
ಬೆಂಗಳೂರು: ಪೂರ್ವ ಪಾಲಿಕೆ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವಾರ್ಡ್-6ಕಲ್ಕರೆ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಬಿ.ಪ್ರಸಾದ್ ಆರಾಧ್ಯರವರು ಕೆಪಿಸಿಸಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಪ್ರಸಾದ್ ಆರಾಧ್ಯರವರು ನನ್ನ ರಾಜಕೀಯ ಗುರುಗಳಾದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮತ್ತು ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದೇನೆ.ಕಾಂಗ್ರೆಸ್ ಪಕ್ಷದ IಓಃಅWಈ ರಾಜ್ಯ ಯುವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಅನ್ಯ ಪಕ್ಷದಿಂದ ಬಂದಿವರಿಗೆ ಮನ್ನಣೆ ನೀಡಬೇಡಿ ಎಂದು ಸ್ಥಳೀಯ ಜನರ ಆಶಯವಾಗಿದೆ.ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಯುವಕರಿಗೆ ಆದ್ಯತೆ ನೀಡಿ ಎಂಬುದು ನಮ್ಮ ಮನವಿ.
ಕಲ್ಕರೆ ಕ್ಷೇತ್ರದ ನಾಗರಿಕರು, ಕಾರ್ಯಕರ್ತರು ಕಲ್ಕರೆ ವಾರ್ಡ್ ನಿಂದ ಸ್ಪರ್ಧಿಸಬೇಕು ಎಂಬ ಒತ್ತಾಯ ಮಣಿದು ನಾನು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದೇನೆ.
ಜನರು ತಾವು ಮುಂದೆ ಬಂದು ದೇಣಿಗೆ ನೀಡಿ ಅರ್ಜಿ ಸಲ್ಲಿಸಲು ಹೇಳಿದರು ಮತ್ತು ಚುನಾವಣೆಗೆ ನಿಲ್ಲಿ ನಿಮ್ಮ ಜೊತೆಯಲ್ಲಿ ಹಗಲಿರುಳು ಶ್ರಮಿಸುತ್ತೇವೆ ಎಂದು ಕಲ್ಕರೆ ಜನರು ಹೇಳಿರುವ ಮಾತು ನನ್ನ ಹೋರಾಟಕ್ಕೆ ಸ್ಪರ್ಧೆ ಮಾಡಲು ನನಗೆ ಹುಮಸ್ಸು ನೀಡಿದೆ ಎಂದು ಹೇಳಿದರು.





























