ಪ್ರಗತಿ ಪರಿಶೀಲನಾ ಸಭೆ;ಅಧಿಕಾರಿಗಳಿಗೆ ಸಚಿವ ಬೈರತಿ ತರಾಟೆ

ಕೋಲಾರ,ಜು.೧- ಸರ್ಕಾರಿ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳ ಸೂಚನೆಗಳನ್ನು ನಿಯಮದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವಂತಾಗ ಬೇಕು ಎಂದು ಕೃಷಿ, ತೋಟಗಾರಿಕೆ ಹಾಗೂ ರೇಷ್ಮೇ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸೂಚಿಸಿದರು.
ಸರ್ಕಾರದ ಸೌಲಭ್ಯಗಳು ಜಾರಿಯಾಗಿರುವುದು ಅನುಷ್ಠನಕ್ಕೆ ತಂದಿರುವುದು ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಂಡು ವಿತರಿಸುವುದ ಎಲ್ಲಾವೂ ನೀವೆ ಮಾಡಿದರೆ ಜನಪ್ರತಿನಿಧಿಗಳ ಗಮನಕ್ಕೆ ಬರುವುದಾದರೂ ಹೇಗೆಂದು ಪ್ರಶ್ನಿಸಿದರು,


ಇದಕ್ಕೆ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮ್ಮದ್ ಧ್ವನಿಗೊಡಿಸಿ ಜನಪ್ರತಿಗಳಾದವರಿಗೆ ಜನ ಸಂರ್ಪಕದಲ್ಲಿ ಸೌಲಭ್ಯ ಪಡೆಯುವಂತ ಆರ್ಹ ಫಲಾನುಭವಿಗಳ ಬಗ್ಗೆ ಮಾಹಿತಿ ಇರುತ್ತದೆ ಎಂದು ಸಲಹೆ ನೀಡಿದರು,


ಶಾಸಕ ನಂಜೇಗೌಡರು ಸಚಿವರ ಮಾತನ್ನು ಸಮರ್ಥಿಸಿ ಕೊಂಡು ಅರ್ಜಿಗಳು ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾಗಿ ಬಂದಲ್ಲಿ ಹೇಗೆ ಆಯ್ಕೆ ಮಾಡುತ್ತೀರಿ. ಎಂದಾಗ ಶಾಸಕರಾದ ರೂಪ ಕಲಾ ಶಶಿಧರ್ ಅವರು ಜನಪ್ರತಿನಿಧಿಗಳು ಕುಂದು ಕೊರತೆ ಸಭೆಗಳಲ್ಲಿ ಫಲಾನುಭವಿಗಳನ್ನು ಗುರುತಿಸಿರುತ್ತಾರೆ ಹಾಗಾಗಿ ಅವರಿಗೆ ಆರ್ಹರಾದವರ ಬಗ್ಗೆ ಮಾಹಿತಿ ಇರುತ್ತದೆ ಎಂದು ಪ್ರತಿಪಾದಿಸಿದರು.


ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಅವರು ನನಗೆ ಸಭೆಗಳ ಬಗ್ಗೆಯೇ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ. ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸರ್ಕಾರದ ಶಿಷ್ಠಚಾರಗಳನ್ನು ಪಾಲನೆ ಮಾಡುತ್ತಿಲ್ಲ ಜನವರಿಯಲ್ಲಿ ಕಾರ್ಯಕ್ರಮವನ್ನು ತಿಳಿಸಿಲ್ಲ ಕರೆ ಮಾಡಿ ಪ್ರಶ್ನಿಸಿದರೆ ಉಡಾಫೆಯಾಗಿ ಉತ್ತರಿಸುತ್ತಾರೆ. ಇಲ್ಲವೇ ಕರೆಯನ್ನೆ ಸ್ವೀಕರಿಸುವುದಿಲ್ಲ ಎಂದು ಕಿಡಿ ಕಾರಿದರು.


ಕೊಡಲೇ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸಭೆಯ ಬಗ್ಗೆ ಮಾಹಿತಿ ನೀಡದಿರುವ ಕೆಟ್ಟ ಸಂಪ್ರಾದಯವಾಗಿದೆ ನಿಮಗೆ ಮೊಬೈಲ್ ಮೂಲಕ ಮಾಹಿತಿಯನ್ನು ತಿಳಿಸಲು ಏನು ಸಮಸ್ಯೆಯಾಗಿದೆ. ಇರುವುದು ೧೦-೧೨ ಜನಪ್ರತಿನಿಧಿಗಳಿಗೆ ಕರೆ ಮಾಡಿ ಮಾಹಿತಿ ನೀಡಲು ಅಗಲಿಲ್ಲ ಎಂದರೆ ಇನ್ನು ಎಷ್ಟು ಮಾತ್ರ ಕೆಲಸ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದು ಕೊಂಡು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ಸಭೆಗಳ ಮಾಹಿತಿಯನ್ನು ಮೊಬೈಲ್ ಮೂಲಕ ಕರೆ ಮಾಡಿ ತಿಳಿಸದಿದ್ದರೆ ಕ್ರಮ ಜರುಗಿಸಲಾಗುವುದು ಎಂದರು.


ಅದರೆ ಇದಕ್ಕೆ ಸಮಾದಾನ ಆಗದ ಶಾಸಕರು ಸರ್ಕಾರದ ಶಿಷ್ಟಚಾರಗಳ ಉಲ್ಲಂಘನೆಯನ್ನು ಸದನದಲ್ಲಿ ಹಕ್ಕುಚ್ಯೂತಿಯನ್ನು ಪ್ರಶ್ನಿಸುವುದಾಗಿ ಹೇಳಿದಾಗ ಸಚಿವರು ಹೋಗಲಿ ಬಿಡಿ ಈ ಭಾರಿ ಕ್ಷೆಮೆ ಕೇಳಿದ್ದಾರೆ ಮುಂದೆ ಈ ರೀತಿ ಮಾಡಿದರೆ ಕ್ರಮ ಜರುಗಿಸೋಣಾ ಎಂದು ಸಮಾಧಾನ ಪಡಿಸಿದರು,


ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಭೆಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಸಭೆಗೆ ನೀಡ ಬೇಕಾದ ಮಾಹಿತಿಯನ್ನು ಬಿಟ್ಟು ಬೇರೆ ಇಲಾಖೆಯ ಮಾಹಿತಿಯನ್ನು ನೀಡುತ್ತಿದ್ದಾರೆ. ಕಟ್ಟಡ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ನೀಡುತ್ತಾರೆ. ಶಿಕ್ಷಣದ ಪ್ರಗತಿ, ಫಲಿತಾಂಶದ ಅಭಿವೃದ್ದಿ ಎಷ್ಟು ಶಾಲೆಗಳು ಇದೆ. ಎಷ್ಟು ಮುಚ್ಚಿದೆ ಎಸ್.ಎಸ್.ಎಲ್.ಸಿ. ಫಲಿತಾಂಶ ಸರ್ಕಾರಿ ಶಾಲೆಯ ಮಕ್ಕಳು ಎಷ್ಟು ಖಾಸಗಿ ಶಾಲೆಯ ಮಕ್ಕಳು ಎಷ್ಟು ಅನುದಾನಿತ ಶಾಲಾ ಮಕ್ಕಳು ಎಷ್ಟು ಎಂಬ ಮಾಹಿತಿ ನೀಡಿ ನಿಮ್ಮ ಆಡಳಿತದ ಸಾಧನೆಯನ್ನು ತಿಳಿಸುವುದು ಬಿಟ್ಟು ಉಳಿದೆಲ್ಲಾ ಹೇಳುತ್ತಿದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತರಾಟೆಗೆ ತೆಗೆದು ಕೊಂಡಾಗ ಸಚಿವ ಬೈರತಿ ಸುರೇಶ್ ಸಹ ಇದಕ್ಕೆ ಧ್ವನಿಗೊಡಿಸಿದರು,


ಆಗಾ ಡಿ.ಡಿ.ಪಿ.ಐ. ಕೃಷ್ಣಮೂರ್ತಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೧೫,೫೮೬ ವಿದ್ಯಾರ್ಥಿಗಳ ಪೈಕಿ ೧೨,೭೫೬ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ ೬೮.೯೩ ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ಸರ್ಕಾರಿ ಶಾಲೆಯದ ಶೇ.೬೨, ಖಾಸಗಿ ಶಾಲೆ ೫೩,ಹಾಗೂ ಅನುದಾನ ಶಾಲೆ ೮೧ ರಷ್ಟು ಫಲಿತಾಂಶ ಗಳಿಸಿದೆ ಕಳೆದ ಬಾರಿಗಿಂತ ಈ ಭಾರಿ ಶೇ ೨೦ ರಷ್ಟು ಹೆಚ್ಚುವಾರಿ ಫಲಿತಾಂಶ ಬಂದಿದೆ ಎಂದು ವಿವರಿಸಿದರು.


ನಸ್ಸೀರ್ ಆಹಮದ್ ಅವರು ಮಾತನಾಡಿ ಎಷ್ಟು ಶಾಲೆಗಳಿಗೆ ಪ್ರಸಕ್ತ ಸಾಲಿನಲ್ಲಿ ಎಷ್ಟು ಶಾಲೆಗಳಿಗೆ ಅನುಮತಿ ನೀಡಲಾಗಿದೆ ಎಂದು ಪ್ರಶ್ನಿಸಿದಾಗ ೧೨ ಶಾಲೆಗಳಿಗೆ ನೀಡಲಾಗಿದೆ ಎಂದು ಡಿಡಿಪಿಐ ತಿಳಿಸಿದಾಗ ಶಾಲೆಗೆ ನಿಯಮಾನುಸಾರ ಮೂಲಭೂತ ಸೌಲಭ್ಯಗಳು ಇಲ್ಲದಿದ್ದರೂ ಸಹ ಅನುಮತಿ ನೀಡಲಾಗುತ್ತಿದೆ. ಶಾಲೆಗೆ ಅನುಮತಿ ಇಲ್ಲದಿದ್ದರೂ ದಾಖಲಾತಿ ಮಾಡಲಾಗುತ್ತಿದೆ ಮುಂದೆ ಆ ವಿದ್ಯಾರ್ಥಿಗಳ ಭವಿಷ್ಯವೇನೂ ಈಗಾಗಲೇ ನಿಮ್ಮ ಮೇಲೆ ಸಾಕಷ್ಟು ದೂರುಗಳು ಬಂದಿವೆ ಎಂದಾಗ ಇತರರು ಡಿಡಿಪಿಐ ವಿರುದ್ದ ದೂರಿನ ಸುರಿಮಳೆ ಸುರಿಸಿ ಈಗಾಗಲೇ ಶಿಕ್ಷಣ ಸಚಿವರಿಗೂ ದೂರು ನೀಡಲಾಗಿದೆ ಎಂದಾಗ ಸಚಿವ ಬೈರತಿ ಸುರೇಶ್ ಅವರು ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸಲು ಸೂಚಿಸಿದರು,