
ಕಮÀಲನಗರ : ಫೆ.೨೪:ತಾಲೂಕಿನ ಮದನೂರ್ ಗ್ರಾಮದಲ್ಲಿ ಶನಿವಾರ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ತಡೆಗಟ್ಟುವಿಕೆ ಹಾಗೂ ಲಾಲ ಬಹಾದ್ದೂರ್ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತ್ತು.
ಈ ಸಂದರ್ಭದಲ್ಲಿ ಕಮಲನಗರ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ತುಳಜಮ್ಮ ರೆಡ್ಡಿ ಮಾತನಾಡಿ ಲೈಂಗಿಕ ಸುರಕ್ಷತೆ ಕೊರತೆ ಮತ್ತು ರಕ್ತ ವರ್ಗಾವಣೆ ವೇಳೆ ಅನುಸರಿಸಬೇಕಾದ ಕ್ರಮಗಳ ನಿರ್ಲಕ್ಷದಿಂದ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಹದಿ ಹರೆಯದ ಯುವಕ ಮತ್ತು ಯುವತಿಯರಲ್ಲಿ ಕಾಣುವ ವಯೋಸಹಜ ಬಯಕೆ ನಿಯಂತ್ರಣ ಮತ್ತು ಸುರಕ್ಷತೆಯಿಂದ ರೋಗ ಬರದಂತೆ ತಡೆಗಟ್ಟಬಹುದಾಗಿದೆ. ಮಧುಮೇಹ ಮತ್ತು ರಕ್ತದೊತ್ತಡ ಯುವಕರಲ್ಲಿ ಹೆಚ್ಚು ಕಂಡು ಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಪ್ರಯೋಗಾಲಯದ ತಂತ್ರಜ್ಞರಾದ ವಿಕ್ರಮ, ಆಶಾ ಕಾರ್ಯಕರ್ತೆ ಪ್ರಿಯಾ, ರಾಹುಲ ಪಿಚರಟೆ ಮತ್ತು ಸಾರ್ವಜನಿಕರಿಗೆ ಬಿಪಿ ಮತ್ತು ಸುಗರ್ ಪರೀಕ್ಷೆ ನಡೆಸಲಾಯಿತ್ತು.ಸುಮಾರು ೮೧ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದು, ಪರೀಕ್ಷೆ ನಡೆಸಲಾಯಿತ್ತು.




























