Home ಜಿಲ್ಲೆ ಬೆಂಗಳೂರು ಎಲ್‌ಪಿಜಿ ಅಕ್ರಮ; ಕೈಕಟ್ಟಿ ಕುಳಿತ ಅಧಿಕಾರಿಗಳು

ಎಲ್‌ಪಿಜಿ ಅಕ್ರಮ; ಕೈಕಟ್ಟಿ ಕುಳಿತ ಅಧಿಕಾರಿಗಳು

ಕೋಲಾರ, ಮಾ,೧೬-ಕೋಲಾರ ಜಿಲ್ಲೆಯಲ್ಲಿ ಸಿಲಿಂಡರ್ ಎಲ್.ಪಿ.ಜಿ. ಅಕ್ರಮ ಮಾರಾಟವಾಗುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಆರೋಪಿಸುತ್ತಿದ್ದಾರೆ.


ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗಳಿಗೆ ರಿಫಿಲ್‌ಗಳನ್ನು ಮಾಡಿ ಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಧಂದೆ ನಡೆಸಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.


ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ , ಕಾನೂನು ತೂಕ ಮತ್ತು ಅಳತೆ ಇಲಾಖೆಗಳು ನಾಮಕಾವಸ್ಥೆಗೆ ದೊಡ್ಡ ಹೋಟೆಲ್‌ಗಳಿಗೆ ಭೇಟಿಯ ಶಾಸ್ತ್ರ ನಡೆಸಿದ್ದಾರೆ. ಅದರೆ ಭೇಟಿಯ ಶಾಸ್ತ್ರಕ್ಕೂ ಮುನ್ನ ಮೊದಲೇ ಮಾತುಕಡೆಗಳು ವ್ಯವಹಾರಗಳನ್ನು ಏಜೆನ್ಸಿಯವರಿಂದ ಕುದುರಿಸಿ ಕೊಂಡಿದ್ದು ಬಂದ ಪುಟ್ಟ ಹೋದ ಪುಟ್ಟ ಆಟವಾಡಿ ಪುಕ್ಕಟೆ ಪ್ರಚಾರ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.


ಐ.ಓ.ಸಿ. ಸಾರ್ವಜನಿಕರಿಗೆ ಸಿಲಿಂಡರ್ ಪೂರೈಕೆಯ ಅಭಾವದಿಂದಾಗಿ ಜಾರಿಗೆ ತರಬೇಕೆಂದಿದ್ದ ನಿಯಮಗಳನ್ನು ಅಧಿಕೃತವಾಗಿ ಜಾರಿ ಮಾಡುವ ೩-೪ ದಿನದ ಮುನ್ನವೇ ಏಜೆನ್ಸಿಯವರುಗಳು ದಾಸ್ತನುಗಳು ಇರುವ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳು ಏಜೆಸ್ಸಿಗಳ ಗೋದಾಮುಗಳಿಗೆ ಅಥಾವ ಏಜೆನ್ಸಿಗಳಿಗೆ ಭೇಟಿ ನೀಡಿ ಗೃಹ ಬಳಕೆದಾರರು ಹಾಗೂ ವಾಣಿಜ್ಯ ಬಳಕೆ ದಾರರಿಗೆ ಪ್ರತಿ ದಿನ ಎಷ್ಟು ಸಿಲಿಂಡರ್ ವಿತರಣೆಯಾಗುತ್ತಿದೆ. ಎಷ್ಟು ಬುಕ್ಕಿಂಗ್ ಅಗಿದೆ. ಡಿಲಿವರಿ ನೀಡಬೇಕಾಗಿರುವುದು ಎಷ್ಟು ಪ್ರತಿ ತಿಂಗಳು ನಡೆಸಲಾಗುತ್ತಿರುವ ವಹಿವಾಟುಗಳೇನೂ. ಇತರೆ ಯಾವೂದೇ ಮಾಹಿತಿಯನ್ನು ಪಡೆದು ಸಾರ್ವಜನಿಕರ ಗಮನಕ್ಕೆ ತರಾದೆ ಇರುವುದು ಅನುಮಾನಸ್ಪದವಾಗಿದೆ.


ಇದರ ಜೂತೆಗೆ ಸರ್ಕಾರದ ಬಿಸಿಯುಟ ಯೋಜನೆಗೆ ಪೂರೈಕೆ ಮಾಡಲಾಗುವ ಸಿಲಿಂಡರ್, ಉಜ್ವಲ ಯೋಜನೆಯಲ್ಲಿ ಪೂರೈಕೆ ಮಾಡುವ ಸಿಲಿಂಡರ್‌ಗಳು, ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಇಂದಿರಾ ಕ್ಯಾಂಟಿನ್ ಇತ್ಯಾದಿಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಸಿಲಿಂಡರ್‌ಗಳ ಕುರಿತು ಯಾವೂದೇ ವಿವರಗಳು ನೀಡದೆ ಗುಪ್ತವಾಗಿಟ್ಟು ಕೊಳ್ಳಲಾಗಿದೆ. ಇದರ ಜೂತೆಗೆ ಉಚಿತವಾಗಿ, ಸಬ್ಸಿಡಿ ದರದಲ್ಲಿ ಪೂರೈಕೆಯಾಗುವ ಹಲವಾರು ಯೋಜನೆಗಳಿವೆ.ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿ ಹಕ್ಕಿನಲ್ಲೂ ಯಾವೂದೇ ಮಾಹಿತಿಗಳು ನೀಡದೆ ಇರುವುದು ಸಾರ್ವಜನಿಕ ವಲಯದಲ್ಲಿ ಸಂಶಂiiಕ್ಕೀಡು ಮಾಡಿದೆ.


ಈಗಾಗಲೇ ಕೆ.ಜಿ.ಎಫ್. ಭಾಗದಲ್ಲಿರುವ ಏಜೆನ್ಸಿಯೊಂದರಲ್ಲಿ ಅಕ್ರಮವಾಗಿ ಎಲ್.ಪಿ.ಜಿ. ರಿಫಿಲ್ಲಿಂಗ್ ನಡೆಯುತ್ತಿರುವ ಪ್ರಕರಣ ಪತ್ತೆಯಾಗಿದೆ. ಅಡುಗೆ ಅನಿಲದ ಸಿಲಿಂಡರ್‌ನಿಂದ ವಾಣಿಜ್ಯ ಬಳಿಕೆಯ ಸಿಲಿಂಡರ್‌ಗಳಿಗೆ ಅಕ್ರಮವಾಗಿ ತುಂಬುವ ಮೂಲಕ ದುಬಾರಿ ಬೆಲೆಗಳಿಗೆ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಲಾಗಿದೆ ಅದರೆ ಕೋಲಾರದಲ್ಲಿ ಮಾತ್ರ ಕುಂಭಕರ್ಣ ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳಿಗೆ ಮಾಮುಲಿಗಳನ್ನು ನೀಡಿ ಅವರ ಪಂಚೇಂದ್ರಿಯಗಳನ್ನು ವಿಫಲಗೊಳಿಸಿದೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.


ದಾಸ್ತನು ಇದ್ದ ಗೃಹಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಣಿಜ್ಯ ಬಳಕೆಗೆ ದುಬಾರಿ ಬೆಲೆಗೆ ಹೋಟೆಲ್ ಉದ್ಯಮಿಗಳು ಸೇರಿದಂತೆ ಇತರೆ ವಾಣಿಜ್ಯ ಬಳಕೆಗೆ ನೀಡಲಾಗಿದೆ ಕೇಳಿದರೆ ಮೊದಲೇ ಬುಕ್ಕಿಂಗ್ ಅಗಿದೆ. ಎಲ್ಲವೂ ಆನ್ ಲೈನ್ ಬುಕ್ಕಿಂಗ್ ನಮ್ಮದೇನೂ ಇಲ್ಲ ಎನ್ನುತ್ತಾರೆ ಅದರೆ ಗ್ರಾಹಕರ ಹೆಸರಿನಲ್ಲಿಯೇ ಅಕ್ರಮವಾಗಿ ಬುಕ್ಕಿಂಗ್ ಮಾಡಿ ಅದನ್ನು ವಾಣಿಜ್ಯ ಬಳಕೆ ಮಾರಾಟ ಮಾಡುವ ಧಂದೆ ಮೊದಲಿನಿಂದಲೂ ನಡೆಯುತ್ತಿದೆ. ಇನ್ನು ಸರ್ಕಾರಕ್ಕೆ ಪೂರೈಕೆ ಮಾಡುವ ಸಹಾಯ ಧನದ ಸಿಲಿಂಡರ್‌ಗಳಲ್ಲೂ ಅಕ್ರಮಗಳು ನಡೆದಿದೆ. ಇದೆಲ್ಲಾವೂ ಉನ್ನತ ಮಟ್ಟದಲ್ಲಿ ನಡೆಯುವಂತ ಧಂದೆಯಾಗಿದೆ ಎನ್ನಲಾಗಿದೆ.


ಕೆಲವು ಸಣ್ಣಪುಟ್ಟ ಹೋಟೆಲ್‌ನವರು ಬಹಿರಂಗವಾಗಿಯೇ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಬಳಿಸುತ್ತಿದ್ದರು ಅಂಥಹ ಹೋಟೆಲ್‌ಗಳು ಮಾತ್ರ ಇಂದು ಬಂದ್ ಮಾಡಲಾಗಿದೆ. ತಳ್ಳುವ ಗಾಡಿಗಳಲ್ಲಿ ತಿಂಡಿಗಳು ಮಾಡುವ ಮಿನಿ ಹೋಟೆಲ್‌ಗಳು, ಮೊಬೈಲ್ ಕ್ಯಾಂಟಿನ್ ಶೇ ೨೦ ರಷ್ಟು ಗ್ಯಾಸ್ ಟ್ರಬಲ್ ನಿಂದಾಗಿ ಬಂದ್ ಅಗಿದೆ. ಅದರೆ ದೊಡ್ಡ ಮಟ್ಟದಲ್ಲಿ ಮಾತ್ರ ಯಾವ ಹೋಟೆಲ್‌ಗಳಿಗೊ ಗ್ಯಾಸ್ ಸಮಸ್ಯೆ ಇಲ್ಲವಾಗಿದೆ. ದರ ಹೆಚ್ಚಳದ ಜೂತೆಗೆ ಇನ್ನಷ್ಟು ದುಬಾರಿ ಬೆಲೆ ನೀಡಿದರೆ ಸಿಲಿಂಡರ್‌ಗಳು ಸಿಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ.


ಗೃಹ ಬಳಿಕೆಯ ಸಿಲಿಂಡರ್ ೬೦ ರೂ ವಾಣಿಜ್ಯ ಬಳಕೆಯ ಸಿಲಿಂಡರ್ ೧೧೫ ರೂ ಏರಿಕೆಯಾಗಿದೆ ಅಂದರೆ ಗೃಹ ಬಳಕೆಯ ಸಿಲಿಂಡರ್ ೮೫೫.೫೦ ರಿಂದ ೯೧೫.೫೦ ಕ್ಕೆ ಏರಿಕೆಯಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ೧೮೪೩ ರೂ ಇರುವುದು ೧೯೫೮ ರೂಗಳಿಗೆ ಏರಿಕೆಯಾಗಿದೆ. ಈ ಮೊದಲು ಖಾಸಗಿಯಾಗಿ ಒಂದು ಕೆ.ಜಿ. ಗ್ಯಾಸ್ ೯೦ ರೂಗಳಿಗೆ ಮಾರಾಟವಾಗುತ್ತಿತ್ತು ಇದೀಗ ೨೫೦ ರೂಗಳಿಗೆ ಅಗಿದೆ. ವಾಣಿಜ್ಯ ಬಳಕೆಯ ೧೯ ಕೆ.ಜಿ. ಸಿಲಿಂಡರ್‌ಗಳ ಬೆಲೆ ಕಾಳಸಂತೆಯಲ್ಲಿ ೫ ಸಾವಿರ ರೂಗಳಿಗೆ ಗೃಹ ಬಳಕೆಯ ಸಿಲಿಂಡರ್‌ಗಳು ೧೪ ಕೆ.ಜಿಯದು ೨ ಸಾವಿರ ರೂಗಳಿಗೆ ಮಾರಾಟವಾಗುತ್ತಿದೆ ಎಂಬ ದೂರುಗಳಿವೆ.


ಕೆಲವು ಖಾಸಗಿ ಸಂಸ್ಥೆಗಳು ಮೂರು ಪಟ್ಟು ಹಣ ವಸೂಲಿ ಮಾಡುತ್ತಿವೆ, ಹೊಟೇಲ್‌ಗಳು ಆಟೋ ಇನ್ನೀತರ ವಾಹನಗಳು ಚಾಲನೆಯಿಲ್ಲದೆ ಶೇ ೨೦ ರಷ್ಟು ಬಂದ್ ಅಗಿವೆ ಬೇರೆ ತಾಲ್ಲೂಕುಗಳಿಗಿಂತ ಕೋಲಾರದ ಜಿಲ್ಲಾ ಕೇಂದ್ರದಲ್ಲಿ ಅಡುಗೆಯ ಅನಿಲದ ಬೇಡಿಕೆಯ ಅಬ್ಬರ ಜೋರಾಗಿದೆ ಅದರೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಸಿಲಿಂಡರ್ ಬಗ್ಗೆ ಯಾವೂದೇ ಸಮಸ್ಯೆಗಳಿಲ್ಲವೆಂದು ಮಾದ್ಯಮಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪಿಸುತ್ತಿದ್ದಾರೆ.