಿಸಿದ್ದ ಶ್ರೀ ಬಸವಣ್ಣ ಮತ್ತು ಡಾ.ಬಿ. ಆರ್. ಅಂಬೇಡ್ಕರ್ ರವರಂತಹ ಸಮಾಜ ಸುಧಾಕರ ಯುಗ ಪ್ರವರ್ತಕರ ದೃಷ್ಟಿಕೋನವನ್ನು ದುರ್ಬಲಗೊಳಿಸುತ್ತವೆ ಹಾಗೂ ಇದರಿಂದ ಈಗಾಗಲೇ ಇರುವ ಕಾನೂನುಗಳ ಅಪಾಯದಲ್ಲಿರುವ ದಂಪತಿಗಳ ರಕ್ಷಣೆಗಾಗಿ ಪೂರ್ವಬಾವಿ ಕಾರ್ಯ ವ್ಯವಸ್ಥೆಗಳು ಕಡ್ಡಾಯ. ಪೊಲೀಸ್ ಹಸ್ತಕ್ಷೇಪದಲ್ಲಿ ತ್ವರಿತಗತಿ ನ್ಯಾಯಿಕ ತೀರ್ಪು ಮತ್ತು ಅನುವಂಶಿಕವಾದ ಅಂತಹ ನಾಗರಿಕ ಹಕ್ಕುಗಳ ಮರು ಸ್ಥಾಪನೆಯಲ್ಲಿ ಕೆಲವು ನ್ಯೂನ್ಯತೆಗಳನ್ನು ಹೊಂದಿರುತ್ತದೆ.
ಇದಕ್ಕೆಂದೆ ಮೀಸಲಾದ ಶಾಸನ ಇಲ್ಲವಾದರಿಂದ ದುಷ್ಕೃತ್ಯವನ್ನು ಎಸಗಿದವರು ಆಗಾಗ್ಗೆ ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದರಿಂದ ಮತ್ತು ಸಂತ್ರಸ್ತರು ಮತ್ತು ಬದುಕುಳಿದವರ ಅಸಮರ್ಪಕವಾದ ಪರಿಹಾರ ಹಾಗೂ ಪುನರ್ ವಸತಿಯನ್ನು ಪಡೆಯುತ್ತಿರುವುದರಿಂದ ಭಾರತದ ಮತ್ತು ಭಾರತದ ಸಂವಿಧಾನವು ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಯನ್ನು ಸುಭದ್ರಗೊಳಿಸುವ ಭಾತೃತ್ವದ ತತ್ವವನ್ನು ಪ್ರತಿಪಾದಿಸುತ್ತದೆ ಹಾಗೂ ಈ ತತ್ವ ಜಾತಿ ಆದಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡುವತ್ತ ಅಂತರ್ಜಾತಿ ವಿವಾಹನವನ್ನು ಮನ್ನಣೆ ಮತ್ತು ರಕ್ಷಣೆ ಮೂಲಕ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ಬಯಸುತ್ತದೆ.
ಆದ್ದರಿಂದ ವಿವಾಹದಲ್ಲಿ ಆಯ್ಕೆಯ ಸ್ವತಂತ್ರವನ್ನು ಉಪಬಂಧಿಸಲು ಮತ್ತು ಜಾತಿ ಆಧಾರಿತ ಅಪರಾಧಗಳನ್ನು ಪ್ರತಿಬಂಧಿಸಲು ಮತ್ತು ನಿಷೇಧಿಸಲು ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಅಂತರ್ಜಾತಿ ವಿವಾಹಕ್ಕೆ ಗೌರವ ನೀಡಲು ವೈಯುಕ್ತಿಕ ಆಯ್ಕೆಗಳಲ್ಲಿ ಬಲವಂತದ ಜಾತಿ ಆಧಾರಿತ ತಾರತಮ್ಯವನ್ನು ಪ್ರತಿಬಂಧಿಸಲು ಮತ್ತು ಅಂತರ್ಜಾತಿಯ ವಿವಾಹಗಳನ್ನು ವಿಧಿವತ್ತಾಗಿ ನೆರವೇರಿಸುವುದಕ್ಕೆ ಇವ ನಮ್ಮವ ಇವ ನಮ್ಮವ ವೇದಿಕೆ ರಚಿಸಲು ಶಾಸನ ರಚಿಸುವ ಅಗತ್ಯ ಎಂದು ಪರಿಗಣಿಸಿ ಈ ವಿಧೇಯಕವನ್ನು ರೂಪಿಸಲಾಗಿದೆ ಎಂದು ವಿಧೇಯಕದಲ್ಲಿ ಹೇಳಲಾಗಿದೆ.





























