Home ಜಿಲ್ಲೆ ರಾಷ್ಟ್ರೀಯ ಕಿರಿಯ ವೈದ್ಯರ ಐಎಂಎ ಸಮ್ಮೇಳನಕ್ಕೆ ಡಾ.ಕಾಗಲ್ಕರ್

ರಾಷ್ಟ್ರೀಯ ಕಿರಿಯ ವೈದ್ಯರ ಐಎಂಎ ಸಮ್ಮೇಳನಕ್ಕೆ ಡಾ.ಕಾಗಲ್ಕರ್

ವಿಜಯಪುರ :ಫೆ.೨೪: ರಾಷ್ಟ್ರೀಯ ಕಿರಿಯ ವೈದ್ಯರ ಐಎಂಎ ಸಮ್ಮೇಳನಕ್ಕೆ ವಿಶೇಷ ಅತಿಥಿ ಉಪನ್ಯಾಸಕರಾಗಿ ನಗರದ ಪ್ರಸಿದ್ಧ ಕಿಡ್ನಿ ತಜ್ಞರಾದ ಡಾಕ್ಟರ್ ಸುರೇಶ್ ಕಾಗಲ್ಕರ್ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಇತ್ತೀಚೆಗೆ ಪಶ್ಚಿಮ ವಲಯದ ರಾಷ್ಟ್ರಮಟ್ಟದ ಕಿರಿಯವೈದ್ಯರ ಐಎಂಎ ಸಮಾವೇಶ ಮುಂಬೈನ ಐಎಂಎ ಸಭಾಂಗಣದಲ್ಲಿ ವೈದ್ಯರ ಸಂದೇಶಗಳು ಕೃತಕ ಬುದ್ಧಿಮ ಮತ್ತಿಯಿಂದ ಇನ್ನಷ್ಟು ಆಳವಾಗಿ ವಿಷಯಗಳನ್ನು ಶಸ್ತ್ರ ಚಿಕಿತ್ಸೆಗಳನ್ನು ನೂತನ ವಿಧಾನದ ಮುಖಾಂತರ ಕಾರ್ಯ ಚಟುವಟಿಕೆ ಕುರಿತಾಗಿ ಡಾಕ್ಟರ್ ಸುರೇಶ್ ಅವರು ಉಪನ್ಯಾಸವನ್ನು ನೀಡಿದರು.
ಹಿರಿಯ ವೈದ್ಯರು, ಭಾರತೀಯ ವೈದ್ಯಕೀ ಯ ರಾಷ್ಟ್ರ ಅಧ್ಯಕ್ಷರಾದ ಡಾಕ್ಟರ್ ಅನಿಲ್ ನಾಯಕ್ , ಡಾಕ್ಟರ್ ಶರಬರಿ ದತ್ತ,ಡಾ. ಅಬುಲ್ ಹಸನ್ , ಡಾಕ್ಟರ್ ಜೈನ, ಡಾ ಶ್ರೀಜಿತ್ ಡಾಕ್ಟರ್ ಇಂದ್ರ ನಿಲ ದೇಶದ ವಿವಿಧ ಗಣ್ಯ ವೈದ್ಯರು ಭಾಗವಹಿಸಿದ್ದರು.