ಯಕ್ಷ ಧ್ರುವ ಪಟ್ಲ ಫೌಂಡೇಷನ್ ವಿಟ್ಲ ಘಟಕದ ಸಹಯೋಗದಲ್ಲಿ ೨೦೨೫ -೨೬ ನೇ ಸಾಲಿನ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಮತಿ ಭವಾನಿ ರೈ ಕೊಲ್ಯ ಅಧ್ಯಕ್ಷತೆಯಲ್ಲಿ ಯಕ್ಷ ಶಿಕ್ಷಣ ಯೋಜನಾ ನಿರ್ದೇಶಕರಾದ ಶ್ರೀವಾಸು ಐತಾಳ ದೀಪ ಬೆಳಗಿ ಮಕ್ಕಳ ಯಕ್ಷಯಾನಕ್ಕೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕರುಣಾಕರ ನಾಯ್ತೊಟ್ಟು,ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ರವಿಪ್ರಕಾಶ್ ವಿಟ್ಲ.
ಪಟ್ಲ ಫೌಂಡೇಶನ್ ವಿಟ್ಲ ಘಟಕದ ಗೌರವಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ವಿಟ್ಲ. ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕಾರ್ಯದರ್ಶಿಗಳಾದ ಡಾ. ಪೂವಪ್ಪ ಶೆಟ್ಟಿ ಅಳಿಕೆ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುಮತಿ ದೇಜಪ್ಪ, ವಿಟ್ಲ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಉಪಸ್ಥಿತರಿದ್ದರು. ಉದ್ಯಮಿ ಶ್ರೀ ದೇಜಪ್ಪ ಪೂಜಾರಿ ಯಕ್ಷ ಶಿಕ್ಷಕರಾದ ಶ್ರೀ ಓಂ ಪ್ರಕಾಶ್ ರವರನ್ನು ಗೌರವಿಸಿದರು.
ಪಟ್ಲ ಫೌಂಡೇಶನ್ ಸದಸ್ಯರಾದ ಶ್ರೀ ಕೊರಗಪ್ಪ ಶೆಟ್ಟಿ ಪಟ್ಲ, ಶ್ರೀ ಅರವಿಂದ ರೈ ಮೂರ್ಜೆಬೆಟ್ಟು, ಶ್ರೀ ಸಂಜೀವ ಪೂಜಾರಿ ಗಜಾನನ, ಯೋಗ ಶಿಕ್ಷಕರಾದ ಶ್ರೀ ಆನಂದ ಶೆಟ್ಟಿ ಅಳಿಕೆ, ಗುಣಶ್ರೀ ವಿದ್ಯಾಲಯ ಕುಂಡಡ್ಕ ಇದರ ಸಂಚಾಲಕರಾದ ಶ್ರೀ ವೇಣುಗೋಪಾಲ ಶೆಟ್ಟಿ ಮರುವಾಳ ವಿದ್ಯಾವರ್ಧಕ ಸಂಘದ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಶಾಲೆಯ ಎಲ್ಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ಶ್ರೀ ವಿಶ್ವನಾಥ ಗೌಡ ಸ್ವಾಗತಿಸಿದರು. ಶಿಕ್ಷಕರಾದ ಶ್ರೀ ವೆಂಕಟೇಶ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸುರೇಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕೊನೆಯಲ್ಲಿ ಯಕ್ಷ ಗುರುಗಳಾದ ಶ್ರೀ ಓಂ ಪ್ರಕಾಶ್ ವೀಳ್ಯ ಪಡೆದು ಯಕ್ಷ ತರಬೇತಿಯನ್ನು ಪ್ರಾರಂಭಿಸಿದರು.