
ಕಲಬುರಗಿ,ಸೆ.30: ನಗರದ ಕನ್ನಡ ಭವನ ಕಲಬುರ್ಗಿಯಲ್ಲಿ ನಡೆದ ರಾಜ್ಯ ಕಬ್ಬು ಬೆಳೆಗಾರ ಸಂಘದ ಸಭೆಯಲ್ಲಿ
ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಸರ್ಕಾರಕ್ಕೆ ರೈತರ ಹಕ್ಕುಗಳನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು
ಸಭೆಯಲ್ಲಿ ಅತಿವೃಷ್ಟಿ ಮಳೆ ಹಾನಿ ಪರಿಹಾರದ ಎನ್ ಡಿ ಆರ್ ಎಫ್ ಹಾಗೂ ಎಸ್ ಟಿ ಆರ್ ಎಫ್ ಮಾನದಂಡ ಬದಲಾಯಿಸಬೇಕು ವೈಜ್ಞಾನಿಕವಾಗಿ ಅತಿವೃಷ್ಟಿ ಪರಿಹಾರ ನಿಗದಿಗೊಳಿಸಬೇಕು ಕಲ್ಯಾಣ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಮತ್ತು ಭೀಮಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡು ತಮ್ಮ ಜೀವನಕ್ಕೆ ಆಧಾರವಾಗಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಇವತ್ತು ರೈತ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಉಳಿಯಲು ರೈತನ ಕೃಷಿ ಉಳಿಯಲು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಉನ್ನತ ಮಠದ ಸಮಿತಿ ರಚಿಸಿ ಸಮೀಕ್ಷೆ ನಡೆಸಬೇಕು ಸಂಕಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು
ಈ ಸಂದರ್ಭದಲ್ಲಿ ಗೌರವಾಧ್ಯಕ್ಷಕರಬಸಪ್ಪ ಉಜರಾಜ್ಯ ಉಪಾಧ್ಯಕ್ಷಬಸವರಾಜ ಪಾಟೀಲ್ ಅಂಕಲಗಿ
ಜಿಲ್ಲಾಧ್ಯಕ್ಷರಮೇಶ್ ಎಸ್ ಹೂಗಾರ್,ರೇವಣಸಿದ್ದಯ್ಯ ಮಠ.ಶರಣು ಸಾಹುಕಾರ್ ಬಿಲ್ಲಾಡ,ನಾಗೇಂದ್ರ ದೇಶಮುಖ್, ಬಸವರಾಜು ವಾಳಿ.ಲಕ್ಷ್ಮಿ ಪುತ್ರ ಮನಮಿ ,ಭಾಗಣ್ಣ ಕುಂಬಾರ್, ಸಂಗಣ್ಣ ಜಿ ರೇಷ್ಮೆ ಶಿವರಾಜ್ ಪಾಟೀಲ್ ಗೊಣಗಿ,ವೀರಣ್ಣ ಗಂಗಣಿ,ಸಂತು ತೆನ್ನಳ್ಳಿ.ಧರ್ಮು ಮಾಂಗ್ .ರುಕ್ಮಿದ್ದೀನ್ ಸಾಬ್ ಮುಲ್ಲಾ
ಜಗದೀಶ್ ಕೆನಹಳ್ಳಿ ನಿಂಗಣ್ಣ ಕೆರಮ್ಗಿ ಇದ್ದರು