ಸಮಸಮಾಜ ಸಾಹಿತ್ಯದ ಹರಿಕಾರ ಕುವೆಂಪು

ಬಾದಾಮಿ,ಜೂ13: ಕುವೆಂಪು ಅವರ ಆರಂಭಿಕ ಕಾವ್ಯದಿಂದ ವಿಶ್ವಮಾನವನ ಸಂದೇಶದವರೆಗೆ ಅಧ್ಯಯನ ಅಲ್ಲಿ ಮಾಡಿದಾಗ 12ನೇ ಶತಮಾನದ ಸ್ತು ಶರಣರು ಬರೆದ ಸಮಸಮಾಜದ ಸಾಹಿತ್ಯದಂತೆ ರಾಷ್ಟ್ರಕವಿ ನ ಕುವೆಂಪು ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು’ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಶಾಂತ ನಾಯಕ ಹೇಳಿದರು.


ಅವರು ಪಟ್ಟಣದ ಶ್ರೀ ಮದ್ವೀರಶೈವಶಿವಯೋಗಮಂದಿರ ಸಂಸ್ಥೆಯ ಶಿವಯೋಗಮಂದಿರ ಸೇವಾ ಬಳಗದಿಂದ ಶಿವಯೋಗಮಂದಿರ ಶಾಖಾಮಠದ ಆವರಣದಲ್ಲಿ ದಲ್ಲಿ ‘ಕುವೆಂಪು ಮತ್ತು ವೈಚಾರಿಕತೆ’ ಬಗ್ಗೆ ಉಪನ್ಯಾಸ ನೀಡಿ, ಮಾತನಾಡಿದರು.


‘ರಾಮಾಯಣ ವಾಲ್ಮೀಕಿ ಸೇರಿದಂತೆ ಅನೇಕ ಕವಿಗಳು, ಋಷಿಗಳು ಬರೆದಿದ್ದಾರೆ. ಆದರೆ ರಾಮಾಯಣ ದರ್ಶನದಲ್ಲಿ ಕುವೆಂಪು ಅವರು ಬರೆದಿರುವುದು ಬೇರೆಯಾಗಿದೆ. ಇಲ್ಲಿ ಬರುವ ರಾವಣ ಮತ್ತು ಮಂಥರೆ ವ್ಯಕ್ತಿಗಳಲ್ಲಿ ಶ್ರೇಷ್ಠ ಗುಣ ಬಣ್ಣಿಸಿದ್ದಾರೆ’ ಎಂದರು.


‘ಹಿಂದಿನ ಕೃತಿಕಾರರು ರಾವಣ ಮತ್ತು ಮಂಥರೆ ಕೆಟ್ಟ ಗುಣಗಳನ್ನು ಬರೆದಿದ್ದಾರೆ. ಅದು ಆ ಕಾಲದ ಕವಿಗಳು ಭಾವಿಸಿದ್ದಿರಬಹುದು. ಈಗ ಏಕೆ ಬದಲಾಗಬಾರದು ಎಂದು ಕುವೆಂಪು ಈ ಪಾತ್ರಗಳ ಗುಣಗಳನ್ನು ಬಣ್ಣಿಸಿದ್ದಾರೆ’ ಎಂದು ತಿಳಿಸಿದರು.


‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಕಥೆ, ಕಾವ್ಯ, ನಾಟಕ, ಕಾದಂಬರಿ, ಮಹಾಕಾವ್ಯ ಮತ್ತು ಖಂಡಕಾವ್ಯಗಳನ್ನು ಬರೆದು ಕನ್ನಡದ ಹೆಮ್ಮೆಯ ಸಾಂಸ್ಕøತಿಕ ಮತ್ತು ದಾರ್ಶನಿಕ ಕವಿಯಾಗಿದ್ದರು’ ಎಂದು ಹೇಳಿದರು. ನಮ್ಮೊಳಗಿರುವ ಸತ್ಯಗಳಿಗೆ ಮುಖಾಮುಖಿಯಾಗಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಈ ನೆಲದಲ್ಲಿ ಜನಿಸಿದ ಕುಂವೆಂಪು ಅವರು ಮಾನವ ವಿಶ್ವಮಾನವನಾಗಬೇಕೆಂಬ ಸಂದೇಶವು ವಿಶ್ವದ ಮನುಕುಲಕ್ಕೆ ಸಂದೇಶವಾಗಿದೆ ಎಂದು ಸಾನ್ನಿಧ್ಯ ವಹಿಸಿದ್ದ ಶರಣಬಸವ ಸ್ವಾಮೀಜಿ ತಿಳಿಸಿದರು. ಸಾಹಿತ್ಯ ಆಸಕ್ತರು, ಶಿವಯೋಗಮಂದಿರ ಸೇವಾ ಬಳಗದ ಸದಸ್ಯರು ಪಾಲ್ಗೊಂಡಿದ್ದರು.