Home ಜಿಲ್ಲೆ ಶಿಕ್ಷಣದ ಜೊತೆಗೆ ಸಂಸ್ಕಾರವು ಅಗತ್ಯ:ಡಾ.ಪ್ರಭುಗೌಡ

ಶಿಕ್ಷಣದ ಜೊತೆಗೆ ಸಂಸ್ಕಾರವು ಅಗತ್ಯ:ಡಾ.ಪ್ರಭುಗೌಡ

ತಾಳಿಕೋಟೆ:ಮಾ.10: ಶಿಕ್ಷಣವೆಂಬುದು ಯಾರೂ ಕಸಿದುಕೊಳ್ಳಲಾರದಂತಹ ಸಂಪತ್ತಾಗಿದೆ ಈ ಶಿಕ್ಷಣ ಸಂಪತ್ತು ಇದ್ದರೆ ಯಾರ ಆಸರೆಯೂ ಇಲ್ಲದೇ ಬಧುಕಿ ತೋರಿಸಬಹುದಾಗಿದೆ ಇಂದಿನ ಕಾಲದಲ್ಲಿ ಪಾಲಕರು ಶಿಕ್ಷಣಕ್ಕೆ ಒತ್ತು ನೀಡಿದಂತೆ ಮಕ್ಕಳಿಗೆ ಸಂಸ್ಕಾರವನ್ನು ನೀಡಬೇಕು ಇದರಿಂದ ತಂದೆ ತಾಯಿಯ ಮೇಲಿನ ಪ್ರೀತಿ ಪ್ರೇಮ ವಾತ್ಸಲ್ಯ ಕೊನೆಯವರೆಗೂ ಉಳಿದುಕೊಳ್ಳಲಿದೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಹೇಳಿದರು.
ಪಟ್ಟಣದ ರಿಲಾಯನ್ಸ್ ಏಜುಕೇಶನ್ ಸೋಸಾಯಿಟ ಅಡಿಯಲ್ಲಿ ನಡೆಯುತ್ತಿರುವ ರಿಲಾಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಆಯ್‍ಟಿಐ, ಪ್ಯಾರಾಮೇಡಿಕಲ್ ಕಾಲೇಜು, ಪಿಯುಸಿ ಮತ್ತು ಬಿಸಿಎ, ಬಿಎ ಪಧವಿ ಮಹಾ ವಿದ್ಯಾಲಯದ 33ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಶಿಕ್ಷಣವಂತರಿಂದಲೇ ಸಮಾಜಕ್ಕೆ ಕೆಡಕಾಗಬಾರದು ಆದರೆ ಸಂಸ್ಕಾರವಂತರಿಂದ ಎಂದಿಗೂ ಸಮಾಜಕ್ಕೆ ಕೆಡಕಾಗುವದಿಲ್ಲಾ ಜೀವನ ರೂಪಿಸುವ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವ ಕಾರ್ಯವಾಗಬೇಕೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಅವರು ಮಾತನಾಡಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ವಿಶ್ವಮಾನವ ಕಲ್ಪನೆ ಬೆಳೆಸಬೇಕಾಗಿದೆ ಅವರನ್ನು ಸಮಾಜದ ಒಳ್ಳೆಯ ಪ್ರಜೆ ಮತ್ತು ಜವಾಬ್ದಾರಿಯುತ ನಾಗರನ್ನಾಗಿ ರೂಪಿಸುವ ಜವಾಬ್ದಾರಿಯು ಶಿಕ್ಷಕರ ಮತ್ತು ಪಾಲಕರ ಮೇಲಿದೆ ದೇಶದ ಭವಿಷ್ಯ ರೂಪಿಸುವ ನಾಗರನ್ನಾಗಿಸಲು ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿರಿ ಎಂದರು.
ಇನ್ನೋರ್ವ ಕಾಂಗ್ರೇಸ್ ಯುವ ಮುಖಂಡ ಸುರೇಶಗೌಡ ನಾಡಗೌಡ(ಬಿಂಜಲಭಾವಿ) ಅವರು ಮಾತನಾಡಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಂತಾಗಬಾರದು ದೇಶದ ಭವಿಷ್ಯ ರೂಪಿಸುವ ಹೊಸ ಚೈತನ್ಯ ಸೃಷ್ಠಿಸುವ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯಬೇಕಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲ್‍ಅಹ್ಮದ ಖಾಜಿ ಸಾನಿದ್ಯ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಎ.ಎಸ್.ನಮಾಜಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಮಯದಲ್ಲಿ ಸುದೀರ್ಘ ಅವಧಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಜೀಲಾನಿ ಸಂಗಾಪೂರ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ, ಎಂ.ಆಯ್.ದೀಪ್ತಿ, ಆಯ್.ಎ.ಭಕ್ಷೀ, ಸೈಯದ ಖಾಜಿ, ಅಬ್ದುಲ್‍ರಜಾಕ ಮನಗೂಳಿ, ಐ.ಎ.ಜಮಾದಾರ, ವಿರೇಶ ಮೇಟಿ, ಡಾ.ಸಿರಾಜ ಬಳಿಗಾರ, ಅಬುಬಕರ ಲಾಹೋರಿ, ಶಪೀಕ್ ಇನಾಮದಾರ, ಬಂದಗಿಸಾಬ ವಠಾರ, ಬಾಲು ತಳವಾರ, ಸಿಆರ್‍ಸಿ ರಾಜು ವಿಜಾಪೂರ, ಜಾವೀದ ಏಕೀನ್, ಇಬ್ರಾಹಿಂ ಆಲಮೇಲ್, ಪ್ರಾಚಾರ್ಯ ಮೊಹ್ಮದ ಅಶ್ಪಾಕ, ಗುಲಾಮ ಡೋಣಿ, ಫಾರೂಖ ಬಿಳವಾರ, ಆರೀಫ ಕಂಕರವಾಲೆ, ಮೊಹ್ಮದ ಇಸಾಕ್, ಮೊದಲಾದವರು ಉಪಸ್ಥಿತರಿದ್ದರು.