
ಹುಬ್ಬಳ್ಳಿ, ಫೆ3: ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಶಿರಸಿಯ ನಗರದ ಶಾಖೆಯ ವತಿಯಿಂದತ್ರಿದಶ ಸಂಭ್ರಮ’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಜನ ಮನ ರಂಜಿಸುವಲ್ಲಿ ಯಶಸ್ವಿಯಾಯಿತು. ಡಾ. ಸಹನಾ ಭಟ್ಟ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ನೂರಾರು ಚಿಣ್ಣರು ನೃತ್ಯ ಪ್ರದರ್ಶನ ನೀಡಿದರು.
ಹಿರಿಯ ಕಲಾವಿದರು ದುರ್ಗಾ ಸ್ತುತಿ, ಜಯದೇವ ಕವಿಯ ಕೃತಿ ಮುಂತಾದ ನೃತ್ಯಗಳನ್ನು ಅತ್ಯಂತ ಸುಂದರವಾಗಿ ಪ್ರಸ್ತುತ ಪಡಿಸಿದರು. ಸುಮಾರು ಐದು ಘಂಟೆಗಳ ಕಾಲ ಈ ಕಾರ್ಯಕ್ರಮ ಮೂಡಿಬಂತು.
ಉದ್ಯಮಿ ಪ್ರಕಾಶ್ ಹೆಗಡೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದುಷಿ ವೇದಶ್ರೀ ಹಾಗೂ ವಿದುಷಿ ಇಚ್ಚಿತಾ ಅವರಿಗೆ `ರವಿದಾತಾರ್ ಪ್ರತಿಭಾ ಪುರಸ್ಕಾರ’ ನೀಡಿ ಅಭಿನಂದನೆ ಸಲ್ಲಿಸಲಾಯಿತು. ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಹಾಗೂ ಲಕ್ಷ್ಮೀಪ್ರಭಾ ಭಟ್ ಪುತ್ತಿಗೆ ಉಪಸ್ಥಿತರಿದ್ದರು.




























