
ಲಕ್ಷ್ಮೇಶ್ವರ,ಜೂ25: ಕೈಗಾ ಇಳಕಲ್ ರಾಜ್ಯ ಹೆದ್ದಾರಿಯ ಗೊಜನೂರು ಸಮೀಪ ಒಣಗಿ ನಿಂತ ಮರ ಯಾರ ಬಲಿಗಾಗಿ ಕಾದಿದೆಯೋ ಎಂಬ ಭೀತಿ ಈ ರಸ್ತೆಯ ಮೇಲೆ ಅಡ್ಡಾಡುವ ಪ್ರಯಾಣಿಕರನ್ನು ಕಾಡುತ್ತಿದೆ.
ಕೈಗಾ ಇಳಕಲ್ ರಾಜ್ಯ ಹೆದ್ದಾರಿಯ ಮೇಲೆ ಪ್ರತಿನಿತ್ಯ ಹಗಲು-ರಾತ್ರಿ ಸಾವಿರಾರು ವಾಹನಗಳು ಚಲಿಸುತ್ತಿರುತ್ತವೆ ರಸ್ತೆಯ ಪಕ್ಕದಲ್ಲಿಯೇ ಯಾರನ್ನು ಬಲಿ ಪಡೆಯುತ್ತದೆಯೋ ಎಂಬ ಭೀತಿಯಲ್ಲಿಯೇ ವಾಹನ ಸವಾರರು ಸಂಚರಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಅರಣ್ಯ ಇಲಾಖೆಯ ಅಧಿಕಾರಿಗಳಾಗಲಿ ರಸ್ತೆಯ ಪಕ್ಕ ಇರುವ ಒಣಗಿರುವ ಮರಗಳನ್ನು ಕೂಡಲೇ ತೆಗೆಯಬೇಕು ಎಂಬುದು ನಾಗರಿಕರ ಬೇಡಿಕೆಯಾಗಿದೆ.
ಬೆಂಗಳೂರಿನಲ್ಲಿ ಸ್ಕೂಟರ್ ಮೇಲೆ ಹೊರಟಿದ್ದ ಸವಾರನ ಮೇಲೆ ಮರದ ಕೊಂಬೆ ಬಿದ್ದು ಮೂರ್ನಾಲ್ಕು ದಿನಗಳ ಸಾವು ಬದುಕಿನ ಮಧ್ಯ ಹೋರಾಡಿ ಕೊನೆಗೆ ಸಾವನ್ನಪ್ಪಿದ ಕರಾಳ ನೆನಪು ಜನರಲ್ಲಿದೆ ಅದೇ ರೀತಿ ಯಾವುದೇ ಅನಾಹುತಗಳು ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲೂಕ ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖ ಒತ್ತಾಯಿಸಿದ್ದಾರೆ.